
ಅಕುಲ್ ಬಾಲಾಜಿ ಅವರು ಕೆಲವು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡಿ ಗಮನ ಸೆಳೆದಿದ್ದಿದೆ. ಅವರು ಯಾವಾಗಲೂ ತಮ್ಮ ಖಡಕ್ ನಿರೂಪಣೆಯಿಂದ ಇಷ್ಟ ಆಗುತ್ತಾರೆ. ಈಗ ಅವರು ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಿರುವ ‘ಹಳ್ಳಿ ಪವರ್’ (Halli Power) ರಿಯಾಲಿಟಿ ಶೋನ ನಡೆಸಿಕೊಡುತ್ತಿದ್ದಾರೆ. 12 ಸ್ಪರ್ಧಿಗಳು ಬೆಳಗಾವಿಯ ಸಂಗೊಳ್ಳಿ ಊರನ್ನು ಸೇರಿದ್ದಾರೆ. ಮೊದಲ ದಿನವೇ ಅಕುಲ್ ಬಾಲಾಜಿ ಅವರ ನಿಜವಾದ ಸ್ವರೂಪ ಗೊತ್ತಾಗಿದೆ.
ಅಕುಲ್ ಬಾಲಾಜಿ ಅವರು ಯಾವುದೇ ವಿಚಾರ ಇದ್ದರೂ ನೇರವಾಗಿ ಹೇಳುತ್ತಾರೆ. ಅವರು ಓಪನ್ ಆಗಿ ಹೇಳುವಾಗ ಸಾಫ್ಟ್ ಆಗಿ ಹೇಳಿದ ಉದಾಹರಣೆಯೇ ಇಲ್ಲ. ಅವರು ಯಾವಾಗಲೂ ತಮ್ಮ ಖಡಕ್ ಮಾತುಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಈಗ ‘ಹಳ್ಳಿ ಪವರ್’ನಲ್ಲೂ ಅವರ ಖಡಕ್ ನಿರೂಪಣೆ ಹೆಚ್ಚು ಸುದ್ದಿ ಆಗಿದೆ.
ಹಳ್ಳಿ ಸೇರಿದ ಪ್ಯಾಟೆ ಬೆಡಗಿಯರಿಗೆ ಮೊದಲ ದಿನವೇ ಹಾಲು ಕರೆಯೋ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಸಿದ್ಧತೆಗೋಸ್ಕರ ಯುವತಿಯರಿಗೆ ಪ್ರ್ಯಾಕ್ಟಿಸ್ ಕೂಡ ಕೊಡಿಸಲಾಯಿತು. ಬೇರೆ ಬೇರೆ ಮನೆಗಳಿಗೆ ತೆರಳಿ ಎಲ್ಲಾ ಸ್ಪರ್ಧಿಗಳು ಹಾಲು ಕರೆಯೋದನ್ನು ಅಭ್ಯಾಸ ಮಾಡಿಕೊಂಡರು. ಆದರೆ, ಟಾಸ್ಕ್ ನಡೆಯುವಾಗ ಹಾಲು ಕರೆಯೋದು ಅಷ್ಟು ಸುಲಭ ಆಗಿರಲೇ ಇಲ್ಲ ಎಂಬುದು ಎಲ್ಲರ ಅನುಭವಕ್ಕೆ ಬಂತು.
ಮಂಗಳೂರಿನ ಸ್ನೇಹಾ ಶೆಟ್ಟಿ ಅವರು ಎಷ್ಟೇ ಪ್ರಯತ್ನ ಮಾಡಿದರೂ ಒಂದೇ ಒಂದು ತೊಟ್ಟು ಹಾಲು ಕರೆಯೋಕೆ ಸಾಧ್ಯ ಆಗಲೇ ಇಲ್ಲ. ‘ಹಾಲು ಬರ್ತಾ ಇಲ್ಲ. ಈ ಎಮ್ಮೆಯಲ್ಲಿ ಹಾಲೇ ಇಲ್ಲ’ ಎಂದು ಹೇಳಿದರು. ಪ್ರಯತ್ನ ಹಾಕೋದು ಬಿಟ್ಟು ಅವರು ಕೈ ಚೆಲ್ಲಿದರು. ಆಗ ಎಮ್ಮೆಯ ಮಾಲೀಕರು ಬಂದು ಹಾಲು ಕರೆದು ತೋರಿಸಿದರು. ಆಗ ಸ್ನೇಹಾಗೆ ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ.
ಇದನ್ನೂ ಓದಿ: ಹಳ್ಳಿ ಪವರ್; ಹಾಲು ಕರೆಯೋ ಟಾಸ್ಕ್ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ
‘ಸ್ನೇಹಾ ಅವರೇ ಎಷ್ಟು ಹಾಲು ಕರೆದ್ರಿ’ ಎಂದು ಬಕೆಟ್ ನೋಡಿ ನೆಲಕ್ಕೆ ಎಸೆದೇ ಬಿಟ್ಟರು. ಆ ಬಳಿಕ ಸ್ನೇಹಾಗೆ ಏರು ಧ್ವನಿಯಲ್ಲಿ ಬೈದರು. ಇದರಿಂದ ಸ್ನೇಹಾಗೆ ಕಣ್ಣಲ್ಲಿ ನಿರೇ ಬಂದು ಬಿಟ್ಟಿತು. ಆದರೆ, ಅವರ ಪಾರ್ಟ್ನರ್ ಮೋನಿಷಾ 400 ಎಂಎಲ್ ಹಾಲು ಕರೆದಿದ್ದರಿಂದ ಸ್ನೇಹಾಗೆ ಗೆಲುವು ಸಿಕ್ಕಿತು. ಮುಂದಿನ ದಿನಗಳಲ್ಲಿ ಅಕುಲ್ ಬಾಲಾಜಿ ಅವರು ಮತ್ತಷ್ಟು ಉಗ್ರ ಸ್ವರೂಪ ತೋರಿಸೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.