AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ನಟನೆಯ‘ಟಾಕ್ಸಿಕ್’ ಬಗ್ಗೆ ಅಪಪ್ರಚಾರ; ಇದರ ಹಿಂದಿದೆ ಬಾಲಿವುಡ್ ಕೈವಾಡ?

ಕೆಜಿಎಫ್ 2 ಬಳಿಕ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾದ ಬೆನ್ನಲ್ಲೇ ಅಪಪ್ರಚಾರ ಶುರುವಾಗಿದ್ದು, ಬಾಲಿವುಡ್‌ನ ಕೈವಾಡದ ಶಂಕೆ ವ್ಯಕ್ತವಾಗಿದೆ. ಯಶ್ ಬರ್ತ್‌ಡೇಗೆ ಟೀಸರ್ ಬರೋ ನಿರೀಕ್ಷೆ ಇದೆ. ಅಂದು, ಸಿನಿಮಾ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಯಶ್ ನಟನೆಯ‘ಟಾಕ್ಸಿಕ್’ ಬಗ್ಗೆ ಅಪಪ್ರಚಾರ; ಇದರ ಹಿಂದಿದೆ ಬಾಲಿವುಡ್ ಕೈವಾಡ?
ಟಾಕ್ಸಿಕ್-ಧುರಂದರ್ ಕ್ಲ್ಯಾಶ್
ರಾಜೇಶ್ ದುಗ್ಗುಮನೆ
|

Updated on: Jan 02, 2026 | 10:12 AM

Share

‘ಟಾಕ್ಸಿಕ್’ ಸಿನಿಮಾ (Toxic Movie) ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ‘ಕೆಜಿಎಫ್ 2’ ಬಳಿಕ ಯಶ್ ಕೈಗೆತ್ತಿಕೊಂಡ ಪ್ರಾಜೆಕ್ಟ್ ಇದಾಗಿದ್ದು, ನಿರೀಕ್ಷೆ ಹೆಚ್ಚಿದೆ. ಸದ್ಯ ‘ಟಾಕ್ಸಿಕ್’ ತಂಡದವರು ಒಂದೊಂದೇ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ. ಈ ಪೋಸ್ಟರ್ ನೋಡಿ ಕೆಲವರು ಸುಖಾ ಸುಮ್ಮನೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಬಾಲಿವುಡ್​ನ ಕೈವಾಡ ಇದೆಯೇ ಎಂಬ ಅನುಮಾನ ಮೂಡಿದೆ.

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರಕ್ಕೆ ಯಶ್ ಅವರು ಕೂಡ ಕಥೆ ಬರೆದಿದ್ದಾರೆ. ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂದು ಹೇಳಲಾಗುತ್ತಾ ಇದೆ. ಈ ಚಿತ್ರದ ಟೀಸರ್ ಯಶ್ ಬರ್ತ್​ಡೇ ದಿನ ರಿಲೀಸ್ ಆಗೋ ಸಾಧ್ಯತೆ ಇದೆ. ಇದಕ್ಕೂ ಮೊದಲು ಸಿನಿಮಾದ ವಿವಿಧ ಪೋಸ್ಟರ್ ಬಿಡುಗಡೆ ಮಾಡಲಾಗುತ್ತಿದೆ.

ಈ ಪೋಸ್ಟರ್​​ನ ಕೆಲವರು ಟೀಕಿಸುತ್ತಿದ್ದಾರೆ. ಇದರಲ್ಲಿ ಬಹುತೇಕರು ಬಾಲಿವುಡ್​​ನವರು ಎನ್ನಲಾಗಿದೆ. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಇದನ್ನು ದೊಡ್ಡ ಕ್ಲ್ಯಾಶ್ ಎಂದು ಕರೆಯಲಾಗುತ್ತಿದೆ. ‘ಟಾಕ್ಸಿಕ್’ ಬಗ್ಗೆ ನೆಗೆಟಿವ್ ಸುದ್ದಿ ಹಬ್ಬಿದರೆ ಅದು ‘ಧುರಂದರ್ 2’ ಚಿತ್ರಕ್ಕೆ ಸಹಕಾರಿ ಆಗಬಹುದು ಎಂಬ ಲೆಕ್ಕಾಚಾರ ಕೆಲವರು ಹಾಕಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್​​’ಗಾಗಿ ಗನ್ ಹಿಡಿದು ಬಂದ ನಯನತಾರಾ; ಸಖತ್ ಆಗಿದೆ ಗಂಗಾ ಫಸ್ಟ್​ ಲುಕ್

ಸಿನಿಮಾ ಉತ್ತಮವಾಗಿದ್ದರೆ ಎಷ್ಟೇ ನೆಗೆಟಿವ್ ಟ್ವೀಟ್​​ಗಳನ್ನು ಮಾಡಿದರೂ ಜನರು ನೋಡಿಯೇ ನೋಡುತ್ತಾರೆ. ಯಶ್ ಅವರು ಪ್ರತಿ ಸ್ಕ್ರಿಪ್ಟ್​​ನ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಅವರು ಒಂದು ಸಿನಿಮಾಗೋಸ್ಕರ ನಾಲ್ಕು ವರ್ಷ ಶ್ರಮ ಹಾಕಿದ್ದಾರೆ ಎಂದರೆ ಅದರಲ್ಲಿ ಏನೋ ಇದೆ ಎಂಬುದಂತೂ ಪಕ್ಕಾ. ಟೀಸರ್ ಹಾಗೂ ಟ್ರೇಲರ್ ರಿಲೀಸ್ ಆಗುವವರೆಗೆ ಕಾಯಬೇಕಾದ ಅನಿವಾರ್ಯತೆ ಇದೆ. ಇಷ್ಟು ಚೀಪ್​ ಗಿಮಿಕ್​​ನ ಯಾರೂ ಮಾಡಬಾರದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಯಶ್​​ಗೆ ದೊಡ್ಡ ಸಿನಿಮಾಗಳು ಸೆಡ್ಡು ಹೊಡೆದು ಸೋತಿದ್ದು ಹೊಸದೇನು ಅಲ್ಲ. ಈ ಮೊದಲು ‘ಕೆಜಿಎಫ್’ ಎದುರು ಶಾರುಖ್ ಸಿನಿಮಾ ರಿಲೀಸ್ ಆಗಿ ಹೀನಾಯವಾಗಿ ಸೋತಿತ್ತು. ‘ಕೆಜಿಎಫ್ 2’ ಎದುರು ಬಂದ ವಿಜಯ್ ಅಭಿನಯದ ‘ಬೀಸ್ಟ್’ ಕೂಡ ಮಕಾಡೆ ಮಲಗಿತ್ತು. ಈ ಎರಡೂ ಸಂದರ್ಭದಲ್ಲಿ ಯಶ್ ಚಿತ್ರವೇ ಸೋಲುತ್ತದೆ ಎಂಬ ಲೆಕ್ಕಾಚಾರ ಇತ್ತು. ಆದರೆ, ಈ ಲೆಕ್ಕಾಚಾರ ಉಲ್ಟಾ ಮಾಡಿದ್ದರು ಯಶ್. ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಕ್ಲ್ಯಾಶ್ ವಿಷಯದಲ್ಲೂ ಹಾಗೆಯೇ ಆಗಲಿದೆ ಎಂಬ ಮಾತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.