AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಒಂದೇ ಮಾತಿನಿಂದ ರಾಮನ ಮನಸ್ಸು ಗೆದ್ದ ಸೀತಾ

Seetha Raama:  ‘ಪ್ರೀತಿ ಆಗಿದೆ ಅಂತ ಗೊತ್ತಿಲ್ಲದೇ ಆಗೋದೇ ಪ್ರೀತಿ’ ಎಂಬ ಮಾತಿನಿಂದ ರಾಮನ ಮನಸ್ಸನ್ನು ಗೆಲ್ಲುತ್ತಾಳೆ ಸೀತಾ. ಅದೇ ಖುಷಿಯಲ್ಲಿ ರಾಮ್ ಅವಳನ್ನು ಕಿಚಾಯಿಸುತ್ತಾನೆ. ಅದಕ್ಕೆ ಅವಳು ಕೂಡ ಅವನಿಗೆ ಪ್ರತ್ಯುತ್ತರ ಕೊಟ್ಟು ಹಣವನ್ನು ಪ್ರೀತಿಯಿಂದ ತಿರಸ್ಕರಿಸಿ ನಡೆಯುತ್ತಾಳೆ. ಅವನು ಅಂದುಕೊಂಡಂತೆ ಆಗದಿದ್ದರೂ ಸೀತಾಳ ಮಾತು ಅವನನ್ನು ಕರಗಿಸುತ್ತದೆ.

Seetha Raama: ಒಂದೇ ಮಾತಿನಿಂದ ರಾಮನ ಮನಸ್ಸು ಗೆದ್ದ ಸೀತಾ
ಸೀತಾ-ರಾಮ
ಪ್ರೀತಿ ಭಟ್​, ಗುಣವಂತೆ
| Updated By: ರಾಜೇಶ್ ದುಗ್ಗುಮನೆ|

Updated on: Oct 13, 2023 | 8:13 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 66: ಸುಳ್ಳು ಹೇಳಬಾರದು ಎಂದು ಮಗಳಿಗೆ ಹೇಳಿ ಕೊಡುವ ಸೀತಾ, ರಾಮನನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾಳೆ. ನಿಜವಾಗಿಯೂ ರಾಮ್ ಮುಚ್ಚಿಟ್ಟಿರುವ ಸತ್ಯ ತಿಳಿದರೆ ಏನಾಗಬಹುದು? ಆದರೆ ಆ ಸಂದರ್ಭಕ್ಕೆ ಅದಾವುದೂ ಗೊತ್ತಿಲ್ಲದ ಸೀತಾ ತನ್ನ ಮಗಳಿಗೂ ಅವನಂತೆ ಆಗು ಎನ್ನುತ್ತಾಳೆ. ಇನ್ನು ರುದ್ರ ಪ್ರತಾಪ್, ಸೀತಾಳ ಆಫೀಸ್​ನಲ್ಲಿ ಬ್ಯಾಂಕ್​ನವರು ಬಂದ ವಿಷಯವನ್ನು ಶಾಂತಾ ಮತ್ತು ಮೂರ್ತಿಯನ್ನು ಭೇಟಿಯಾಗಿ ಅವರ ಬಳಿ ಹೇಳುತ್ತಾನೆ, ಅವರ ಮನಸ್ಸಿಗೆ ತನಗೆ ಬೇಕಾದ ವಿಷಯಗಳನ್ನು ತುಂಬಿ ಅವರ ಬಳಿ  ತಾನು ಸೀತಾಳಿಗೆ ತಕ್ಕ ವರ ಎಂದು ಬಿಂಬಿಸುತ್ತಾನೆ.

ಇನ್ನು ಸೀತಾಳಿಗೋಸ್ಕರ ಸ್ವಲ್ಪ ದುಡ್ಡು ತೆಗೆದುಕೊಂಡು ಹೊರಟ ರಾಮ್, ಅಶೋಕ್ ಸಲಹೆ ಕೇಳುತ್ತಾನೆ. ಆದರೂ ಏನು ಸರಿ ಹೋಗದ ಕಾರಣ ಸೀತಾಳಿಗೆ ಹೇಗಾದರೂ ಮಾಡಿ ದುಡ್ಡು ಕೊಡಲು ನಿರ್ಧಾರ ಮಾಡುತ್ತಾನೆ. ಅದೇ ನೆಪ ಹೇಳಿ ಅವರನ್ನು ಕರೆದುಕೊಂಡು ಹೋಗಿ ಹಣ ನೀಡುತ್ತಾನೆ. ಆದರೆ ಅದನ್ನು ಅಷ್ಟೇ ಪ್ರೀತಿಯಿಂದ ಸೀತಾ ಬೇಡ ಎಂದಾಗ ಬೇಸರವಾಗುವುದರ ಜೊತೆಗೆ ತನ್ನಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹತಾಶೆ ಪಡುತ್ತಾನೆ.

ಇದನ್ನೂ ಓದಿ: Seetha Raama: ಅಶೋಕ್ ಕೈಯಲ್ಲಿ ಸಿಕ್ಕಿಬೀಳುತ್ತಾಳಾ ಆಫೀಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದ ಭಾರ್ಗವಿ? 

ಆ ದುಡ್ಡನ್ನು ನೀವೇ ಉಪಯೋಗಿಸಿ ಎಂದು ಸಲಹೆ ನೀಡಿದ ಸೀತಾ, ಹಿಂದೆ ಆದ ಪ್ರೀತಿಯೇ, ಮುಂದೆ ನಿಮಗೆ ಸ್ಫೂರ್ತಿಯಾಗಬೇಕು ಎನ್ನುತ್ತಾಳೆ. ‘ಪ್ರೀತಿ ಆಗಿದೆ ಅಂತ ಗೊತ್ತಿಲ್ಲದೇ ಆಗೋದೇ ಪ್ರೀತಿ’ ಎಂಬ ಮಾತಿನಿಂದ ರಾಮನ ಮನಸ್ಸನ್ನು ಗೆಲ್ಲುತ್ತಾಳೆ.  ಅದೇ ಖುಷಿಯಲ್ಲಿ ರಾಮ್ ಅವಳನ್ನು ಕಿಚಾಯಿಸುತ್ತಾನೆ. ಅದಕ್ಕೆ ಅವಳು ಕೂಡ ಅವನಿಗೆ ಪ್ರತ್ಯುತ್ತರ ಕೊಟ್ಟು ಹಣವನ್ನು ಪ್ರೀತಿಯಿಂದ ತಿರಸ್ಕರಿಸಿ ನಡೆಯುತ್ತಾಳೆ. ಅವನು ಅಂದು ಕೊಂಡಂತೆ ಆಗದಿದ್ದರೂ ಸೀತಾಳ ಮಾತು ಅವನನ್ನು ಕರಗಿಸುತ್ತದೆ. ಮುಂದೇನಾಗಬಹುದು? ರಾಮನಿಗೆ ಗೊತ್ತಿಲ್ಲದೇ, ಸೀತಾಳ ಮೇಲೆ ಪ್ರೇಮ ಹುಟ್ಟುತ್ತಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ