‘GST ಪಾವತಿಸಿದ್ದೀರಾ?’ ಎಂದು ಕೆಬಿಸಿ ವೇದಿಕೆಯಲ್ಲೇ ಅಮಿತಾಭ್​ರನ್ನು ಪ್ರಶ್ನಿಸಿದ ಮಹಿಳಾ ಅಧಿಕಾರಿ; ಮುಂದೇನಾಯ್ತು?

| Updated By: shivaprasad.hs

Updated on: Sep 28, 2021 | 3:15 PM

ಕೆಬಿಸಿ13ರ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್​ ಅವರನ್ನು ಜಿಎಸ್​ಟಿ ಪಾವತಿಸಿದ್ದೀರಾ ಎಂದು ಮಹಿಳಾ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಮುಂದೇನಾಯ್ತು? ಕುತೂಹಲಕರ ಸಂದರ್ಭದ ಮಾಹಿತಿ ಇಲ್ಲಿದೆ.

‘GST ಪಾವತಿಸಿದ್ದೀರಾ?’ ಎಂದು ಕೆಬಿಸಿ ವೇದಿಕೆಯಲ್ಲೇ ಅಮಿತಾಭ್​ರನ್ನು ಪ್ರಶ್ನಿಸಿದ ಮಹಿಳಾ ಅಧಿಕಾರಿ; ಮುಂದೇನಾಯ್ತು?
ಅಮಿತಾಭ್ ಬಚ್ಚನ್
Follow us on

KBC 13: ಬಾಲಿವುಡ್​ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಬಹಳ ಮಜವಾಗಿ ಮೂಡಿಬರುತ್ತಿದೆ. ಇತ್ತೀಚಿನ ಎಪಿಸೋಡ್​ನಲ್ಲಿ ಅಮಿತಾಭ್​ ಬಚ್ಚನ್ ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದ್ದು, ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ. ಕೆಬಿಸಿಯ ಸಂಚಿಕೆಯೊಂದಕ್ಕೆ ಜಿಎಸ್​ಟಿ ಮಹಿಳಾ ಇನ್ಸ್ಪೆಕ್ಟರ್ ಸಂಧ್ಯಾ ಎಂಬುವವರು ಸ್ಪರ್ಧಿಯಾಗಿ ಬಂದಿದ್ದರು. ಅಲ್ಲಿ ಆಕೆ ಅಮಿತಾಭ್ ಬಳಿ ನೀವು ಸರಿಯಾಗಿ ಜಿಎಸ್​ಟಿ ಪಾವತಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಅಮಿತಾಭ್ ಕ್ಷಣಕಾಲ ಸ್ತಂಭೀಭೂತರಾಗಿದ್ದಾರೆ.

ಸ್ಪರ್ಧೆಯ ನಡುವೆ ಅಮಿತಾಭ್ ಮಹಿಳಾ ಅಧಿಕಾರಿಗೆ ‘ಸ್ಟೇಟ್ ಟ್ಯಾಕ್ಸ್ ಇನ್ಸ್ಪೆಕ್ಟರ್’ ಅಂದರೆ ಏನೆಂದು ವಿವರಿಸಿ ಎಂದು ಕೇಳಿದರು. ಆಗ ಮಹಿಳಾ ಅಧಿಕಾರಿಯು ಹಿಂದಿಯಲ್ಲಿ, ‘‘ಸರ್, ನಾನೊಬ್ಬಳು ಜಿಎಸ್​ಟಿ ಡಿಪಾರ್ಟ್​​ಮೆಂಟ್​ನಲ್ಲಿ ಸ್ಟೇಟ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿದ್ದೇನೆ. ನನ್ನ ಕೆಲಸ ಒಳ್ಳೆಯ ವ್ಯಕ್ತಿಗಳಿಗೆ ಸಹಾಯ ಮಾಡುವುದು ಮತ್ತು ಕೆಟ್ಟ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದು. ಸರಿಯಾಗಿ ತೆರಿಗೆ ಪಾವತಿಸುವವರಿಗೆ ಸಹಾಯ ಮಾಡುತ್ತೇನೆ; ಅಂತೆಯೇ ತೆರಿಗೆ ಕಟ್ಟದೇ ಕಪ್ಪು ಹಣ ಇಟ್ಟವರನ್ನು ಕಂಡುಹಿಡಿದು ಶಿಕ್ಷೆಯಾಗುವಂತೆ ಮಾಡುತ್ತೇವೆ’’ ಎಂದು ಆಕೆ ನುಡಿದಿದ್ದಾರೆ.

ಆಗ ಅಮಿತಾಭ್, ‘‘ಅಂದರೆ ನೀವು ಕೆಟ್ಟ ವ್ಯಕ್ತಿಗಳನ್ನು ಒಳ್ಳೆಯ ವ್ಯಕ್ತಿಗಳಾಗಿ ಬದಲಾಯಿಸುತ್ತೀರಿ ಎಂದಾಯಿತು… ಒಂದು ವೇಳೆ ಜಿಎಸ್​​ಟಿಯನ್ನು ಸರಿಯಾದ ಸಮಯಕ್ಕೆ ಕಟ್ಟದೇ ಇದ್ದರೆ, ಅವರಿಗೆ ದಂಡ ಹಾಕುತ್ತೀರಲ್ಲವೇ?’’ ಎಂದು ಪ್ರಶ್ನಿಸಿದ್ದಾರೆ. ಆಗ ಅವರು ಹೌದು ₹ 10,000ದ ವರೆಗೂ ದಂಡ ಹಾಕುತ್ತೇವೆ ಎಂದಿದ್ದಾರೆ. ತಕ್ಷಣ, ಅಮಿತಾಭ್​​ರಿಗೆ ಮರು ಪ್ರಶ್ನೆ ಮಾಡಿದ ಅಧಿಕಾರಿ, ‘‘ನೀವು ಜಿಎಸ್​ಟಿ ಕಟ್ಟಿದ್ದೀರಿ ತಾನೆ?’’ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅಮಿತಾಭ್ ಒಂದರೆ ಕ್ಷಣ ಸುಮ್ಮನೆ ಕುಳಿತಿದ್ದಾರೆ.

ನಂತರ ಬಿಗ್​ಬಿ ಮಹಿಳಾ ಅಧಿಕಾರಿಗೆ ಉತ್ತರ ನೀಡಿದ್ದಾರೆ. ‘‘ಮೇಡಮ್, ನಾನು ತೆರಿಗೆ ಕಟ್ಟದೇ ಇದ್ದಿದ್ದರೆ ನನ್ನನ್ನು ಇಲ್ಲಿ ಕೂರಲು ಬಿಡುತ್ತಿದ್ದರೇ? ನಿಮ್ಮಂಥ ಅಧಿಕಾರಿಗಳು ಹಿಡಿದು ನನ್ನನ್ನು ಕಂಬಿಯ ಹಿಂದೆ ದೂಡುತ್ತಿದ್ದರು’’ ಎಂದು ಅಮಿತಾಭ್ ನಕ್ಕಿದ್ದಾರೆ. ಈ ಅನಿರೀಕ್ಷಿತ ಪ್ರಶ್ನೋತ್ತರಕ್ಕೆ ಎಲ್ಲರೂ ಮನದುಂಬಿ ನಗಾಡಿದ್ದಾರೆ.

ಈ ಎಲ್ಲವುಗಳ ಹೊರತಾಗಿಯೂ ಸಂಧ್ಯಾ, ಸ್ಪರ್ಧೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಲಿಲ್ಲ. ₹ 40,000ದ ಪ್ರಶ್ನೆಗೆ ತಪ್ಪಾದ ಉತ್ತರ ನೀಡಿದ ಅವರು, ₹ 10,000ಕ್ಕೆ ಸ್ಪರ್ಧೆಯನ್ನು ಮುಗಿಸಿದರು.

ಇದನ್ನೂ ಓದಿ:

ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್​ ಡೇ; ಈಗಲಾದರೂ ಬರುತ್ತಾರಾ ಸಮಂತಾ?

‘ಲವ್​ ಮಾಕ್ಟೇಲ್’​ ನೋಡುವಂತೆ ರವಿ ಡಿ. ಚನ್ನಣ್ಣನವರ್​ಗೆ​ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?

(A contestant asked Amitabh that whether he paid GST and Amitabh went speechless at a moment)