AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’ ಧಾರಾವಾಹಿ: ಅಂತೂ ಕಳಚಿಬಿತ್ತು ಶಕುಂತಲ ಮುಖವಾಡ; ಅತ್ತೆಗೆ ಭೂಮಿಕಾ ಚಾಲೆಂಜ್

Amruthadhare Serial : ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ನ ಮಲತಾಯಿ ಶಕುಂತಲೆಯ ಕಪಟತನ ಬಯಲಾಗುತ್ತಿದೆ. ಭೂಮಿಕಾ ಶಕುಂತಲೆಯನ್ನು ಸವಾಲು ಮಾಡಿದ್ದಾಳೆ. ಅವಳಿ ಮಕ್ಕಳಲ್ಲಿ ಒಬ್ಬರನ್ನು ಶಕುಂತಲಾ ಹಾಗೂ ಜಯದೇವ್ ಅಪಹರಿಸಿದ್ದಾರೆ. ಗೌತಮ್ ಈ ವಿಷಯವನ್ನು ಭೂಮಿಕಾದಿಂದ ಮರೆಮಾಡಿದ್ದಾನೆ. ಶಕುಂತಲಾ ಮತ್ತಷ್ಟು ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾಳೆ.

‘ಅಮೃತಧಾರೆ’ ಧಾರಾವಾಹಿ: ಅಂತೂ ಕಳಚಿಬಿತ್ತು ಶಕುಂತಲ ಮುಖವಾಡ; ಅತ್ತೆಗೆ ಭೂಮಿಕಾ ಚಾಲೆಂಜ್
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on:Aug 06, 2025 | 11:00 AM

Share

‘ಅಮೃತಧಾರೆ’ ಧಾರಾವಾಹಿ (Amruthadhare Serial) ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ಮಲತಾಯಿ ಶಕುಂತಲ ಕೆಟ್ಟವಳು ಎಂಬ ವಿಚಾರ ಇಷ್ಟು ದಿನ ಮನೆಯಲ್ಲಿ ಯಾರಿಗೂ ಗೊತ್ತೇ ಆಗಿರಲಿಲ್ಲ. ಆದರೆ, ಈಗ ಹಂತ ಹಂತವಾಗಿ ಈ ವಿಚಾರ ತಿಳಿಯುತ್ತಿದೆ. ಭೂಮಿಕಾಗೆ ಈ ವಿಷಯ ಗೊತ್ತಾಗಿ ಹೋಗಿದೆ. ಆಕೆ ನೇರವಾಗಿ ಚಾಲೆಂಜ್ ಮಾಡಿದ್ದಾಳೆ. ಈ ಕ್ರಮದಿಂದ, ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವುಗಳನ್ನು ವೀಕ್ಷಕರು ನಿರೀಕ್ಷಿಸಬಹುದಾಗಿದೆ.

ಗೌತಮ್ ಹಾಗೂ ಭೂಮಿಕಾ ದಂಪತಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, ಒಂದು ಮಗುವನ್ನು ಶಕುಂತಲ ಹಾಗೂ ಆಕೆಯ ಮಗ ಜಯದೇವ್ ಅಪಹರಣ ಮಾಡಿಸಿದರು. ಆ ಮಗು ಕಾಣೆ ಆಗಿದೆ ಮತ್ತು ಈವರೆಗೆ ಅದು ಸಿಕ್ಕೇ ಇಲ್ಲ. ಈ ವಿಚಾರವನ್ನು ಭೂಮಿಕಾಳಿಂದ ಗೌತಮ್ ಮುಚ್ಚಿಟ್ಟಿದ್ದಾನೆ. ತನಗೆ ಜನಿಸಿದ್ದು ಒಂದೇ ಮಗು ಎಂದು ಭೂಮಿಕಾ ಭಾವಿಸಿದ್ದಾಳೆ. ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾಳೆ. ಮಗು ಇಲ್ಲದಂತೆ ಮಾಡಬೇಕು ಎಂಬುದು ಶಕುಂತಲ ಪ್ಲ್ಯಾನ್.

ಇದನ್ನೂ ಓದಿ
Image
ಜೂ. ಎನ್​ಟಿಆರ್​ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
Image
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

‘ಅಮೃತಧಾರೆ’ ಪೋಸ್ಟ್

View this post on Instagram

A post shared by Zee Kannada (@zeekannada)

ಹೀಗಿರುವಾಗಲೇ ಗೌತಮ್ ನಿಜವಾದ ತಾಯಿಯು ಶಕುಂತಲಾಳ ನಿಜವಾದ ಮುಖವನ್ನು ಕಳಚಿಟ್ಟಿದ್ದಾಳೆ. ಭೂಮಿಕಾಳು ಗೌತಮ್ ತಾಯಿ ಜೊತೆ ತನ್ನ ತವರು ಮನೆಗೆ ಹೋಗಿದ್ದಳು. ಆಕೆಗೆ ಮಾತು ಬರದ ಕಾರಣ ಕೈ ಮೂಲಕ ಬರೆಸಿ ನಿಜವಾದ ಕಳ್ಳಿ ಯಾರು ಎಂಬುದನ್ನು ಪತ್ತೆ ಹಚ್ಚಿದ್ದಾಳೆ. ‘ಶಕುಂತಲಾ ಮಗುಗೆ ತೊಂದರೆ ಕೊಡೋಕೆ ಬರುತ್ತಿದ್ದಾಳೆ’ ಎಂದು ಗೌತಮ್ ತಾಯಿಯು ಭೂಮಿಕಾಗೆ ಹೇಳಿದಳು.

ಇದನ್ನೂ ಓದಿ: ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?

ಆ ಬಳಿಕ ಭೂಮಿಕಾ ನೇರವಾಗಿ ಮನೆಗೆ ಬಂದು, ಶಕುಂತಲಾ ಬಳಿ ಈ ವಿಚಾರವಾಗಿ ಮಾತನಾಡಿದ್ದಾಳೆ. ‘ನೀವು ಅಮೃತದ ಲೇಬಲ್ ಹಾಕಿರೋ ವಿಷ’ ಎಂದು ಭೂಮಿಕಾ ಹೇಳುತ್ತಿದ್ದಂತೆ, ‘ಸ್ವಲ್ಪ ನೋಡ್ಕೊಂಡು ಮಾತನಾಡು’ ಎಂದು ಶಕುಂತಲ ಎಚ್ಚರಿಸಿದಳು. ಆದರೆ, ಇದನ್ನು ಭೂಮಿಕಾ ಕೇಳಲೇ ಇಲ್ಲ. ‘ನಿನಗೆ ಏನು ಗೊತ್ತಾಗಿದೆಯೋ ಅದುವೇ ಸತ್ಯ. ನೀನು ಯುದ್ಧ ಘೋಷಣೆ ಮಾಡಿದ್ದೀಯಾ. ನಾನು ಅದನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಶಕುಂತಲಾ ಹೇಳಿದಳು. ಆಗ ಭೂಮಿಕಾ, ‘ಅದಕ್ಕೆ ಈ ಭೂಮಿಕಾ ಅವಕಾಶ ನೀಡಲ್ಲ. ಆಟ ಈಗ ಶುರು’ ಎಂದು ಅವಾಜ್ ಹಾಕಿದಳು. ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Wed, 6 August 25