
ರಜನಿ ಅವರು ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ (Serials) ನಟಿಸಿ ಫೇಮಸ್ ಆದವರು. ಅವರು ಈ ಧಾರಾವಾಹಿ ಮೂಲಕ ಅಮೃತಾ ಎಂದೇ ಫೇಮಸ್ ಆಗಿದ್ದರು. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಭರ್ಜರಿ ಆ್ಯಕ್ಟಿವ್ ಆಗಿದ್ದಾರೆ. ವಿವಿಧ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ವ್ಯಕ್ತಿಯೊಬ್ಬರ ಜೊತೆ ರೀಲ್ಸ್ ಮಾಡುತ್ತಿದ್ದರು. ಇದು ಅವರ ಬಾಯ್ಫ್ರೆಂಡ್ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಇಬ್ಬರೂ ಪತಿ-ಪತ್ನಿ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ಇದಕ್ಕೆ ರಜನಿ ಸ್ಪಷ್ಟನೆ ನೀಡಿದ್ದಾರೆ.
ರಜಿನಿ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆ ಬಳಿಕ ‘ಹಿಟ್ಲರ್ ಕಲ್ಯಾಣ್’ ಧಾರಾವಾಹಿಯಲ್ಲೂ ಕಾಣಿಸಿಕೊಂಡರು. ಅವರು ರಿಯಾಲಿಟಿ ಶೋಗಳಲ್ಲೂ ಕಾಣಿಸಿದರು. ಕೆಲವು ಶೋಗಳನ್ನು ಅವರು ಹೋಸ್ಟ್ ಮಾಡಿದರು. ಈಗ ಅವರ ಬಗ್ಗೆ ಹಬ್ಬಿದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ರಜನಿ ಅವರು ಅರುಣ್ ವೆಂಕಟೇಶ್ ಹೆಸರಿನ ಜಿಮ್ ಟ್ರೇನರ್ ಜೊತೆ ವಿಡಿಯೋ ಮಾಡುತ್ತಿದ್ದರು. ಇಬ್ಬರೂ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ರಜನಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋಗೆ ನೀಡಿದ ಸಂದರ್ಶನದಲ್ಲಿ ರಜನಿ ಮಾತನಾಡಿದ್ದಾರೆ.
‘ನಿಮ್ಮನ್ನು ಕರೆಯದೇ ಮದುವೆ ಆಗುತ್ತೇನಾ? ಕದ್ದು ಮುಚ್ಚಿ ಮದುವೆ ಮಾಡಿಕೊಳ್ಳುವ ಅವಶ್ಯಕತೆ ಏನಿದೆ? ಮದುವೆ ಖುಷಿ ವಿಚಾರ. ಎಲ್ಲರ ಜೊತೆ ಹಂಚಿಕೊಂಡು ಖುಷಿಪಡಬೇಕು. ಮದುವೆ ಆಗಿಲ್ಲ ಅಂದಮೇಲೆ ಎಲ್ಲಿಂದ ಕರೆಯೋದು. ಗಾಸಿಪ್ ಅನ್ನೋದು ಬೆನ್ನಿಗೆ ಅಂಟಿರೋ ಭೂತ’ ಎಂದು ರಜನಿ ಹೇಳಿದ್ದಾರೆ.
ಇದನ್ನೂ ಓದಿ: ಸಂಜನಾ ಬುರ್ಲಿ ಹೊಸ ಧಾರಾವಾಹಿಯ ಪ್ರೋಮೋದಲ್ಲೇ ದೊಡ್ಡ ಟ್ವಿಸ್ಟ್
‘ನಾವು ಗಂಡ-ಹೆಂಡತಿ ಅಲ್ಲ. ವಿಡಿಯೋ ಪಾರ್ಟ್ನರ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ತಪ್ಪೇನಿಲ್ಲ. ಸ್ನೇಹಿತರೇ ಜಾಸ್ತಿ ಅರ್ಥ ಮಾಡಿಕೊಂಡಿರುತ್ತಾರೆ. ಫ್ರೆಂಡ್ಸ್ ಹಲವು ವರ್ಷಗಳಿಂದ ಜೊತೆಯಲ್ಲೇ ಇರುತ್ತಾರೆ. ಅವರಿಗೆ ಕಷ್ಟ-ಸುಖ ಗೊತ್ತಿರುತ್ತದೆ. ಬೇರೆಯವರನ್ನು ಮದುವೆ ಆದರೂ ತಪ್ಪಿಲ್ಲ’ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.