
ನಟ ಉಗ್ರಂ ಮಂಜು ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಉಗ್ರಂ ಮಂಜು ಇದ್ದರು. ಅವರು ಟಾಪ 6ರಲ್ಲಿ ಸ್ಥಾನ ಪಡೆದಿದ್ದರು. ಅವರು ದೊಡ್ಮನೆಯಿಂದ ಹೊರ ಬಂದ ಬಳಿಕ ಸಾಕಷ್ಟು ಸಿನಿಮಾ ಆಫರ್ ಪಡೆದರು. ಈಗ ಅವರು ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ಗಳಿಗಾಗಿ ಅವರ ಫ್ಯಾನ್ಸ್ ಕಾದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಹಲವು ರೀತಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇದರಲ್ಲಿ ಅನೇಕ ಧಾರಾವಾಹಿಗಳು ಭಾವನಾತ್ಮಕವಾಗಿದ್ದರೆ, ಇನ್ನೂ ಕೆಲವು ಮನಮಿಡಿಯುವ ರೀತಿಯಲ್ಲಿ ಇವೆ. ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸೋಮವಾರದಿಂದ – ಶುಕ್ರವಾರ ರಾತ್ರಿ 8.30ಕ್ಕೆ ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿದೆ. ಇದಕ್ಕೆ ಉಗ್ರಂ ಮಂಜು ಕಾಣಿಸಿಕೊಳ್ಳಲಿದ್ದಾರೆ.
ಬುಧವಾರ ಮತ್ತು ಗುರುವಾರದ ಸಂಚಿಕೆಯಲ್ಲಿ (ಆಗಸ್ಟ್ 13,14) ಉಗ್ರಂ ಮಂಜು ಬಂದಿದ್ದಾರೆ. ನಾಯಕ ಅರ್ಜುನ್ ಹಾಗೂ ಕಥಾನಾಯಕಿ ಭಾರ್ಗವಿಗೆ ತಾಳಿ ಕಟ್ಟುವ ಸನ್ನಿವೇಶ ಇದೆ. ಇದು ಸಂಚಿಕೆಯ ಹೈಲೈಟ್. ಈ ವೇಳೆ ಉಗ್ರಂ ಮಂಜು ಅವರ ಆಗಮನ ಆಗಲಿದೆ.
ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆಯನ್ನು ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಹೇಳುತ್ತದೆ. ಕಥೆಯಲ್ಲಿ ಪ್ರಮುಖ ತಿರುವೊಂದು ಎದುರಾಗಿದೆ. ಇದರಲ್ಲಿ, ಅರ್ಜುನ್ ಹಾಗೂ ಭಾರ್ಗವಿ ಅನಿರೀಕ್ಷಿತವಾಗಿ ಮದುವೆ ಆಗೋ ಪರಿಸ್ಥಿತಿ ಬರುತ್ತದೆ.
ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ
ಮದುವೆಯ ವಿಷಯ ತಿಳಿದರೆ ಜೆಪಿ ಪ್ರತಿಕ್ರಿಯೆ ಏನು? ಬೃಂದಾ ಕೂಡಾ ಅದೇ ಮನೆ ಸೇರಿದರೆ ಮುಮದೆ ಏನೆಲ್ಲ ನಡೆಯುತ್ತದೆ ಎಂಬುದು ಸದ್ಯದ ಕುತೂಹಲ. ಇನ್ನು, ಭಾರ್ಗವಿಯ ಮೊದಲ ಕೋರ್ಟ್ ಪ್ರಕರಣ ಅಂತಿಮ ಹಂತದಲ್ಲಿದೆ. ಇದರಲ್ಲಿ ಅವರು ಜೆಪಿಯನ್ನು ಸೋಲಿಸುತ್ತಾಳಾ ಎಂಬುದು ಸದ್ಯದ ಪ್ರಶ್ನೆ.
ಇನ್ನು, ಉಗ್ರಂ ಮಂಜು ಅವರು ‘ಮ್ಯಾಕ್ಸ್’ ಯಶಸ್ಸಿನ ಬಳಿಕ ‘ಮ್ಯಾಕ್ಸ್’ ಮಂಜು ಆಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ