‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್​ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್

Agnisakshi Serial Re-Union: ಅಗ್ನಿಸಾಕ್ಷಿ ಧಾರಾವಾಹಿಯ ನಟ-ನಟಿಯರು ಐದು ವರ್ಷಗಳ ಬಳಿಕ ಮರುಸೇರ್ಪಡೆಗೊಂಡಿದ್ದಾರೆ. ವೈಷ್ಣವಿ ಗೌಡ, ಸುಕೃತಾ ನಾಗ್ ಮತ್ತು ಇತರರು ಭಾಗವಹಿಸಿದ್ದರು.ಈ ಸಂದರ್ಭದ ವಿಡಿಯೋನ ವೈಷ್ಣವಿ ಗೌಡ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ .

‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್​ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್
ಅಗ್ನಿಸಾಕ್ಷಿ ಧಾರಾವಾಹಿ
Updated By: ರಾಜೇಶ್ ದುಗ್ಗುಮನೆ

Updated on: Sep 07, 2025 | 11:58 AM

‘ಅಗ್ನಿಸಾಕ್ಷಿ’ ಧಾರಾವಾಹಿ ಬಗ್ಗೆ ಯಾರಿಗೆತಾನೇ ಗೊತ್ತಿಲ್ಲ ಹೇಳಿ. ಹಲವು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರ ಕಂಡಿತು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ (Vaishnavi Gowda), ಸುಕೃತಾ ನಾಗ್, ವಿಜಯ್ ಸೂರ್ಯ, ರಾಜೇಶ್ ಧ್ರುವ, ಪ್ರಿಯಾಂಕಾ, ಶೋಭಾ ಶೆಟ್ಟಿ, ಇಶಿತಾ ವರ್ಷಾ, ಮುಖ್ಯಮಂತ್ರಿ ಚಂದ್ರು ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಧಾರಾವಾಹಿ ತಂಡದವರ ರೀ-ಯೂನಿಯ್​ ನಡೆದಿದೆ. ಈ ಸಂದರ್ಭದ ವಿಡಿಯೋನ ತಂಡವು ಹಂಚಿಕೊಂಡಿದೆ ಎಂಬುದು ವಿಶೇಷ.

‘ಅಗ್ನಿಸಾಕ್ಷಿ’ ಧಾರಾವಾಹಿಯು ಪ್ರಸಾರ ಆರಂಭಿಸಿದ್ದು 2013ರ ಡಿಸೆಂಬರ್ 2ರಂದು. ಈ ಧಾರಾವಾಹಿ 2020ರ ಜನವರಿ 3ರಂದು ತನ್ನ ಕೊನೆಯ ಎಪಿಸೋಡ್​ನ ಪ್ರಸಾರ ಮಾಡಿತು. ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿತು ಮತ್ತು ಮೈಸೂರು ಮಂಜು ಅವರು ಇದನ್ನು ನಿರ್ದೇಶನ ಮಾಡಿದರು. ವೈಷ್ಣವಿ ಗೌಡ ಅವರು ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡರೆ, ವಿಜಯ್ ಸೂರ್ಯ ಅವರು ಸಿದ್ದಾರ್ಥ್ ಪಾತ್ರದಲ್ಲಿ ನಟಿಸಿದರು.

ಇದನ್ನೂ ಓದಿ
ಸೂರ್ಯವಂಶಿ ನಟ ನಿಧನ; ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ ಚಿತ್ರರಂಗಕ್ಕೆ ಎಂಟ್ರಿ
SIIMA 2025 Telugu: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಅವಾರ್ಡ್
ಸೈಮಾ 2025: ಸುದೀಪ್ ಅತ್ಯುತ್ತಮ ನಟ, ಸಂಪೂರ್ಣ ವಿನ್ನರ್ ಪಟ್ಟಿ
ಬಿಗ್ ಬಾಸ್​ಗೆ ನಿರ್ಮಾಣ ಆಗಿದೆ ಬೇರೆಯದೇ ಮನೆ; ಹೇಗಿದೆ ಈ ಬಾರಿಯ ಸೆಟ್?

ಈಗ ಧಾರಾವಾಹಿ ತಂಡದವರು ಒಂದು ಕಡೆ ಸೇರಿದ್ದಾರೆ. ಈ ಧಾರಾವಾಹಿ ಪೂರ್ಣಗೊಂಡು ಐದು ವರ್ಷಗಳು ಕಳೆದಿರುವುದರಿಂದ ಎಲ್ಲರ ಬದುಕು ಭಿನ್ನ ಭಿನ್ನವಾಗಿವೆ. ಅನೇಕರಿಗೆ ವಿವಾಹ ಆಗಿದ್ದು, ಎಲ್ಲರೂ ತಮ್ಮದೇ ಲೈಫ್ ಬ್ಯುಸಿ ಇದ್ದಾರೆ. ಆದರೆ ಈಗ ಸಮಯ ಮಾಡಿಕೊಂಡು ಮತ್ತೊಮ್ಮೆ ಸೇರಿದ್ದಾರೆ. ಈ ವಿಡಿಯೋನ ವೈಷ್ಣವಿ ಗೌಡ ಮೊದಲಾದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಖುಷಿಯಿಂದ ಕಮೆಂಟ್ ಮಾಡುತ್ತಾ ಇದ್ದಾರೆ. ಕುಳ್ಳಿ ಎಂದು ಕರೆದಿದ್ದಕ್ಕೆ ಸುಕೃತಾ ಫನ್ ಆಗಿ ‘ನನ್ನನ್ನೇಕೆ ಕುಳ್ಳಿ’ ಎಂದೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಗ್ನಿಸಾಕ್ಷಿ ರೀ ಯೂನಿಯನ್ ವಿಡಿಯೋ

ವೈಷ್ಣವಿ ಗೌಡ ಅವರಿಗೆ ವಿವಾಹ ಆಗಿದೆ. ಅವರು ಅನುಕೂಲ್ ಮಿಶ್ರಾ ಅವರನ್ನು ವಿವಾಹ ಆಗಿದ್ದಾರೆ. ಅದೇ ರೀತಿ ಈ ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದ ಇಶಿತಾ ವರ್ಷಾಗೂ ಮದುವೆ ಆಗಿದೆ. ಎಲ್ಲರೂ ಖುಷಿ, ಖುಷಿಯಿಂದ ರೀಯೂನಿಯನ್​ನಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ನಟಿ ವೈಷ್ಣವಿ ಗೌಡ ಭೇಟಿ ನೀಡಿದ ಸುಂದರ ತಾಣಗಳಿವು

ವೈಷ್ಣವಿ ಗೌಡ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಜೀ ಕನ್ನಡದ ‘ಸೀತಾ ರಾಮ’ ಧಾರಾವಾಹಿಯಲ್ಲಿ.  ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆಯಿತು. ಆ ಬಳಿಕ ವೈಷ್ಣವಿ ಗೌಡ ವಿವಾಹ ಆದರು. ಸದ್ಯ ಅವರು ಯಾವುದೇ ಹೊಸ ಧಾರಾವಾಹಿ ಘೋಷಣೆ ಮಾಡಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.