‘ಟಾಕ್ಸಿಕ್’ನಲ್ಲಿ ರೆಬೆಲ್ ‘ರೆಬೆಕಾ’: ಯಾರು ಈ ಸುಂದರಿ?

Toxic movie: ಯಶ್ ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ಭಾರತದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ನಲ್ಲಿ ನಾಯಕಿಯರ ದಂಡೇ ಇದೆ. ಈಗಾಗಲೇ ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಪಾತ್ರಗಳ ಪರಿಚಯ ಮಾಡಲಾಗಿದೆ. ಇದೀಗ ಮತ್ತೊಬ್ಬ ನಟಿಯ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಯಾರು ಆ ನಟಿ?

‘ಟಾಕ್ಸಿಕ್’ನಲ್ಲಿ ರೆಬೆಲ್ ‘ರೆಬೆಕಾ’: ಯಾರು ಈ ಸುಂದರಿ?
Tara Sutaria

Updated on: Jan 03, 2026 | 2:43 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಯಶ್ ನಟಿಸಿ, ಕತೆ ರಚಿಸಿ, ಸಹ ನಿರ್ಮಾಣವೂ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ನೀಡುವ ಗುಣಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ದೊಡ್ಡ ಕಲಾವಿದರ ದಂಡನ್ನೇ ಯಶ್ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಒಟ್ಟು ಮಾಡಿದ್ದಾರೆ. ಅದರಲ್ಲೂ ‘ಟಾಕ್ಸಿಕ್’ನಲ್ಲಿ ಸುಂದರಿಯರ ದಂಡೇ ಇದೆ. ಈಗಾಗಲೇ ನಯನತಾರಾ, ಹುಮಾ ಖುರೇಷಿ ಮತ್ತು ಕಿಯಾರಾ ಅಡ್ವಾಣಿ ಅವರುಗಳ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದೀಗ ಮತ್ತೊಬ್ಬ ಸುಂದರಿಯ ಪೋಸ್ಟರ್ ಹಂಚಿಕೊಂಡಿದೆ.

ಯಶ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ, ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಲೇಡಿ ಪಾತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ಸಖತ್ ರೆಬೆಲ್ ಆಗಿ ಕಾಣುತ್ತಿದೆ ಈ ಪಾತ್ರ. ಪಾತ್ರದ ಹೆಸರು ರೆಬೆಕಾ. ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿ ತಾರಾ ಸುತಾರಿಯಾ ರೆಬೆಕಾ ಪಾತ್ರದಲ್ಲಿ ಮಿಂಚಿದ್ದಾರೆ. ಈಗ ಅವರ ಪೋಸ್ಟರ್​​ನಲ್ಲಿ ಅವರ ಹೇರ್​ ಸ್ಟೈಲ್ ಸಖತ್ ಗಮನ ಸೆಳೆಯುತ್ತಿದೆ. ಹಾಲಿವುಡ್ ನಟಿಯ ರೀತಿ ತಾರಾ ಸುತಾರಿಯಾ ಕಾಣುತ್ತಿದ್ದಾರೆ.

ಅಂದಹಾಗೆ ತಾರಾ ಸುತಾರಿಯಾ ಬಾಲಿವುಡ್ ನಟಿ. ಹಿಂದಿ ಸಿನಿಮಾಗಳನ್ನು ಬಿಟ್ಟರೆ ಪರ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಿಲ್ಲ. ‘ಟಾಕ್ಸಿಕ್’ ಅವರ ಮೊಟ್ಟ ಮೊದಲ ಪರಭಾಷೆ ಸಿನಿಮಾ. ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತಾರಾ ಸುತಾರಿಯಾ ‘ತಡಪ್’, ಟೈಗರ್​ ಶ್ರಾಫ್ ಜೊತೆಗೆ ‘ಹೀರೊಪಂತಿ 2’, ಅರ್ಜುನ್ ಕಪೂರ್ ಜೊತೆಗೆ ‘ಏಕ್ ವಿಲನ್ ರಿಟರ್ನ್ಸ್’ ಹಾಗೂ ‘ಅಪೂರ್ವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಟಾಕ್ಸಿಕ್’ ತಾರಾ ಸುತಾರಿಯಾ ಅವರ ಏಳನೇ ಸಿನಿಮಾ.

ಇದನ್ನೂ ಓದಿ:ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್

‘ಟಾಕ್ಸಿಕ್’ ಸಿನಿಮಾನಲ್ಲಿ ಒಟ್ಟು ಐದು ಮಂದಿ ನಾಯಕಿಯರಿದ್ದಾರೆ. ಲೇಡಿ ಸೂಪರ್​​ಸ್ಟಾರ್ ನಯನತಾರಾ ಅವರು ‘ಗಂಗ’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಹುಮಾ ಖುರೇಷಿ ಎಲಿಜೆಬೆತ್ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ನಾದಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೊಬ್ಬ ನಾಯಕಿ ರುಕ್ಮಿಣಿ ವಸಂತ್. ಆದರೆ ಅವರ ಪಾತ್ರದ ಪರಿಚಯವನ್ನು ಚಿತ್ರತಂಡ ಇನ್ನಷ್ಟೆ ಮಾಡಿಕೊಡಬೇಕಿದೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕನಾಗಿ ಯಶ್ ನಟಿಸಿರುವುದು ಮಾತ್ರವಲ್ಲದೆ ಸಿನಿಮಾದ ಕತೆ ಸಹ ರಚಿಸಿದ್ದಾರೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್​ಸ್ಟರ್ ಮೈಂಡ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಕನ್ನಡ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಜೊತೆಗೆ ಇಂಗ್ಲೀಷ್​​ನಲ್ಲಿಯೂ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ಈ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ