AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?

ರಾಜಮೌಳಿ ಅವರು 'ವಾರ್ 2' ಚಿತ್ರದ ಕಳಪೆ ವಿಎಫ್ಎಕ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 'ವಾರ್ 2' ಚಿತ್ರದಲ್ಲಿನ ಕೆಲವು ದೃಶ್ಯಗಳ ಗ್ರಾಫಿಕ್ಸ್ ಗುಣಮಟ್ಟ ಕಡಿಮೆಯಿದ್ದು, ಇದರಿಂದ ರಾಜಮೌಳಿ ಅವರು ಬೇಸರಗೊಂಡಿದ್ದಾರೆ. ಜೂನಿಯರ್ NTR ಅವರ ಬಾಲಿವುಡ್ ಪ್ರಯತ್ನದ ಯಶಸ್ಸು ಕಡಿಮೆಯಾಗಿರುವುದರಿಂದಲೂ ಅವರು ನಿರಾಶರಾಗಿದ್ದಾರೆ ಎನ್ನಲಾಗಿದೆ.

ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
ರಾಜಮೌಳಿ-ಎನ್​ಟಿಆರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 21, 2025 | 7:50 AM

Share

ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಟಾಲಿವುಡ್​ನಲ್ಲಿ ಹಲವು ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಮಹೇಶ್ ಬಾಬು (Mahesh Babu) ಜೊತೆ ಕೈ ಜೋಡಿಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ಅವರಿಗೆ ಬಾಲಿವುಡ್ ನಿರ್ದೇಶಕರ ಮೇಲೆ ಮುನಿಸು ಬಂದಿದೆ ಎಂದು ವರದಿ ಆಗಿದೆ. ಅದು ಏಕೆ ಅಂತೀರಾ? ಅದಕ್ಕೂ ಉತ್ತರ ಇದೆ.

ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಫರ್ಫೆಕ್ಷನ್ ಹುಡುಕುತ್ತಾರೆ ಎಂದೇ ಹೇಳಬಹುದು. ಅವರ ಈ ಹಿಂದಿನ ಸಿನಿಮಾಗಳಲ್ಲಿ ಅದು ಸಾಬೀತಾಗಿದೆ. ಈ ಮೊದಲು ಅವರು ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ ಮತ್ತು ಅವುಗಳು ಉತ್ತಮ ಗುಣಮಟ್ಟದಲ್ಲಿ ಇವೆ. ಆದರೆ, ರಾಜಮೌಳಿ ಜೊತೆ ಕೆಲಸ ಮಾಡಿದ ಜೂನಿಯರ್ ಎನ್​ಟಿಆರ್​ಗೆ ಬಾಲಿವುಡ್​ನಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿಲ್ಲ. ಇದು ರಾಜಮೌಳಿ ಬೇಸರಕ್ಕೆ ಕಾರಣ.

ಇದನ್ನೂ ಓದಿ
Image
ಸ್ವರಾ​ಗೆ ಸಂಸದೆ ಮೇಲೆ ಕ್ರಶ್; ಲೈಂಗಿಕ ಆಸಕ್ತಿ ರಿವೀಲ್ ಮಾಡಿ ಟ್ರೋಲ್
Image
ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್​​​ ಆರಂಭಿಸಿದ ಸಿನಿಮಾ
Image
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ
Image
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ

‘ವಾರ್ 2’ ಚಿತ್ರದಲ್ಲಿ ಕೆಲವು ಗ್ರಾಫಿಕ್ಸ್​ಗಳು ತೀರಾ ಕಳಪೆ ಆಗಿ ಮೂಡಿ ಬಂದಿದೆ. ಇದು ರಾಜಮೌಳಿ ಬೇಸರಕ್ಕೆ ಕಾರಣ ಆಗಿದೆಯಂತೆ. ಅದರಲ್ಲೂ ಜೂನಿಯರ್ ಎನ್​ಟಿಆರ್​ ಅವರ ದೃಶ್ಯವೊಂದರ ವಿಎಫ್​ಎಕ್ಸ್ ನೋಡಿ ಫ್ಯಾನ್ಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ದೃಶ್ಯದಿಂದ ರಾಜಮೌಳಿ ಕೂಡ ಅಸಮಾಧಾನಗೊಂಡಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: ಮಹೇಶ್ ಬಾಬು ಅಂದು ಹೇಳಿದ್ದು ನಿಜವಾಯ್ತು; ‘ವಾರ್ 2’ ಕಳಪೆ ವಿಮರ್ಶೆ ಬೆನ್ನಲ್ಲೇ ಹಳೆಯ ಹೇಳಿಕೆ ವೈರಲ್

‘ವಾರ್ 2’ ಚಿತ್ರದ ಗಳಿಕ 200 ಕೋಟಿ ರೂಪಾಯಿ ಸಮೀಪಿಸುತ್ತಿದೆ. ಆದರೆ, ಚಿತ್ರಕ್ಕೆ ಕಳಪೆ ವಿಮರ್ಶೆ ಸಿಕ್ಕಿದೆ. ಮೊದಲ ನಾಲ್ಕು ದಿನ ಮಾತ್ರ ಸಿನಿಮಾ ಅಬ್ಬರಿಸಿದೆ. ಈಗ ಚಿತ್ರವು ಒಂದಂಕಿ ಕಲೆಕ್ಷನ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಒಟ್ಟಾರೆ ಆಗಿ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

View this post on Instagram

A post shared by Alvi Sharib (@alvi_mango)

ಸದ್ಯ ಜೂನಿಯರ್ ಎನ್​ಟಿಆರ್ ಅವರು ಬ್ರೇಕ್​ನಲ್ಲಿ ಇದ್ದಾರೆ. ಅವರು ಶೀಘ್ರವೇ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಅದು ಕೂಡ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ. ಇದು ಕೂಡ ಬ್ಲಾಕ್ ಆ್ಯಂಡ್ ವೈಟ್​ ಸ್ಟೈಲ್​ನಲ್ಲಿ ಮೂಡಿ ಬಂದರೆ ಅಭಿಮಾನಿಗಳು ಸಿನಿಮಾನ ಒಪ್ಪಿಕೊಳ್ಳೋದು ಕಷ್ಟ ಇದೆ. ರಾಜಮೌಳಿ ಅವರು ‘ಎಸ್​ಎಸ್​ಎಂಬಿ 29’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ನವೆಂಬರ್​ನಲ್ಲಿ ಮೊದಲ ಅಪ್​ಡೇಟ್ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ