ನಟಿ ರಮ್ಯಾ (Ramya) ಅವರು ಸಿನಿಮಾ ರಂಗದಲ್ಲಿ ಮಾಡಿದ ಹೆಸರು ತುಂಬಾನೇ ದೊಡ್ಡದು. ಅವರ ಹೆಸರು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವಾಗಲೇ ರಾಜಕೀಯಕ್ಕೆ ಕಾಲಿಟ್ಟರು. ಅವರು ಸಂಸದೆ ಕೂಡ ಆದರು. ಕಾಂಗ್ರೆಸ್ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ರಮ್ಯಾ ಅವರು ನಂತರ ರಾಜಕೀಯವನ್ನೂ ತೊರೆದರು. ಕೆಲ ವರ್ಷಗಳ ಕಾಲ ಅವರು ಯಾರ ಕಣ್ಣಿಗೂ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಸೋಶಿಯಲ್ ಮೀಡಿಯಾಗೆ ರಮ್ಯಾ ಗುಡ್ಬೈ ಹೇಳಿದ್ದರು. ಈಗ ಅವರು ಮರಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ರಂಗದಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್ಸ್’ (Anubandha Awards) ಕಾರ್ಯಕ್ರಮಕ್ಕೂ ರಮ್ಯಾ ಹಾಜರಿ ಹಾಕಿದ್ದಾರೆ.
ರಮ್ಯಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದು ತುಂಬಾನೇ ಕಡಿಮೆ. ಯಾವುದೇ ಚಿತ್ರಕ್ಕೆ ಅವರು ಬೆಂಬಲ ಸೂಚಿಸುವುದಾದರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಮೋಷನ್ ಮಾಡುತ್ತಾರೆ. ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಈಗ ಹಲವು ವರ್ಷಗಳ ಬಳಿಕ ಅವರು ಅವಾರ್ಡ್ ಫಂಕ್ಷನ್ನಲ್ಲಿ ಭಾಗಿ ಆಗಿದ್ದಾರೆ. ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಟಿಯನ್ನು ಮತ್ತೆ ಪರದೆಮೇಲೆ ನೋಡಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ನಡೆಸುತ್ತದೆ. ಇದೊಂದು ರೀತಿಯಲ್ಲಿ ಕುಟುಂಬದ ಕಾರ್ಯಕ್ರಮ ಇದ್ದಂತೆ. ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳನ್ನು ನಾನಾ ವಿಭಾಗಗಳಲ್ಲಿ ನಾಮಿನೇಷನ್ ಮಾಡಿ ಅವಾರ್ಡ್ ನೀಡಲಾಗುತ್ತದೆ. ಈ ಕಾರ್ಯಕ್ರಮ ಈಗಾಗಲೇ ನಡೆದಿದ್ದು, ಅಕ್ಟೋಬರ್ 7, 8, 9ರಂದು ಸಂಜೆ 6 ಗಂಟೆಗೆ ಇದು ಪ್ರಸಾರ ಕಾಣಲಿದೆ. ರಮ್ಯಾ ಅವರನ್ನು ಕಿರುತೆರೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಲಕ್ಷ್ಮಿ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್; ನಿಜವಾಗಲಿಲ್ಲ ‘ನಾ ನಿನ್ನ ಮರೆಯಲಾರೆ’ ಕನಸು
ಗಣೇಶ ಚತುರ್ಥಿಯ ಶುಭ ದಿನದಂದು ರಮ್ಯಾ ಗುಡ್ ನ್ಯೂಸ್ ನೀಡಿದ್ದರು. ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುವುದಾಗಿ ರಮ್ಯಾ ಘೋಷಿಸಿದ್ದರು. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಎಂದು ತಮ್ಮ ನಿರ್ಮಾಣ ಸಂಸ್ಥೆಗೆ ಅವರು ಹೆಸರು ಇಟ್ಟಿದ್ದಾರೆ. ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ಏಕೆ ಎಂಬ ಬಗ್ಗೆ ಅವರು ಬರೆದುಕೊಂಡಿದ್ದರು.
Published On - 3:43 pm, Tue, 27 September 22