ಬಿಗ್ ಬಾಸ್​ ಮನೆಯಲ್ಲಿ ಶಾಕ್ ಮತ್ತು ಸರ್​ಪ್ರೈಸ್; ಹಿರಿಯ ನಟಿಯ ಎಂಟ್ರಿ

ತಾರಾ ಅವರು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ರಾಜ ರಾಣಿ’ ಹಾಗೂ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದರು. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್​ ಮನೆಯಲ್ಲಿ ಶಾಕ್ ಮತ್ತು ಸರ್​ಪ್ರೈಸ್; ಹಿರಿಯ ನಟಿಯ ಎಂಟ್ರಿ
ಬಿಗ್ ಬಾಸ್
Updated By: ರಾಜೇಶ್ ದುಗ್ಗುಮನೆ

Updated on: Oct 24, 2023 | 10:00 AM

ಈ ಬಾರಿಯ ಬಿಗ್ ಬಾಸ್ (Bigg Boss) ಮೂರನೇ ವಾರಕ್ಕೆ ಸಾಕಷ್ಟು ಕುತೂಹಲ ಘಟ್ಟ ತಲುಪಿದೆ. ಮನೆಯಲ್ಲಿ ಜಗಳದ ಕಾವು ಜೊರಾಗಿದೆ. ಮತ್ತೊಂದು ಕಡೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ವರ್ತೂರು ಸಂತೋಷ್ (Vartur Santosh) ಅವರು ಏಕಾಏಕಿ ಎಗ್ಸಿಟ್ ಆಗಿದ್ದು ಮನೆಯವರಿಗೆ ಶಾಕಿಂಗ್ ಎನಿಸಿದೆ. ಇನ್ನು, ನಿಯಮ ಮುರಿದ ಎಲ್ಲರಿಗೂ ಬಿಗ್ ಬಾಸ್ ಮರಳಿನ ಮೂಟೆ ಹೊತ್ತಿಕೊಳ್ಳುವ ಶಿಕ್ಷೆ ನೀಡಿದ್ದಾರೆ. ಈ ಮಧ್ಯೆ ದೊಡ್ಮನೆಗೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ. ಅಷ್ಟಕ್ಕೂ ಯಾರವರು? ತಾರಾ. ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಆಚರಣೆ ಇತ್ತು. ಈ ಕಾರಣಕ್ಕೆ ತಾರಾ ಅವರನ್ನು ಅತಿಥಿಯಾಗಿ ಕರೆಸಲಾಗಿದೆ.

ತಾರಾ ಅವರು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ರಾಜ ರಾಣಿ’ ಹಾಗೂ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದರು. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲರೂ ಹೊಸಬಟ್ಟೆ ಧರಿಸಿ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಈ ವಿಶೇಷ ದಿನಕ್ಕೆ ತಾರಾ ಅವರು ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್ ಬಾಸ್​ಗೆ ಮನೆಗೆ ಬಂದರು. ಅವರ ಆಗಮನದಿಂದ ಎಲ್ಲರಿಗೂ ಖುಷಿ ಆಗಿದೆ. ಕೆಲವು ಫನ್ ಆ್ಯಕ್ಟಿವಿಟಿ ಮಾಡಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಎಷ್ಟು ಗ್ರಾಂ ಚಿನ್ನ ಧರಿಸುತ್ತಿದ್ದರು?

ಬಿಗ್ ಬಾಸ್​ ಸಾಂಗ್ ಪ್ಲೇ ಮಾಡಲಾಗಿದೆ. ಈ ಸಾಂಗ್ ಯಾರಿಗೆ ಸೂಕ್ತ ಎನಿಸುತ್ತದೆ ಎನ್ನುವುದನ್ನು ಸ್ಪರ್ಧಿಗಳು ಹೇಳಬೇಕು. ಈ ವೇಳೆ ಕಾರ್ತಿಕ್ ಫ್ಲರ್ಟ್ ಮಾಡುತ್ತಾರೆ ಎಂದು ಮನೆಯವರು ತಾರಾ ಎದುರು ದೂರು ನೀಡಿದರು. ‘ನೀನು ಫ್ಲರ್ಟ್ ಬೇರೆ ಮಾಡ್ತೀಯಾ’ ಎಂದು ತಾರಾ ಅಚ್ಚರಿಗೊಂಡರು. ಇದಕ್ಕೆ ಮನೆಯವರೆಲ್ಲ ‘ಸಿಕ್ಕಾಪಟ್ಟೆ ಫ್ಲರ್ಟ್ ಮಾಡ್ತಾನೆ’ ಎಂದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Tue, 24 October 23