ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?
ಗೌತಮ್ ಮತ್ತು ಭೂಮಿಕಾ ದಂಪತಿಗಳ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ.ಮೊದಲು ರಘುವೀರ್ ಎಂದು ಹೆಸರಿಡಲು ಯೋಚಿಸಲಾಗಿತ್ತಾದರೂ, ಹಳೆಯ ಹೆಸರು ಎಂದು ತಿರಸ್ಕರಿಸಲಾಯಿತು. ಒಂದು ಕಡೆ ಮಗುವಿಗೆ ನಾಮಕರಣ ಶಾಸ್ತ್ರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಮತ್ತೊಂದು ಮಗು ಇಲ್ಲ ಎಂಬ ಬೇಸರ ಗೌತಮ್ಗೆ ಮೂಡಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhare) ಗೌತಮ್ ದಿವಾನ್ ಹಾಗೂ ಭೂಮಿಕಾ ಗೌತಮ್ ದಂಪತಿಗೆ ಮಗು ಜನಿಸಿದ್ದು ಗೊತ್ತೇ ಇದೆ. ಇದರಿಂದಾಗಿ ಇಡೀ ಕುಟುಂಬದಲ್ಲಿ ಖುಷಿಯ ವಾತಾವರಣ ಮೂಡಿದೆ ಎನ್ನಬಹುದು. ಈಗ ಮಗುವಿಗೆ ನಾಮಕರಣ ಶಾಸ್ತ್ರ ನಡೆದಿದೆ. ಮಗುವಿಗೆ ಏನು ಹೆಸರು ಇಡಬೇಕು ಎಂಬ ವಿಚಾರವನ್ನು ಇಷ್ಟು ದಿನ ಗುಟ್ಟಾಗಿಯೇ ಇಡಲಾಗಿತ್ತು. ಈಗ ಅದನ್ನು ರಿವೀಲ್ ಮಾಡಲಾಗಿದೆ. ಸಿಂಪಲ್ ಆಗಿ ನಾಮಕರಣ ಶಾಸ್ತ್ರ ನಡೆಸಲಾಗಿದೆ.
ಅಪ್ಪನ ಹೆಸರು..
ಹಳೆಯ ಸಂಪ್ರದಾಯದಲ್ಲಿ ತಾತನ ಹೆಸರನ್ನು ಮೊಮ್ಮಕ್ಕಳಿಗೆ ಇಡಲಾಗುತ್ತದೆ. ಇಲ್ಲಿಯೂ ಅದೇ ರೀತಿ ಮಾಡಲು ನಿರ್ಧರಿಸಲಾಗಿತ್ತು. ಮೊದಲು ಮನೆಯವರೆಲ್ಲರೂ ಸೇರಿ ರಘು ವೀರ್ ಎಂದು ಹೆಸರು ಇಡಲು ನಿರ್ಧರಿಸಿದರು. ಇದಕ್ಕೆ ಕಾರಣವೂ ಇತ್ತು. ಗೌತಮ್ ತಂದೆಯ ಹೆಸರು ರಘುವೀರ್ ದೀವಾನ್. ಇದೇ ಹೆಸರನ್ನು ಇಡಲು ಮೊದಲು ಆಲೋಚಿಸಲಾಗಿತ್ತು. ಆದರೆ, ಇದು ತುಂಬಾನೇ ಹಳೆಯ ಹೆಸರು ಎಂಬ ಕಾರಣಕ್ಕೆ ಈ ಹೆಸರು ಬೇಡ ಎಂದು ಎಲ್ಲರೂ ಕೈ ಬಿಟ್ಟರು.
ಮಗುವಿಗೆ ಹೆಸರು ಇಡುವ ನಿರ್ಧಾರವನ್ನು ಗೌತಮ್ ಹಾಗೂ ಭೂಮಿಕಾಗೆ ಬಿಡಲಾಯಿತು. ಈ ವೇಳೆ ಅವರು ಇಬ್ಬರೂ ಚರ್ಚೆ ಮಾಡಿ ಒಂದು ಹೆಸರು ನಿರ್ಧರಿಸೋದಾಗಿ ಹೇಳಿದರು. ಇಬ್ಬರೂ ಚರ್ಚಿಸಿ ಒಂದು ಹೆಸರು ನಿರ್ಧರಿಸೋದಾಗಿ ಈ ದಂಪತಿ ಹೇಳಿದರು.
ಮರುದಿನ ನಾಮಕರಣ ಶಾಸ್ತ್ರ ನಡೆಯಿತು. ಈ ನಾಮಕರಣ ಶಾಸ್ತ್ರದಲ್ಲಿ ಗೌತಮ್ ಹಾಗೂ ಭೂಮಿಕಾ ಸೇರಿ ಒಂದು ಹೆಸರನ್ನು ಆಯ್ಕೆ ಮಾಡಿದರು. ಅದುವೇ ಆಕಾಶ್. ಈ ಹೆಸರು ಕೇಳಿ ಮನೆಯವರೆಲ್ಲರೂ ಖುಷಿ ಪಟ್ಟರು. ನಾಮಕರಣ ಶಾಸ್ತ್ರಕ್ಕೆ ಜಯದೇವ್ನ ಕರೆತರಬೇಕು ಎಂಬುದು ಶಾಕುಂತಲಾ ಅವಳ ಆಸೆ ಆಗಿತ್ತು. ಆದರೆ, ಇದಕ್ಕೆ ಗೌತಮ್ ದಿವಾನ್ ಒಪ್ಪಿಗೆ ಕೊಡಲೇ ಇಲ್ಲ. ಅವನು ಮನೆ ವಾತಾವರಣ ಹಾಳು ಮಾಡುತ್ತಾನೆ, ಕರೆಯೋದ ಬೇಡವೇ ಬೇಡ ಎಂದನು.
ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ ನಟಿಗೆ ಪತಿಯಿಂದ ಚಾಕು ಇರಿತ
ದುಃಖವೇ ಜಾಸ್ತಿ
ಗೌತಮ್ಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ, ಒಂದು ಮಗುವನ್ನು ಕಿಡ್ನ್ಯಾಪ್ ಆಗಿದೆ. ಈ ಕಿಡ್ನ್ಯಾಪ್ ಮಾಡಿದ್ದು ಯಾರು ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಈ ವಿಚಾರವನ್ನು ಇನ್ನೂ ಮುಚ್ಚಿಡಲಾಗಿದೆ. ಒಂದು ಕಡೆ ಮಗುವಿಗೆ ನಾಮಕರಣ ಶಾಸ್ತ್ರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಮತ್ತೊಂದು ಮಗು ಇಲ್ಲ ಎಂಬ ಬೇಸರ ಗೌತಮ್ಗೆ ಮೂಡಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:54 am, Thu, 24 July 25







