Seetha Raama: ಅಶೋಕ್ ಕೈಯಲ್ಲಿ ಸಿಕ್ಕಿಬೀಳುತ್ತಾಳಾ ಆಫೀಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದ ಭಾರ್ಗವಿ?
Seetha Raama: ಲೇಡಿಸ್ ಕ್ಲಬ್ನಲ್ಲಿರುವುದು ಭಾರ್ಗವಿ ಹೌದೋ ಅಲ್ಲವೋ ಎಂಬ ಅನುಮಾನ ಬಗೆಹರಿಸಿಕೊಳ್ಳಲು ಅಶೋಕ್ ರಾಮನ ಮನೆಗೆ ಬರುತ್ತಾನೆ. ಆದರೆ ಭಾರ್ಗವಿ ಮನೆಯಲ್ಲಿರುವುದನ್ನು ನೋಡಿ ತನ್ನ ಲೆಕ್ಕಾಚಾರ ಹೇಗೆ ತಪ್ಪಾಯಿತು ಎಂದು ಯೋಚಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮನ ಚಿಕ್ಕಮ್ಮ, ಭಾರ್ಗವಿ ಬಳಿ ನೀವು ಲೇಡಿಸ್ ಕ್ಲಬ್ ಗೆ ಇನ್ನು ಹೋಗಿಲ್ಲವಾ? ಎಂದು ಕೇಳುತ್ತಾಳೆ. ಈ ಸುಳಿವು ಅಶೋಕ್ ನಿಗೆ, ಭಾರ್ಗವಿಯೇ ಈ ಆಟಕ್ಕೆಲ್ಲಾ ಸೂತ್ರಧಾರಿ ಎಂಬುದು ತಿಳಿಯುತ್ತಾ?
‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 63: ಬ್ಯಾಂಕ್ನವರು ಎಂದು ಸುಳ್ಳು ಹೇಳಿ ಬಂದ ಗುಂಡಾಗಳು ರಾಮ್ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ. ಏನು ಅರಿಯದ ಸೀತಾಳನ್ನು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳಬೇಕೆಂದಿದ್ದ ಲಾಯರ್ ರುದ್ರ ಪ್ರತಾಪ್, ಪುಡಿ ರೌಡಿಗಳನ್ನು ಕಳುಹಿಸಿರುತ್ತಾನೆ. ಆದರೆ ಅವರು ಸೀತಾಳನ್ನು ಹೆದರಿಸುವುದನ್ನು ನೋಡಿದ ರಾಮ್, ಅವರ ಬಗ್ಗೆ ವಿಚಾರಿಸುತ್ತಾನೆ. ಅವನ ಮಾತಿಗೆ ಹೆದರಿದ ರೌಡಿಗಳು ಅಲ್ಲಿಂದ ಪರಾರಿಯಾಗುತ್ತಾರೆ. ಈ ವಿಷಯ ರುದ್ರ ಪ್ರತಾಪ್ಗೂ ತಿಳಿದು, ತನ್ನ ಪ್ಲಾನ್ ಹಾಳಾದ ಸಿಟ್ಟಿಗೆ ಕೆಂಡಕಾರುತ್ತಾನೆ.
ಇನ್ನು ಅಶೋಕ್ ರಾಮನ ಬದಲು ಫೈಲ್ ತೆಗೆದುಕೊಂಡು, ಮ್ಯಾನೇಜರ್ ಚರಣ್ ಕೊಟ್ಟಿರುವ ವಿಳಾಸ ಹಿಡಿದುಕೊಂಡು ಹೊರಡುತ್ತಾನೆ. ಏನಾದರೂ ಮಾಡಿ ಇದರ ಹಿಂದಿರುವ ಕೈ ಯಾರು ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ಅವರ ಆಸೆಯಾದರೂ, ಕಳ್ಳನ ನಡೆ ಹೇಗಿರಬಹುದು ಎಂಬುದು ತಿಳಿದಿಲ್ಲದ ಕಾರಣ ನಿಧಾನವಾಗಿ ಅವರನ್ನು ಹಿಡಿಯಬೇಕು ಎಂದು ತೀರ್ಮಾನ ಮಾಡಿಕೊಳ್ಳುತ್ತಾರೆ. ಆದರೆ ಈ ವಿಷಯ ರಾಮನಿಂದ ಚರಣ್ಗೆ ತಿಳಿದು ಅವನು ಭಾರ್ಗವಿಯನ್ನು ಎಚ್ಚರಿಸುತ್ತಾನೆ. ಅದನ್ನು ತಿಳಿದು ಅವಳು ತನ್ನ ಮಾರ್ಗ ಬದಲಾಯಿಸುತ್ತಾಳೆ.
ಇದನ್ನೂ ಓದಿ: ದಕ್ಷಿಣದಲ್ಲೂ ಬಾಲಿವುಡ್ನಲ್ಲೂ ಬ್ಯುಸಿ ಆದ ‘ಸೀತಾ ರಾಮಂ’ ಸುಂದರಿ
ಸಿಹಿಯನ್ನು ಸ್ಕೂಲ್ ನಿಂದ ಕರೆದುಕೊಂಡು ಹೋಗಲು ಬಂದ ರಾಮ್ ಮತ್ತು ಸೀತಾ ಅವಳ ಬೇಡಿಕೆ ಕೇಳಿ ಹೆದರುತ್ತಾರೆ. ಫ್ರೆಂಡ್ ಮನೆಗೆ ಹೋಗೋಣ ಎಂದು ಹಠ ಮಾಡುತ್ತಾಳೆ. ರಾಮ್ ನಿಗೆ ಕರೆದುಕೊಂಡು ಹೋಗುವ ಹಾಗಿಲ್ಲ, ಬೇಡ ಎಂದರೆ ಅವಳಿಗೆ ಬೇಸರವಾಗುತ್ತದೆ ಹಾಗಾಗಿ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ, ಬಳಿಕ ಹೋಗೋಣ ಎನ್ನುತ್ತಾನೆ. ಇನ್ನು ಲೇಡಿಸ್ ಕ್ಲಬ್ ನಲ್ಲಿರುವುದು ಭಾರ್ಗವಿ ಹೌದೋ ಅಲ್ಲವೋ ಎಂಬ ಅನುಮಾನ ಬಗೆಹರಿಸಿಕೊಳ್ಳಲು ಅಶೋಕ್ ರಾಮನ ಮನೆಗೆ ಬರುತ್ತಾನೆ. ಆದರೆ ಭಾರ್ಗವಿ ಮನೆಯಲ್ಲಿರುವುದನ್ನು ನೋಡಿ ತನ್ನ ಲೆಕ್ಕಾಚಾರ ಹೇಗೆ ತಪ್ಪಾಯಿತು ಎಂದು ಯೋಚಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮನ ಮತ್ತೊಂದು ಚಿಕ್ಕಮ್ಮ, ಭಾರ್ಗವಿ ಬಳಿ ನೀವು ಲೇಡಿಸ್ ಕ್ಲಬ್ಗೆ ಇನ್ನು ಹೋಗಿಲ್ಲವಾ? ಎಂದು ಕೇಳುತ್ತಾಳೆ. ಈ ಸುಳಿವು ಅಶೋಕ್ನಿಗೆ, ಭಾರ್ಗವಿಯೇ ಈ ಆಟಕ್ಕೆಲ್ಲಾ ಸೂತ್ರಧಾರಿ ಎಂಬುದು ತಿಳಿಯುತ್ತಾ? ಮುಂದೇನಾಗಬಹುದು? ಕಾದು ನೋಡೋಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ