- Kannada News Photo gallery Sanjana Burli New Serial In Colors Kannada With Shishir Titled Ganddhada Gudi
ಕಲರ್ಸ್ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ
Sanjana Burli New Serial: ನಟಿ ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರು ಅರ್ಧದಲ್ಲಿ ಧಾರಾವಾಹಿಯನ್ನು ತೊರೆದಿದ್ದರು. ಈಗ ಅವರ ನಟನೆಯ ಹೊಸ ಧಾರಾವಾಹಿ ಬರಲಿದೆ. ಈ ಬಗ್ಗೆ ಮಾಹಿತಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.
Updated on: Aug 19, 2025 | 12:48 PM

ನಟಿ ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದರು. ಸ್ನೇಹಾ ಹೆಸರಿನ ಪಾತ್ರವನ್ನು ಅವರು ಮಾಡಿದ್ದರು. ಅವರ ಪಾತ್ರ ಅರ್ಧದಲ್ಲೇ ಕೊನೆ ಆಯಿತು. ಆ ಬಳಿಕ ಅವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಈಗ ಸಂಜನಾ ಬುರ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅವರು ಹೊಸ ಧಾರಾವಾಹಿಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಅವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಶಿಶಿರ್ ಅವರು ‘ಗಂಧದ ಗುಡಿ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಈ ಧಾರಾವಾಹಿಗೆ ಸಂಜನಾ ಅವರು ನಾಯಕಿ ಆಗಿ ಆಯ್ಕೆ ಆಗಿದ್ದಾರಂತೆ.

ಸಂಜನಾ ಅವರು ಈ ಮೊದಲು ‘ಲಗ್ನ ಪತ್ರಿಕೆ’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಅವರ ಜನಪ್ರಿಯತೆ ಹೆಚ್ಚಿಸಿತು. ಈಗ ಅವರಿಗೆ ಹೊಸ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಸಿಕ್ಕಿದೆ.

ಸಂಜನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ವಿವಿಧ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಹೊಸ ಧಾರಾವಾಹಿಯಲ್ಲಿ ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಮೂಡಿದೆ.




