ರೀಲ್ಸ್ ಮಾಡಿ ನಗದು ಬಹುಮಾನ ಗೆಲ್ಲಿ; ‘ಕೊರಗಜ್ಜ’ ಚಿತ್ರತಂಡದಿಂದ ಆಫರ್
Koragajja Kannada movie: ಸಿನಿಮಾ ನೋಡಿ ಪ್ರಶ್ನೆಗೆ ಉತ್ತರಿಸಿದವರಿಗೆ ಬಹುಮಾನ ಎಂದೆಲ್ಲ ಹಿಂದೆ ಆಫರ್ಗಳನ್ನು ನೀಡಲಾಗುತ್ತಿತ್ತು. ಸಿನಿಮಾದ ಕ್ಯಾಸೆಟ್ ಖರೀದಿಸಿದವರಿಗೆ ಬಹುಮಾನ ನೀಡಲಾಗುತ್ತಿತ್ತು. ಈಗಲೂ ಆಗೊಮ್ಮೆ-ಈಗೊಮ್ಮೆ ಇಂಥಹಾ ಆಫರ್ಗಳನ್ನು ಚಿತ್ರತಂಡಗಳು ನೀಡುವುದುಂಟು. ಇದೀಗ ‘ಕೊರಗಜ್ಜ’ ಚಿತ್ರತಂಡ ಇಂಥಹುದೇ ಒಂದು ಆಫರ್ ನೀಡಿದೆ.

ಸಿನಿಮಾ (Cinema) ತಂಡಗಳು ಪ್ರೇಕ್ಷಕರನ್ನು ಸೆಳೆಯಲು ಏನೇನೋ ಕಸರತ್ತು ಮಾಡುತ್ತವೆ. ಭರ್ಜರಿ ಪ್ರಚಾರ, ಕಾಲೇಜುಗಳಿಗೆ ಭೇಟಿ, ನಟ-ನಟಿಯರು ಆಟೋ ಓಡಿಸುವುದು ಇನ್ನೂ ಏನೇನೋ, ಇವುಗಳಲ್ಲಿ ಬಹುಮಾನ ಘೋಷಣೆಯೂ ಒಂದು. ಸಿನಿಮಾ ನೋಡಿ ಪ್ರಶ್ನೆಗೆ ಉತ್ತರಿಸಿದವರಿಗೆ ಬಹುಮಾನ ಎಂದೆಲ್ಲ ಹಿಂದೆ ಆಫರ್ಗಳನ್ನು ನೀಡಲಾಗುತ್ತಿತ್ತು. ಸಿನಿಮಾದ ಕ್ಯಾಸೆಟ್ ಖರೀದಿಸಿದವರಿಗೆ ಬಹುಮಾನ ನೀಡಲಾಗುತ್ತಿತ್ತು. ಈಗಲೂ ಆಗೊಮ್ಮೆ-ಈಗೊಮ್ಮೆ ಇಂಥಹಾ ಆಫರ್ಗಳನ್ನು ಚಿತ್ರತಂಡಗಳು ನೀಡುವುದುಂಟು. ಇದೀಗ ‘ಕೊರಗಜ್ಜ’ ಚಿತ್ರತಂಡ ಇಂಥಹುದೇ ಒಂದು ಆಫರ್ ನೀಡಿದೆ.
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಹೊಟೆಲ್ ಹಾಲಿಡೇ ಇನ್ ನಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಬಿಗ್ ಎಫ್ ಎಮ್ 92.7 ಮತ್ತು ಇನ್ನೂ ಕೆಲವು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಹೊಸವರ್ಷಾರಂಭದ ವರ್ಣರಂಜಿತ ಕಾರ್ಯಕ್ರಮದ ನಡುವೆ ನೆರೆದ ಗಣ್ಯರ ಮತ್ತು ಪತ್ರಕರ್ತರ ಸಮ್ಮುಖದಲ್ಲ “ಸಾಂಗ್ಸ್ ಪ್ರೀಮಿಯರ್” ಎನ್ನುವ ವಿನೂತನ ಕಾರ್ಯಕ್ರಮದ ಮುಖಾಂತರ ಹಾಡು ಪ್ಲೇ ಮಾಡಲಾಯ್ತು.
‘ಕೊರಗಜ್ಜ’ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಂಡವರಿಗೆ ಕೋಟಿ ರೂಪಾಯಿ ಬಹುಮಾನದ ಆಫರ್ ಅನ್ನು ಸಹ ಚಿತ್ರತಂಡ ನೀಡಿದೆ. ಚೆನ್ನಾಗಿ ರೀಲ್ಸ್ ಮಾಡಿ ಹಂಚಿಕೊಂಡು, ಅದರಲ್ಲಿ ಚಿತ್ರತಂಡ ಆಯ್ಕೆ ಮಾಡಿದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆಯಂತೆ. ಹೀಗೆಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ:‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಒಂದು ವಾರಕ್ಕೆ ಗಳಿಸಿದ್ದು ಎಷ್ಟು?
‘ಕೊರಗಜ್ಜ’ ಸಿನಿಮಾದ ರೇಡಿಯೋ ಪಾರ್ಟರ್ನರ್ 92.7 ಬಿಗ್ ಎಫ್ ಎಮ್ ನ ದಕ್ಷಿಣ ಭಾರತದ ಮುಖ್ಯಸ್ಥ ವಿಶ್ವಾಸ್ ರವರು ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಾಡುಗಳನ್ನು ಆರ್ಜೆಗಳು, ಇತರೆ ಸಿಬ್ಬಂದಿ ಎಂಜಾಯ್ ಮಾಡಿದರು. ಈ ವೇಳೆ ಮಹಿಷಾಸುರ ಯಕ್ಷಗಾನ ತುಣುಕು ಸಹ ಪ್ರದರ್ಶನವಾಯ್ತು. ಸಾಂಗ್ಸ್ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಶರೋನ್ ಪ್ರಭಾಕರ್,ಹಿರಿಯ ನಟಿ ಭವ್ಯ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಕರ್ ಸಹ ಹಾಜರಿದ್ದರು.
ಹೆಸರೇ ಸೂಚಿಸುತ್ತಿರುವಂತೆ ‘ಕೊರಗಜ್ಜ’ ಸಿನಿಮಾ ದೈವದ ಕುರಿತಾದ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಿನಿಮಾವನ್ನು ಸುಧೀರ್ ಅತ್ತಾವರ ನಿರ್ದೇಶನ ಮಾಡಿದ್ದಾರೆ. ‘ತ್ರಿವಿಕ್ರಮ ಸಿನಿಮಾಸ್’ ಮತ್ತು ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಕೊರಗಜ್ಜ’ ಸಿನಿಮಾ ಮೂಡಿಬರುತ್ತಿದೆ. ‘ಕೊರಗಜ್ಜ’ ಸಿನಿಮಾ ಕನ್ನಡ ಮಾತ್ರವೇ ಅಲ್ಲದೆ ಇನ್ನೂ ಕೆಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




