ನಾಗ ಚೈತನ್ಯ ಸಹಿಯ ಟ್ಯಾಟೂ ತೆಗೆಸಿದ ಸಮಂತಾ; ದೀಪಿಕಾ, ನಯನತಾರಾ ಹಾದಿಯಲ್ಲಿ ಸ್ಯಾಮ್

| Updated By: ರಾಜೇಶ್ ದುಗ್ಗುಮನೆ

Updated on: Oct 12, 2023 | 12:44 PM

ಸಮಂತಾ ದೇಹದ ಮೇಲೆ ಹಲವು ಹಚ್ಚೆಗಳಿವೆ. ಅವರ ಮಾಜಿ ಪತಿಯ ಸಹಿಯ ಟ್ಯಾಟೂ ಕೂಡ ಇತ್ತು. ವಿಚ್ಛೇದನ ಪಡೆದ ಹೊರತಾಗಿಯೂ ಸಮಂತಾ ಟ್ಯಾಟೂನ ಹಾಗೆಯೇ ಇಟ್ಟುಕೊಂಡಿದ್ದರು. ಆದರೆ, ಈಗ ಅದನ್ನು ಅವರು ತೆಗೆದು ಹಾಕಿದ್ದಾರೆ.

ನಾಗ ಚೈತನ್ಯ ಸಹಿಯ ಟ್ಯಾಟೂ ತೆಗೆಸಿದ ಸಮಂತಾ; ದೀಪಿಕಾ, ನಯನತಾರಾ ಹಾದಿಯಲ್ಲಿ ಸ್ಯಾಮ್
ಸಮಂತಾ
Follow us on

ನಟಿ ಸಮಂತಾ (Samantha) ಹಾಗೂ ನಾಗಚೈತನ್ಯ ಪರಸ್ಪರ ಪ್ರೀತಿಸಿ ಮದುವೆ ಆದವರು. 10 ವರ್ಷಗಳ ಕಾಲ ಗೆಳೆಯರಾಗಿ, ಪ್ರೇಮಿಗಳಾಗಿದ್ದರು. ನಂತರ ಮದುವೆ ಆಗುವ ಮೂಲಕ ಇವರು ಪ್ರೀತಿಗೆ ಹೊಸ ಅರ್ಥ ನೀಡಿದರು. ಮದುವೆ ಆಗಿ ನಾಲ್ಕು ವರ್ಷ ಕಳೆಯುವುದರೊಳಗೆ ಇವರ ಡಿವೋರ್ಸ್ ಸುದ್ದಿ ಹೊರ ಬಿತ್ತು. ಇಬ್ಬರೂ 2021ರ ಅಕ್ಟೋಬರ್​ನಲ್ಲಿ ಬೇರೆ ಆದರು. ಈ ಘಟನೆ ನಡೆದು ಎರಡು ವರ್ಷ ಕಳೆದಿದೆ. ಆದಾಗ್ಯೂ ಇವರ ಕುರಿತ ಚರ್ಚೆ ಕಡಿಮೆ ಆಗಿಲ್ಲ. ಇವರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಕೋರಿಕೆ ಇಟ್ಟಿದ್ದರು. ಈಗ ಸಮಂತಾ ಅವರ ಟ್ಯಾಟೂ ವಿಚಾರ ಚರ್ಚೆಗೆ ಬಂದಿದೆ. ಅವರು ಹೊಟ್ಟೆಗಿಂತ ಮೇಲಿದ್ದ ಟ್ಯಾಟೂನ ಅಳಿಸಿ ಹಾಕಿದ್ದಾರೆ.

ಪ್ರೀತಿ ಪಾತ್ರರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಮೊದಲಿನಿಂದಲೂ ಇದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಟ್ರೆಂಡ್ ಫಾಲೋ ಮಾಡಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿ ಸಮಂತಾ ಕೂಡ ಇದಕ್ಕೆ ಹೊರತಾಗಿಲ್ಲ. ಸಮಂತಾ ದೇಹದ ಮೇಲೆ ಹಲವು ಹಚ್ಚೆಗಳಿವೆ. ಅವರ ಮಾಜಿ ಪತಿಯ ಸಹಿಯ ಟ್ಯಾಟೂ ಕೂಡ ಇತ್ತು. ವಿಚ್ಛೇದನ ಪಡೆದ ಹೊರತಾಗಿಯೂ ಸಮಂತಾ ಟ್ಯಾಟೂನ ಹಾಗೆಯೇ ಇಟ್ಟುಕೊಂಡಿದ್ದರು. ಆದರೆ, ಈಗ ಅದನ್ನು ಅವರು ತೆಗೆದು ಹಾಕಿದ್ದಾರೆ.

ಸಮಂತಾ ಟ್ಯಾಟೂ ಅರ್ಥ

ಸಮಂತಾ ದೇಹದ ಮೇಲೆ ಮೂರು ಟ್ಯಾಟೂ ಇತ್ತು. ವೈಎಂಸಿ ಎಂಬ ಟ್ಯಾಟೂ ಬೆನ್ನಿನ ಭಾಗದಲ್ಲಿ ಇದೆ. ಇದರ ಅರ್ಥ ‘ಯೇ ಮಾಯಾ ಚೇಸಾವೆ’ ಎಂದು. ಸಮಂತಾ ಅವರನ್ನು ಸ್ಟಾರ್ ಆಗಿ ಮಾಡಿದ ಸಿನಿಮಾ ಇದು. ಅದರ ನೆನಪಿಗೆ ಸಮಂತಾ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬು ಸಮೀಪ ನಾಗ ಚೈತನ್ಯ ಅವರ ಸಹಿಯ ಟ್ಯಾಟೂ ಇತ್ತು. ಇದನ್ನು ಸಮಂತಾ ತೆಗೆಸಿದ್ದಾರೆ.

ಹೊಸ ಫೋಟೋ ವೈರಲ್

ಸದ್ಯ ಸಮಂತಾ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೊಟ್ಟೆಯ ಭಾಗ ಕೂಡ ಕಾಣಿಸಿದೆ. ಆದರೆ, ನಾಗ ಚೈತನ್ಯ ಅವರ ಸಹಿಯ ಟ್ಯಾಟೂ ಕಾಣಿಸಿಲ್ಲ. ಈ ಮೂಲಕ ಸಮಂತಾ ಅವರು ಸಹಿಯನ್ನು ತೆಗೆದು ಹಾಕಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಈ ನಾಯಿಗಾಗಿ ಸಮಂತಾ-ನಾಗಚೈತನ್ಯ ಒಂದಾಗಬೇಕು ಎಂದು ಬೇಡಿಕೆ ಇಟ್ಟ ಅಭಿಮಾನಿಗಳು

ಟ್ಯಾಟೂ ರಿಮೂವ್ ಮಾಡಿದ್ದ ದೀಪಿಕಾ, ನಯನತಾರಾ

ನಟ ರಣಬೀರ್ ಕಪೂರ್ ಹಾಗೂ ​ನಟಿ ದೀಪಿಕಾ ಪಡುಕೋಣೆ ಪರಸ್ಪರ ಪ್ರೀತಿಸುತ್ತಿದ್ದರು. ಆಗ ಆರ್​ಕೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ನಯನತಾರಾ ಪಿಡಿ (ಪ್ರಭುದೇವ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಇವೆರಡೂ ಸಂಬಂಧ ಈಗ ಉಳಿದಿಲ್ಲ. ಲೇಸರ್ ಟ್ರೀಟ್​ಮೆಂಟ್ ಮೂಲಕ ಈ ಟ್ಯಾಟೂನ ತೆಗೆಸಲಾಗಿದೆ. ಸಮಂತಾ ಕೂಡ ಹೀಗೆಯೇ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ