
‘ಅಮೃತಧಾರೆ’ ಧಾರಾವಾಹಿಯಲ್ಲಿ (Serial) ಜಯದೇವ್ ದಿವಾನ್ ಪಾತ್ರದಲ್ಲಿ ರಾಣವ್ ಕಾಣಿಸಿಕೊಂಡಿದ್ದಾರೆ. ಈ ಮೊದಲು ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು. ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಪ್ರಮುಖ ವಿಲನ್. ಅಲ್ಲದೆ, ಜೀ ಪವರ್ನಲ್ಲಿ ಬರಲಿರೋ ಧಾರಾವಾಹಿಯಲ್ಲಿ ಹೀರೋ ಪಾತ್ರ ಮಾಡುತ್ತಿದ್ದಾರೆ. ಅವರು ತಮ್ಮ ಕಷ್ಟದ ದಿನಗಳ ಬಗ್ಗೆ, ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಜಯದೇವ್ ಅವರು ಕಥಾ ನಾಯಕ ಗೌತಮ್ ದಿವಾನ್ ಸಹೋದರ. ಆತ ತಾಯಿ ಶಕುಂತಲಾ ರೀತಿಯೇ ಕೆಟ್ಟ ಬುದ್ಧಿ ಕಲಿತಿದ್ದಾನೆ. ತಾಯಿಯಂತೆ ಆತನದ್ದೂ ಎಲ್ಲವೂ ಕುತಂತ್ರ ಬುದ್ಧಿಗಳೇ. ಈ ರೀತಿ ಕುತಂತ್ರದಲ್ಲಿ ಆತ ಮುಂದೆ ಇದ್ದಾನೆ. ಈ ಕಾರಣದಿಂದಲೇ ಆತ ಮನೆಯಿಂದ ಗಡಿಪಾರಾಗಿದ್ದಾನೆ. ಅವರ ನಟನೆ ಇಷ್ಟ ಆಗಿದೆ. ಈಗ ರಾಣವ್ ಜೀ ಪವರ್ನ ‘ಶುಭಸ್ಯ ಶೀಘ್ರಂ’ ಧಾರಾವಾಹಿಗೆ ಹೀರೋ ಆಗಿದ್ದಾರೆ. ಅವರು ಸಂಭಾವನೆ ವಿಚಾರದ ಬಗ್ಗೆ ಬಾಸ್ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ:‘ಅಮೃತಧಾರೆ’ ಅಬ್ಬರಕ್ಕೆ ಟಿಆರ್ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು?
‘ದುಡ್ಡಿನ ಆಸೆಗೆ ಬಿದ್ದರೆ ಪಾತ್ರ ಹೋಗುತ್ತದೆ. ಹಲವು ಪಾತ್ರಗಳನ್ನು ಕಡಿಮೆಗೆ ಒಪ್ಪಿಕೊಂಡಾಗ ಪೂರ್ತಿ ಹಣ ಕೊಟ್ಟಿಲ್ಲ. ಜೂನಿಯರ್ ಆರ್ಟಿಸ್ಟ್ ಆದಾಗ 400 ಕೊಡುತ್ತೀನಿ ಎನ್ನುತ್ತಿದ್ದರು. ಆಮೇಲೆ ಪೂರ್ತಿ ಹಣ ಕೊಡುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಕ್ಕೆ 1000 ರೂಪಾಯಿ ಕೊಡ್ತೀನಿ ಎಂದರು. ಖುಷಿಯಿಂದ ಗಡ್ಡ ಹಾಗೂ ತಲೆ ಕೂದಲು ಟ್ರಿಮ್ ಮಾಡಿಸಿಕೊಂಡು ಹೋದೆ. ಅದಕ್ಕೆ 300-400 ಖರ್ಚಾಯಿತು. ಆ ಮೇಲೆ ಬರುವಾಗ 50 ರೂಪಾಯಿ ಕೊಟ್ಟರು. ಕಣ್ಣೀರು ಹಾಕುತ್ತಾ ಮನೆಗೆ ಬಂದಿದ್ದೆ’ ಎಂದಿದ್ದಾರೆ ರಾಣವ್.
‘ಅವುಗಳನ್ನು ಈ ರೀತಿ ಮರೆತಿಲ್ಲ. ಎಲ್ಲಾ ರೀತಿಯನ್ನೂ ನೋಡಿದ್ದೇನೆ. ಜೀವನ ನಡೆಸುವಷ್ಟು ಬರ್ತಿದೆ. 6 ಡಿಜಿಟ್, 7 ಡಿಜಿಟ್ ಉಳಿಸುವಷ್ಟು ಹಣ ಬರುತ್ತಿಲ್ಲ’ ಎಂದಿದ್ದಾರೆ ರಾಣವ್. ಜೀ ಪವರ್ ಆಗಸ್ಟ್ 23ರಿಂದ ಆರಂಭ ಆಗುತ್ತಿದೆ. ಇಷ್ಟು ದಿನ ರಾಣವ್ ಅವರನ್ನು ವಿಲನ್ ಆಗಿ ಎಲ್ಲರೂ ನೋಡಿದ್ದಾರೆ. ಹೀರೋ ಆಗಿ ಅವರು ಹೇಗೆ ಕಾಣಿಸುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Sun, 24 August 25