ಫ್ಲಾಫ್ಗಳ ಸರದಾರ ವಿಜಯ್ ದೇವರಕೊಂಡ, ಸಿನಿಮಾಕ್ಕೆ ಬ್ರೇಕ್ ಹಾಕಿದ ನಿರ್ಮಾಪಕ
Vijay Deverakonda: ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಸ್ಟಾರ್ ಯುವ ನಟ. ಆದರೆ ಅವರ ಸಿನಿಮಾ ಒಂದು ಹಿಟ್ ಆಗಿ ಆರು ವರ್ಷವಾಯ್ತು. ಸತತ ಫ್ಲಾಪ್ ಕಾರಣಕ್ಕಾಗಿ ವಿಜಯ್ ದೇವರಕೊಂಡ ಅವರ ಶುರು ಆಗಬೇಕಿದ್ದ ಸಿನಿಮಾ ಒಂದು ನಿಂತು ಹೋಗಿದೆ. ಆ ಮೂಲಕ ವಿಜಯ್ ಅವರ ನಾಲ್ಕನೇ ಸಿನಿಮಾ ಶುರು ಆಗುವ ಮುಂಚೆಯೇ ನಿಂತು ಹೋದಂತಾಗಿದೆ. ಯಾವುದು ಆ ಸಿನಿಮಾ?

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದಲ್ಲಿ ಕೇವಲ ಒಂದೇ ದೊಡ್ಡ ಹಿಟ್ ಸಿನಿಮಾ ಮೂಲಕ ಸ್ಟಾರ್ ನಟ ಎನಿಸಿಕೊಂಡರು. ‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಜೀವನವನ್ನೇ ಬದಲಾಯಿಸಿತು. ಅದಕ್ಕೆ ಮುನ್ನ ಕೆಲವು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದರಾದರೂ ಸ್ಟಾರ್ ಆಗಿದ್ದು ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ನಟಿಸಿದ ‘ಗೀತ ಗೋವಿಂದಂ’ ಸಹ ದೊಡ್ಡ ಹಿಟ್ ಆಯ್ತು. ಆದರೆ ಅದಾದ ಬಳಿಕ ವಿಜಯ್ ನಟನೆಯ ಯಾವೊಂದು ಸಿನಿಮಾ ಸಹ ಹಿಟ್ ಆಗಿದ್ದಿಲ್ಲ. ಈಗಂತೂ ಪರಸ್ಥಿತಿ ಹೇಗಾಗಿದೆಯಂದರೆ ವಿಜಯ್ ಜೊತೆಗೆ ಘೋಷಣೆ ಮಾಡಿದ್ದ ಸಿನಿಮಾ ಸಹ ನಿಂತು ಹೋಗುತ್ತಿವೆ.
ವಿಜಯ್ ದೇವರಕೊಂಡ ನಟಿಸಬೇಕಿದ್ದ ಇನ್ನೊಂದು ಸಿನಿಮಾ ಇದೀಗ ನಿಂತು ಹೋಗಿದೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ನಾಲ್ಕಕ್ಕೆ ಏರಿದೆ. ವಿಜಯ್ ದೇವರಕೊಂಡ, ‘ಕಿಂಗ್ಡಮ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಭಾರಿ ಪ್ರಚಾರ ಮಾಡಲಾಗಿತ್ತು, ಸಿನಿಮಾದ ನಿರ್ಮಾಣವೂ ಭಿನ್ನವಾಗಿತ್ತು. ಆದರೆ ‘ಕಿಂಗ್ಡಮ್’ ಸಿನಿಮಾ ಭಾರಿ ಫ್ಲಾಪ್ ಆಗಿತ್ತು. 130 ಕೋಟಿ ಬಜೆಟ್ನ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಕೇವಲ 80 ಕೋಟಿ ರೂಪಾಯಿ.
ಅಸಲಿಗೆ ‘ಕಿಂಗ್ಡಮ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಸೀಕ್ವಲ್ ಸಹ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ‘ಕಿಂಗ್ಡಮ್’ ಸಿನಿಮಾದ ಸೀಕ್ವೆಲ್ ನಿಂತು ಹೋಗಿದೆ. ನಿರ್ಮಾಪಕ ನಾಗವಂಶಿ, ತಾವು ‘ಕಿಂಗ್ಡಮ್’ ಸಿನಿಮಾದ ಸೀಕ್ವೆಲ್ ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ವಿಜಯ್ ನಟಿಸಬೇಕಿದ್ದ ನಾಲ್ಕನೇ ಸಿನಿಮಾ ನಿಂತು ಹೋಗಿದೆ.
ಇದನ್ನೂ ಓದಿ:ರೋಮ್ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್
ವಿಜಯ್ ಅವರು ‘ಹೀರೋ’ ಹೆಸರಿನ ಸಿನಿಮಾನಲ್ಲಿ ನಟಿಸಬೇಕಿತ್ತು ಆ ಸಿನಿಮಾ ನಿಂತು ಹೋಯ್ತು. ಬಳಿಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ‘ಜನ ಗನ ಮನ’ ಹೆಸರಿನ ಸಿನಿಮಾ ಘೋಷಿಸಿದ್ದರು, ಟೀಸರ್ ಸಹ ಬಿಡುಗಡೆ ಆಗಿತ್ತು. ಆದರೆ ‘ಲೈಗರ್’ ಫ್ಲಾಪ್ ಬಳಿಕ ಆ ಸಿನಿಮಾ ಸಹ ನಿಂತು ಹೋಯ್ತು. ನಿರ್ದೇಶಕ ಸುಕುಮಾರ್ ಅವರು ವಿಜಯ್ ದೇವರಕೊಂಡ ಗಾಗಿ ಸಿನಿಮಾ ನಿರ್ದೇಶಿಸುವುದಾಗಿ ಹೇಳಿದ್ದರು, ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡುವುದು ಸಹ ಖಾತ್ರಿ ಆಗಿತ್ತು. ಆದರೆ ಆ ಸಿನಿಮಾ ಸಹ ನಿಂತು ಹೋಯ್ತು. ಇದೀಗ ವಿಜಯ್ ನಟನೆಯ ಮತ್ತೊಂದು ಸಿನಿಮಾ ಸಹ ನಿಂತು ಹೋಗಿದೆ.
ವಿಜಯ್ ದೇವರಕೊಂಡ ಪ್ರಸ್ತುತ ‘ರೌಡಿ ಜನಾರ್ಧನ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಸಖತ್ ವೈಯಲೆಂಟ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬಳಿಕ ಹಲವು ವರ್ಷಗಳ ಬಳಿಕ ಮತ್ತೆ ರಶ್ಮಿಕಾ ಮಂದಣ್ಣ ಜೊತೆಗೆ ‘ಗೀತ ಗೋವಿಂದಂ 2’ ಸಿನಿಮಾನಲ್ಲಿ ವಿಜಯ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




