ಸಮರ್ಥರ ವಿರುದ್ಧ ಗೆದ್ದ ಅಸಮರ್ಥರಿಗೆ ಉಡುಗೊರೆ ಕೊಟ್ಟ ಬಿಗ್​ಬಾಸ್

Bigg Boss 10: ಬಿಗ್​ಬಾಸ್ 10ರಲ್ಲಿ ಈ ವರೆಗೆ ಅಸಮರ್ಥರು, ಸಮರ್ಥರ ಸೇವೆಯಲ್ಲೇ ನಿರತರಾಗಿದ್ದರು, ಆದರೆ ಗುರುವಾರದ ಎಪಿಸೋಡ್​ನಲ್ಲಿ ನಡೆದ ಟಾಸ್ಕ್​ನಲ್ಲಿ ಸಮರ್ಥರನ್ನು ಸೋಲಿಸಿ, ಬಿಗ್​ಬಾಸ್​ನಿಂದ ಭರ್ಜರಿ ಬಹುಮಾನ ಪಡೆದುಕೊಂಡರು.

ಸಮರ್ಥರ ವಿರುದ್ಧ ಗೆದ್ದ ಅಸಮರ್ಥರಿಗೆ ಉಡುಗೊರೆ ಕೊಟ್ಟ ಬಿಗ್​ಬಾಸ್
ಬಿಗ್​ಬಾಸ್ 10
Follow us
ಮಂಜುನಾಥ ಸಿ.
|

Updated on:Oct 13, 2023 | 12:00 AM

ಬಿಗ್​ಬಾಸ್ (Bigg Boss) ಮನೆಯಲ್ಲಿ ಸಮರ್ಥರು, ಅಸಮರ್ಥರು ಎಂಬ ಎರಡು ಗುಂಪಾಗಿದ್ದು, ಅಸಮರ್ಥರು ಮನೆಯ ಕೆಲಸಗಳ ಜವಾಬ್ದಾರಿಯನ್ನು ಬಿಗ್​ಬಾಸ್ ನೀಡಿದ್ದಾರೆ. ಹೆಚ್ಚು ಜನ ಮತಗಳಿಸಿ ಒಳ ಹೋಗಿ ಸಮರ್ಥರಾಗಿರುವ ಸದಸ್ಯರಿಗೆ ಕೆಲವು ಅಧಿಕಾರ, ಹಕ್ಕುಗಳನ್ನು ಸಹ ಕೊಟ್ಟಿದ್ದಾರೆ. ಆದರೆ ಅಸಮರ್ಥರಿಗೆ ಜೈಲು ಖೈದಿಗಳಂಥಹಾ ಉಡುಗೆ ನೀಡಿ, ಅವರು ಚಪ್ಪಲಿ ಧರಿಸಬಾರದೆಂಬ ನಿಯಮ ಹೇರಿ, ಅಡುಗೆ, ಸ್ವಚ್ಛತೆ ಇನ್ನಿತರೆ ಕೆಲಸಗಳನ್ನು ಮಾಡುವಂತೆ ಸೂಚಿಸಿದ್ದಾರೆ.

ಬಿಗ್​ಬಾಸ್ ಮನೆಗೆ ಬಂದ ದಿನದಿಂದಲೂ ಅಸಮರ್ಥರು, ಸಮರ್ಥರ ಸೇವೆ ಮಾಡುತ್ತಿದ್ದಾರೆ. ಆದರೆ ಇಂದು ನಡೆದ ಟಾಸ್ಕ್​ನಲ್ಲಿ ಅಸಮರ್ಥರು ಸಮರ್ಥರ ವಿರುದ್ಧ ಭರ್ಜರಿ ಜಯ ಗಳಿಸಿ, ಬಿಗ್​ಬಾಸ್ ಕಡೆಯಿಂದ ಬಂಫರ್ ಉಡುಗೊರೆ ಪಡೆದಿದ್ದಾರೆ. ಅಸಮರ್ಥರಿಗೆ ಬಿಗ್​ಬಾಸ್ ಕಡೆಯಿಂದ ದೊರೆತ ಬಹುಮಾನ ನೋಡಿ, ಸಮರ್ಥರು, ಸಹ ನಾವೂ ಅಸಮರ್ಥರಾಗಿರಬಾರದಿತ್ತೇ ಎಂದು ಕೈ-ಕೈ ಹಿಸುಕಿಕೊಳ್ಳುವಂತಾಗಿತ್ತು.

ಇದನ್ನೂ ಓದಿ:‘ಬಿಗ್​ಬಾಸ್​’ನಲ್ಲಿ ಮೊದಲ ವಾರ ಈ ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ

ಬಿಗ್​ಬಾಸ್ ಮನೆಗೆ ಹಠಾತ್ತನೆ ಮಾಜಿ ಬಿಗ್​ಬಾಸ್ ವಿಜೇತ ಪ್ರಥಮ್ ಎಂಟ್ರಿಯಾಯಿತು. ಲಾರ್ಡ್ ಪ್ರಥಮ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಪ್ರಥಮ್, ಎಲ್ಲ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡು ಎಲ್ಲರಿಗೂ ಶಿಸ್ತಿನ ಪಾಠ ಮಾಡಿದರು. ಬಳಿಕ ತಾವು ಬಂದ ಉದ್ದೇಶದಂತೆ ಸಮರ್ಥರು ಹಾಗೂ ಅಸಮರ್ಥರ ನಡುವೆ ಟಾಸ್ಕ್​ ಒಂದನ್ನು ಆಡಿಸಿದರು.

ಶಕ್ತಿ, ಬುದ್ಧಿವಂತಿಕೆ, ವೇಗ ಜೊತೆಗೆ ತಂಡದ ಸಹಾಯವನ್ನು ಬೇಡುವ ಟಾಸ್ಕ್ ಒಂದನ್ನು ಪ್ರಥಮ್ ಎರಡೂ ತಂಡಗಳ ನಡುವೆ ಆಡಿಸಿದರು. ಮೊದಲಿಗೆ ಪರಸ್ಪರ ಸೆಣೆಸಿದ್ದು ಅಸಮರ್ಥರ ತಂಡದ ತನಿಷಾ ಹಾಗೂ ಸಮರ್ಥರ ತಂಡ ನೀತು. ತನಿಷಾ ಮೊದಲಿಗೆ ಜಯಿಸಿದರು. ಎರಡನೇ ಸುತ್ತಿನಲ್ಲಿ ಅಸಮರ್ಥರ ತಂಡದಿಂದ ಹಳ್ಳಿಕಾರ್ ಸಂತೋಶ್ ಹಾಗೂ ಸಮರ್ಥರ ತಂಡದ ಮೈಖಲ್ ನಡುವೆ ಸ್ಪರ್ಧೆ ನಡೆದು ಹಳ್ಳಿಕಾರ್ ಸಂತೋಶ್ ಅನಾಯಾಸವಾಗಿ ಕೇವಲ 18 ಸೆಕೆಂಡ್​ಗಳಲ್ಲಿ ಆಟ ಮುಗಿಸಿ ಗೆದ್ದು ಬೀಗಿದರು. ಕೊನೆಯ ಸುತ್ತಿನಲ್ಲಿ ಸಮರ್ಥರ ತಂಡದ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ವಿನಯ್ ಅಖಾಡಕ್ಕಿಳಿದರೆ, ಅಸಮರ್ಥರ ತಂಡದಿಂದ ಕಾರ್ತಿಕ್ ಅವರ ಎದುರಾದರು. ಆ ಸುತ್ತಿನಲ್ಲಿಯೂ ಅಸಮರ್ಥರ ತಂಡವೇ ಗೆದ್ದು 3-0 ಇಂದ ಟಾಸ್ಕ್​ ಅನ್ನು ತನ್ನದಾಗಿಸಿಕೊಂಡಿತು.

ಗೆದ್ದ ಅಸಮರ್ಥರಿಗೆ ಬಿಗ್​ಬಾಸ್ ಅವರಿಗೆ ಇಷ್ಟವಾಗುವ ಬಗೆ-ಬಗೆಯ ತಿಂಡಿ ತಿನಿಸುಗಳನ್ನು ಕೊಟ್ಟರು. ಚಿಕನ್, ಕಬಾಬ್, ಬಿರಿಯಾನಿ, ವೆಬ್ ತಿನ್ನುವವರಿಗೂ ಬಗೆಗೆಯ ಊಟವನ್ನು ಬಿಗ್​ಬಾಸ್ ಕಳಿಸಿದರು. ಅಸಮರ್ಥರು ಮಜಾವಾಗಿ ಊಟ ಮಾಡುತ್ತಿದ್ದರೆ, ತುಕಾಲಿ ಸಂತೋಶ್ ಸೇರಿದಂತೆ ಹಲವರು ಬಹಳ ಹೊಟ್ಟೆ ಉರಿದುಕೊಂಡರು. ಇಂದಿನ ಗೆಲುವು ಅಸಮರ್ಥರ ತಂಡಕ್ಕೆ ಭರಪೂರ ಆತ್ಮವಿಶ್ವಾಸವನ್ನು ತುಂಬಿದೆ. ಮುಂದೆ ಅವರ ಆಟ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ‘ಬಿಗ್​ಬಾಸ್ ಕನ್ನಡ ಸೀಸನ್ 10’ ಜಿಯೋ ಸಿನಿಮಾಸ್ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 pm, Thu, 12 October 23

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ