ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್ ಮಾಡಿದ ರಜನಿ ಸಿನಿಮಾ
ರಜನಿಕಾಂತ್ ಅಭಿನಯದ 'ಕೂಲಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಹೀನಾಯ ಸ್ಥಿತಿಯಲ್ಲಿದೆ. ಆರಂಭದಲ್ಲಿ ಉತ್ತಮ ಪ್ರದರ್ಶನ ಕಂಡರೂ, ವಾರದ ದಿನಗಳಲ್ಲಿ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. 350 ಕೋಟಿ ರೂಪಾಯಿ ಬಜೆಟ್ ಹೊಂದಿರುವ ಈ ಚಿತ್ರ ಲಾಭ ಗಳಿಸುವುದು ಅನುಮಾನ ಎನ್ನಲಾಗುತ್ತಿದೆ. 'ಜೈಲರ್' ಚಿತ್ರದ ಯಶಸ್ಸಿಗೆ ಹೋಲಿಸಿದರೆ 'ಕೂಲಿ'ಯ ಗಳಿಕೆ ತೀರಾ ಕಡಿಮೆ.

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ (Coolie Movie) ಬಾಕ್ಸ್ ಆಫೀಸ್ನಲ್ಲಿ ಹೀನಾಯ ಕಲೆಕ್ಷನ್ ಮಾಡಲು ಆರಂಭಿಸಿದೆ. ರಜಾ ದಿನಗಳಲ್ಲಿ ಸಿನಿಮಾ ಅಬ್ಬರದ ಗಳಿಕೆ ಮಾಡಿತ್ತು. ಆದರೆ, ವಾರದ ದಿನಗಳಲ್ಲಿ ಈ ಕಲೆಕ್ಷನ್ನಲ್ಲಿ ತೀವ್ರ ಕುಸಿತ ಕಂಡಿದೆ. ಹೀಗೆಯೆ ಮುಂದುವರಿದರೆ ಸಿನಿಮಾದ ನಿರ್ಮಾಪಕರು ಕಂಡ ದೊಡ್ಡ ಕನಸು ನುಚ್ಚು ನೂರಾಗಲಿದೆ. ಸಿನಿಮಾ ಲಾಭ ಕಾಣೋದು ಅನುಮಾನ ಎಂದೇ ಹೇಳಲಾಗುತ್ತಿದೆ.
‘ಕೂಲಿ’ ಚಿತ್ರವನ್ನು ಸನ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ರಜನಿಕಾಂತ್ ಜೊತೆ ಆಮಿರ್ ಖಾನ್, ಉಪೇಂದ್ರ, ಶೌಬಿನ್ ಶಾಹೀರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಹೀಗಾಗಿ ಸಿನಿಮಾದ ಬಜೆಟ್ ಮಿತಿ ಮೀರಿದೆ. ಈ ಚಿತ್ರಕ್ಕೆ ನಿರ್ಮಾಪಕರು 350 ಕೋಟಿ ರೂಪಾಯಿ ಸುರಿದಿದ್ದಾರೆ ಎಂದು ವರದಿ ಆಗಿದೆ. ಈಗ ಸಿನಿಮಾದ ಕಲೆಕ್ಷನ್ನಲ್ಲಿ ಕುಸಿತ ಆರಂಭವಾಗಿದೆ.
‘ಕೂಲಿ’ ಸಿನಿಮಾ ಆಗಸ್ಟ್ 20ರಂದು ಕೇವಲ 6.50 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 222 ಕೋಟಿ ರೂಪಾಯಿ ಆಗಿದೆ. ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ಈ ಚಿತ್ರದ ಭಾರತದ ಗಳಿಕೆ 348 ಕೋಟಿ ರೂಪಾಯಿ ಆಗಿತ್ತು. ಈ ಕಲೆಕ್ಷನ್ ಬೀಟ್ ಮಾಡಲು ‘ಕೂಲಿ’ ಬಳಿ ಸಾಧ್ಯವಾಗೋದಿಲ್ಲ. ವಾರದ ದಿನಗಳಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೆ ಮಾತ್ರ ಸಿನಿಮಾ ಗೆಲ್ಲಲಿದೆ. ಆದರೆ, ‘ಕೂಲಿ’ ವಿಚಾರದಲ್ಲಿ ಆ ರೀತಿ ಆಗುತ್ತಿಲ್ಲ. ಆರಂಭದಿಂದ ಇಲ್ಲಿಯವರೆಗೆ ಸಿನಿಮಾದ ಕಲೆಕ್ಷನ್ ಇಳಿಕೆ ಕ್ರಮದಲ್ಲೇ ಸಾಗುತ್ತಿದೆ. ಇದು ನಿರ್ಮಾಪಕರ ಆತಂಕ ಹೆಚ್ಚಿಸಿದೆ.
ಇತ್ತೀಚೆಗೆ ಲೋಕೇಶ್ ಕನಗರಾಜ್ ಅವರ ಸಿನಿಮಾಗಳು ಗೆಲ್ಲುತ್ತಿಲ್ಲ. ಅವರ ನಿರ್ದೇಶನದ ‘ಖೈದಿ’ ಚಿತ್ರ ಗೆದ್ದು ಬೀಗಿತು. ಆ ಬಳಿಕ ಬಂದ ‘ವಿಕ್ರಮ್’ ಉತ್ತಮ ವಿಮರ್ಶೆ ಪಡೆಯಿತು. ಆದರೆ, ‘ಲಿಯೋ’ ಹಾಗೂ ಈಗ ತೆರೆಗೆ ಬಂದ ‘ಕೂಲಿ’ ಸಿನಿಮಾ ವಿಮರ್ಶೆಯಲ್ಲಿ ಸೋತಿವೆ.
ಇದನ್ನೂ ಓದಿ: ರಜನಿಕಾಂತ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ರಜನಿಕಾಂತ್ ಅವರು ಸದ್ಯ ‘ಜೈಲರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ದೊಡ್ಡ ಗೆಲುವು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಈ ವರ್ಷ ಸಿನಿಮಾ ರಿಲೀಸ್ ಆಗೋದು ಅನುಮಾನ ಎಂದೇ ಹೇಳಲಾಗುತ್ತಿದೆ. 2026ರ ಸಂಕ್ರಾಂತಿ ರೇಸ್ಗೆ ಚಿತ್ರ ಎಂಟ್ರಿ ಕೊಟ್ಟರೂ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








