ಸಂಜನಾ ಬುರ್ಲಿ ಹೊಸ ಧಾರಾವಾಹಿಯ ಪ್ರೋಮೋದಲ್ಲೇ ದೊಡ್ಡ ಟ್ವಿಸ್ಟ್
ಸಂಜನಾ ಬುರ್ಲಿ ಅವರು ಕಲರ್ಸ್ ಕನ್ನಡದ ಹೊಸ ಧಾರಾವಾಹಿ "ಶ್ರೀ ಗಂಧದಗುಡಿ"ಯಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಈ ಧಾರಾವಾಹಿಯಲ್ಲಿ ಶಿಶಿರ್ ಮತ್ತು ಭವಿಷ್ ಗೌಡ ಕೂಡ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ಸಂಜನಾ ಮತ್ತು ಭವಿಷ್ ಅವರ ಮದುವೆಯ ದೃಶ್ಯವಿದೆ. ಹಳೆಯ ಮನೆಯಲ್ಲಿ ನಡೆಯುವ ಕಥಾವಸ್ತು ಮತ್ತು ಸಂಜನಾ ಅವರ ಪಾತ್ರದ ಸವಾಲುಗಳು ಈ ಧಾರಾವಾಹಿಯ ಮುಖ್ಯ ಅಂಶಗಳು.

ಸಂಜನಾ ಬುರ್ಲಿ (Sanjana Burli) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಈ ಪಾತ್ರ ಅರ್ಧದಲ್ಲೇ ಕೊನೆಗೊಂಡಿತು. ಈಗ ಅವರು ಕಲರ್ಸ್ ಕನ್ನಡದ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಮೊದಲ ಶಾಟ್ನಲ್ಲೇ ಸಂಜನಾ ವಿವಾಹ ನೆರವೇರಿದೆ.
ಸಂಜನಾ ಬುರ್ಲಿ ಅವರು ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಧಾರಾವಾಹಿ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಿಶಿರ್ ಇದ್ದಾರೆ. ಇವರ ಜೊತೆ ಭವಿಷ್ ಗೌಡ ಕೂಡ ಇದ್ದಾರೆ.
ಭವಿಷ್ ಗೌಡ, ಶಿಶಿರ್ ಮೊದಲಾದವರು ಒಂದೇ ತಾಯಿ ಮಕ್ಕಳು. ಇವರಿಗೆ ಇರೋದು ಹಳೆಯ ಮನೆ ಮಾತ್ರ. ಈ ಮನೆಗೆ ಸೊಸೆಯಾಗಿ ಬರುವವಳು ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಾಳೆ ಎಂಬ ನಂಬಿಕೆ ಆ ಸಹೋದರರದ್ದು. ಈ ಮನೆಗೆ ಸಂಜನಾ ಬುರ್ಲಿ ಬರುತ್ತಾಳೆ. ಭವಿಷ್ ಗೌಡಗೆ ಜೋಡಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.
View this post on Instagram
ಮೊದಲ ಶಾಟ್ನಲ್ಲೇ ಭವಿಷ್ ಹಾಗೂ ಸಂಜನಾ ವಿವಾಹ ಆಗಿದೆ. ಈ ಮೂಲಕ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಮದುವೆ ಆಗಿ ಬರುತ್ತಿದ್ದಂತೆ ಮನೆಯ ಪರಿಸ್ಥಿತಿ ನೋಡಿ ಅವರು ಕಂಗಾಲಾಗಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ಅವರನ್ನು ಬಲವಾಗಿ ಕಾಡಿದೆ. ಮನೆ ಪೂರ್ತಿ ಧೂಳಿನಿಂದ ತುಂಬಿದೆ. ಗ್ಯಾಸ್ ಒಲೆ ಸರಿಯಾಗಿ ಇಲ್ಲ. ಇಂತಹ ಮನೆಯಲ್ಲಿ ಅವರು ಸಂಸಾರ ಹೇಗೆ ನಡೆಸಿಕೊಂಡು ಹೋಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಕಲರ್ಸ್ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ
ಈ ಧಾರಾವಾಹಿಗೆ ಶಿಶರ್ ಹೀರೋ. ಹೀಗಾಗಿ, ಇನ್ನೂ ಒಬ್ಬರು ಕಥಾ ನಾಯಕಿ ಇದ್ದಾರೆ ಎನ್ನಲಾಗಿದೆ. ಅವರು ಐಶ್ವರ್ಯಾ ಶಿಂಧೋಗಿ ಅವರೇ ಇರಬಹುದು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಈ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಿಗ್ ಬಾಸ್ ಬಳಿಕ ಶಿಶಿರ್ ಹಾಗೂ ಐಶ್ವರ್ಯಾ ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ. ಒಟ್ಟೊಟ್ಟಿಗೆ ರೀಲ್ಸ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Mon, 25 August 25








