ಮತ್ತೊಂದು ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು?

Ajit Kumar car collection: ನಟ ಅಜಿತ್ ಕುಮಾರ್ ಸಿನಿಮಾ ನಟನಾಗಿರುವ ಜೊತೆಗೆ ಕಾರು ರೇಸರ್ ಸಹ. ಕಾರುಗಳ ಮೇಲೆ ವಿಪರೀತ ವ್ಯಾಮೋಹ ಹೊಂದಿರುವ ಅಜಿತ್ ಕುಮಾರ್ ಅವರು ಈಗಾಗಲೇ ವಿಶ್ವದ ಅತ್ಯುತ್ತಮ ಬ್ರ್ಯಾಂಡಿನ ಕಾರುಗಳನ್ನು ಖರೀದಿಸಿ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ. ಇದೀಗ ಅಜಿತ್ ಕುಮಾರ್ ಅವರು ಮತ್ತೊಂದು ಬಲು ಶಕ್ತಿಯುತ ಮತ್ತು ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನ ಬೆಲೆ ಎಷ್ಟು? ಮಾಹಿತಿ ಇಲ್ಲಿದೆ...

ಮತ್ತೊಂದು ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು?
Ajit Kumar

Updated on: Aug 28, 2025 | 11:34 AM

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajit Kumar) ಅವರಿಗೆ ಸಿನಿಮಾ ಪ್ರವೃತ್ತಿಯಾಗಿದೆ, ವೃತ್ತಿ ರೇಸಿಂಗ್ ಆಗಿದೆ. ಕಳೆದ ಕೆಲ ವರ್ಷಗಳಲ್ಲಿ ಅಜಿತ್ ಅವರು ಸಿನಿಮಾ ಸೆಟ್​​ಗಿಂತಲೂ ಹೆಚ್ಚು ರೇಸಿಂಗ್ ಟ್ರ್ಯಾಕ್ ಮೇಲೆ ಹೆಚ್ಚು ಸಮಯ ಕಳೆದಿದ್ದಾರೆ. ರೇಸಿಂಗ್ ಅನ್ನೇ ವೃತ್ತಿಯಾಗಿರುವ ಸ್ವೀಕರಿಸಿರುವ ಅಜಿತ್ ಅವರು ಅಜಿತ್ ಕಾರ್ ರೇಸಿಂಗ್ ಹೆಸರಿನ ತಂಡವೊಂದನ್ನು ಕಟ್ಟಿಕೊಂಡು ವಿಶ್ವದ ನಾನಾ ದೇಶಗಳಲ್ಲಿ ಕಾರು ರೇಸಿಂಗ್​​ನಲ್ಲಿ ಭಾಗಿ ಆಗುತ್ತಿದ್ದಾರೆ. ಕಾರುಗಳ ಮೇಲೆ ಅಪಾರ ಪ್ರೀತಿಯುಳ್ಳ ಅಜಿತ್ ಅವರು ಹಲವು ಅತ್ಯುತ್ತಮ ಕಾರುಗಳನ್ನು ಖರೀದಿಸಿದ್ದಾರೆ. ಇದೀಗ ಹೊಸದೊಂದು ಕಾರನ್ನು ಅಜಿತ್ ಖರೀದಿ ಮಾಡಿದ್ದಾರೆ.

ಅಜಿತ್ ಬಳಿ ಈಗಾಗಲೇ ಸುಮಾರು ಹತ್ತಕ್ಕೂ ಹೆಚ್ಚು ವಿಶ್ವದ ಅತ್ಯುತ್ತಮ ಕಾರುಗಳಿವೆ. ಲ್ಯಾಂಬೊರ್ಗಿನಿ ಜಿಟಿ, ಮೆಕ್​ಲ್ಯಾರನ್ ಸೆನ್ನಾ, ಫೆರಾರಿ ಎಸ್​​ಎಫ್90, ಪೋರ್ಶೆ ಗಿಟಿ3 ಆರ್​ಎಸ್, ಬಿಎಂಡಬ್ಲು 740 ಎಲ್​​ಐ, ಮರ್ಸಿಡೀಸ್ ಬೆಂಜ್ 350 ಜಿಎಲ್​ಎಸ್, ಫೆರಾರಿ 458 ಇಟಾಲಿಯಾ, ಹೋಂಡಾ ಅಕಾರ್ಡ್ ವಿ6 ಸೇರಿದಂತೆ ಇನ್ನೂ ಕೆಲವು ವಿಶ್ವದ ಬಲು ವೇಗದ ಮತ್ತು ಅತ್ಯಾಧುನಿಕ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡ ಬಲು ದುಬಾರಿ ಕಾರುಗಳು ಇವೆ. ಇದೀಗ ಈ ಕಾರು ಸಂಗ್ರಹಕ್ಕೆ ಮತ್ತೊಂದು ಕಾರನ್ನು ಅಜಿತ್ ಸೇರ್ಪಡೆಗೊಳಿಸಿದ್ದಾರೆ.

ಅಜಿತ್ ಅವರ ಕಲೆಕ್ಷನ್​​ನಲ್ಲಿ ಫೋರ್ಡ್ ಸಂಸ್ಥೆಯ ಕಾರು ಇರಲಿಲ್ಲ. ಇದೀಗ ಫೋರ್ಡ್ ಕಂಪೆನಿಯ ಪಿಕಪ್ ಟ್ರಕ್ ಒಂದನ್ನು ಖರೀದಿ ಮಾಡಿದ್ದಾರೆ ಅಜಿತ್. ಫೋರ್ಡ್ ಎಫ್​150 ಪಿಕಪ್ ಟ್ರಕ್ ಮಾದರಿ ಕಾರನ್ನು ಅಜಿತ್ ಖರೀದಿ ಮಾಡಿದ್ದಾರೆ. ಈ ಕಾರು ತಮ್ಮ ಮಾಚೋ ಲುಕ್​​ನ ಜೊತೆಗೆ ತಮ್ಮ ಶಕ್ತಿ ಮತ್ತು ಸಾಮರ್ಥ್ಯದಿಂದ ಹೆಸರು ಮಾಡಿದೆ. ಅತ್ಯಂತ ಶಕ್ತಿಯುತ ಕಾರುಗಳಲ್ಲಿ ಇದು ಸಹ ಒಂದಾಗಿದೆ.

ಇದನ್ನೂ ಓದಿ:ರೇಸರ್ ಜೀವನ: ಅಜಿತ್ ಕುಮಾರ್ ಹೊಸ ವಿಡಿಯೋ

ಇಸುಜು, ಟೊಯೊಟಾ ಹೈಲಕ್ಸ್ ಮಾದರಿಯಲ್ಲಿಯೇ ಇರುವ ಫೋರ್ಡ್ ಕಂಪೆನಿಯ ಪಿಕಪ್ ಟ್ರಕ್ ಇದಾಗಿದ್ದು, ಈ ಪಿಕಪ್ ಟ್ರಕ್​​ನಲ್ಲಿ ಐದು ಜನ ಕೂರುವ ಜೊತೆಗೆ ಹಿಂದೆ ಟನ್​ಗಟ್ಟಲೆ ಭಾರವನ್ನು ಹೊತ್ತು ಸಾಗಿಸಬಹುದು. ಈ ಕಾರು 3500 ಸಿಸಿ ಒಳಗೊಂಡಿದ್ದು, ಸುಮಾರು 300 ಬಿಎಚ್​​ಪಿ ಶಕ್ತಿಯನ್ನು ಪ್ರೊಡ್ಯೂಸ್ ಮಾಡುತ್ತದೆ. 87 ಲೀಟರ್​ಗಳು ಬೃಹತ್ ಇಂಧನ ಟ್ಯಾಂಕ್ ಈ ಕಾರಿಗೆ ಇದೆ. ಈ ಕಾರಿಗೆ ಬರೋಬ್ಬರಿ 10 ಗೇರುಗಳಿವೆ. ರಸ್ತೆ ಮತ್ತು ಆಫ್​ ರೋಡಿಗೆ ಹೇಳಿ ಮಾಡಿಸಿದ ಕಾರು ಇದಾಗಿದೆ. ಈ ಕಾರಿನ ಬೆಲೆ ಭಾರತೀಯ ರೂಪಾಯಿಗಳಲ್ಲಿ 1.10 ಕೋಟಿ ರೂಪಾಯಿಗಳಾಗಲಿದೆ.

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಅಜಿತ್ ನಟಿಸಿದ್ದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಬಿಡುಗಡೆ ಆಗಿ ಸಾಧಾರಣ ಪ್ರದರ್ಶನ ಕಂಡಿತ್ತು. ಇದೀಗ ‘ಎಕೆ 67’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ