‘ಅಮೃತಧಾರೆ’ ಅಬ್ಬರಕ್ಕೆ ಟಿಆರ್ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು?
Kannada Serials TRP: ಅಮೃತಧಾರೆ ಧಾರಾವಾಹಿ 33ನೇ ವಾರದ TRP ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಯಶಸ್ಸು ಕಂಡಿದೆ. ಕಥಾವಸ್ತುವಿನಲ್ಲಿನ ಟ್ವಿಸ್ಟ್‌ಗಳು ಮತ್ತು ಬೆಳವಣಿಗೆಗಳು ವೀಕ್ಷಕರನ್ನು ಆಕರ್ಷಿಸಿವೆ. ಕರ್ಣ, ಅಣ್ಣಯ್ಯ, ಲಕ್ಷ್ಮೀ ನಿವಾಸ ಧಾರಾವಾಹಿಗಳು ಟಾಪ್ ಐದರಲ್ಲಿ ಸ್ಥಾನ ಪಡೆದಿವೆ. ಆ ಬಗ್ಗೆ ಇಲ್ಲಿದೆ ವಿವರ.

‘ಅಮೃತಧಾರೆ’ (Amruthadhaare) ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡುವ ಕೆಲಸ ಆಗುತ್ತಿದೆ. ಈ ಕಾರಣದಿಂದಲೇ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆಯಬಹುದು ಎಂದು ಊಹಿಸಲಾಗಿತ್ತು. ಈಗ ಅದು ನಿಜವಾಗಿದೆ. ಈ ಧಾರಾವಾಹಿಗೆ ಮೊದಲಿಗಿಂತ ಹೆಚ್ಚಿನ ಟಿಆರ್ಪಿ ಸಿಕ್ಕಿದೆ. ಮುಂದಿನ ಕೆಲವು ವಾರ ಧಾರಾವಾಹಿಯಲ್ಲಿನ ಕಥೆಯ ತೀವ್ರತೆ ಇದೇ ರೀತಿ ಇದ್ದರೆ ಟಿಆರ್ಪಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಹಾಗಾದರೆ 33ನೇ ವಾರದ ಟಿಆರ್ಪಿಯಲ್ಲಿ ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿ ಇದೆ ಎಂಬ ಬಗ್ಗೆ ಇಲ್ಲಿದೆ ವಿವರ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಕಥಾ ನಾಯಕ ಗೌತಮ್ ಮಗು ಕಾಣೆ ಆಗಿದ್ದು, ಭೂಮಿಕಾಗೆ ಶಕುಂತಲಾ ಕೆಟ್ಟವಳು ಎಂಬ ವಿಚಾರ ಗೊತ್ತಾಗಿದ್ದು ಇತ್ಯಾದಿ ವಿಚಾರಗಳು ಧಾರಾವಾಹಿ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಹೀಗಾಗಿ, ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಸಿಕ್ಕಿದೆ. ಈ ಧಾರಾವಾಹಿಗೆ ಈ ಬಾರಿ ನಾಲ್ಕನೇ ಸ್ಥಾನ ಸಿಕ್ಕಿದೆ. ಕೆಲವೇ ಪಾಯಿಂಟ್ಗಳ ಅಂತರದಲ್ಲಿ ಎರಡನೇ ಸ್ಥಾನ ಮಿಸ್ ಆಗಿದೆ.
ಮೊದಲ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಇತ್ತೀಚೆಗೆ ಈ ಧಾರಾವಾಹಿ ಪ್ರಸಾರ ಆರಂಭಿಸಿದೆ. ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಕಾರಣದಿಂದಲೇ ಹೆಚ್ಚಿನ ವೀಕ್ಷಕರು ಈ ಧಾರಾವಾಹಿ ನೋಡುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ನಿಶಾ ರವಿಕೃಷ್ಣನ್ ಹಾಗೂ ವಿಕಾಶ್ ಉತ್ತಯ್ಯ ಈ ಧಾರಾವಾಹಿಯ ಭಾಗ ಆಗಿದ್ದಾರೆ.
ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಪ್ರೇಕ್ಷಕರ ವರ್ಗ ಕೂಡ ಹಿರಿದಾಗಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ಲಕ್ಷ್ಮೀ ನಿವಾಸ’ ಹಾಗೂ ‘ಅಮೃತಧಾರೆ ಧಾರಾವಾಹಿ ಮಧ್ಯೆ ಇರೋದು ಕೇವಲ ಒಂದು ಪಾಯಿಂಟ್ ಅಂತರ ಮಾತ್ರ.
ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಅಂತೂ ಕಳಚಿಬಿತ್ತು ಶಕುಂತಲ ಮುಖವಾಡ; ಅತ್ತೆಗೆ ಭೂಮಿಕಾ ಚಾಲೆಂಜ್
ಐದನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಹಾರರ್ ಶೈಲಿ ಆದರೂ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರಾವಾಹಿಯನ್ನು ವೀಕ್ಷಣೆ ಮಾಡುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:54 pm, Thu, 21 August 25








