AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರು ಡಿಜಿಟ್..’; ಸಂಭಾವನೆ ವಿಚಾರ ಹೇಳಿದ ಜೆಡಿ ಪಾತ್ರಧಾರಿ ರಾಣವ್

Serial actors remuneration: ‘ಅಮೃತಧಾರೆ’ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ಪಾತ್ರದಲ್ಲಿ ರಾಣವ್ ಕಾಣಿಸಿಕೊಂಡಿದ್ದಾರೆ. ಈ ಮೊದಲು ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು. ಅವರು ಹೊಸ ಧಾರಾವಾಹಿಯಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸ್ವತಃ ಅವರೇ ಆರೋಪಕ್ಕೆ ಉತ್ತರಿಸಿದ್ದಾರೆ.

‘ಆರು ಡಿಜಿಟ್..’; ಸಂಭಾವನೆ ವಿಚಾರ ಹೇಳಿದ ಜೆಡಿ ಪಾತ್ರಧಾರಿ ರಾಣವ್
Raanav Gowda
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on:Aug 24, 2025 | 10:31 PM

Share

‘ಅಮೃತಧಾರೆ’ ಧಾರಾವಾಹಿಯಲ್ಲಿ (Serial) ಜಯದೇವ್ ದಿವಾನ್ ಪಾತ್ರದಲ್ಲಿ ರಾಣವ್ ಕಾಣಿಸಿಕೊಂಡಿದ್ದಾರೆ. ಈ ಮೊದಲು ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು. ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಪ್ರಮುಖ ವಿಲನ್. ಅಲ್ಲದೆ, ಜೀ ಪವರ್​ನಲ್ಲಿ ಬರಲಿರೋ ಧಾರಾವಾಹಿಯಲ್ಲಿ ಹೀರೋ ಪಾತ್ರ ಮಾಡುತ್ತಿದ್ದಾರೆ. ಅವರು ತಮ್ಮ ಕಷ್ಟದ ದಿನಗಳ ಬಗ್ಗೆ, ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಜಯದೇವ್ ಅವರು ಕಥಾ ನಾಯಕ ಗೌತಮ್ ದಿವಾನ್ ಸಹೋದರ. ಆತ ತಾಯಿ ಶಕುಂತಲಾ ರೀತಿಯೇ ಕೆಟ್ಟ ಬುದ್ಧಿ ಕಲಿತಿದ್ದಾನೆ. ತಾಯಿಯಂತೆ ಆತನದ್ದೂ ಎಲ್ಲವೂ ಕುತಂತ್ರ ಬುದ್ಧಿಗಳೇ. ಈ ರೀತಿ ಕುತಂತ್ರದಲ್ಲಿ ಆತ ಮುಂದೆ ಇದ್ದಾನೆ. ಈ ಕಾರಣದಿಂದಲೇ ಆತ ಮನೆಯಿಂದ ಗಡಿಪಾರಾಗಿದ್ದಾನೆ. ಅವರ ನಟನೆ ಇಷ್ಟ ಆಗಿದೆ. ಈಗ ರಾಣವ್ ಜೀ ಪವರ್​​ನ ‘ಶುಭಸ್ಯ ಶೀಘ್ರಂ’ ಧಾರಾವಾಹಿಗೆ ಹೀರೋ ಆಗಿದ್ದಾರೆ. ಅವರು ಸಂಭಾವನೆ ವಿಚಾರದ ಬಗ್ಗೆ ಬಾಸ್ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:‘ಅಮೃತಧಾರೆ’ ಅಬ್ಬರಕ್ಕೆ ಟಿಆರ್​ಪಿ ಮೀಟರ್ ಶೇಕ್; ಉಳಿದ ಧಾರಾವಾಹಿಗಳ ಕಥೆ ಏನು?

‘ದುಡ್ಡಿನ ಆಸೆಗೆ ಬಿದ್ದರೆ ಪಾತ್ರ ಹೋಗುತ್ತದೆ. ಹಲವು ಪಾತ್ರಗಳನ್ನು ಕಡಿಮೆಗೆ ಒಪ್ಪಿಕೊಂಡಾಗ ಪೂರ್ತಿ ಹಣ ಕೊಟ್ಟಿಲ್ಲ. ಜೂನಿಯರ್ ಆರ್ಟಿಸ್ಟ್ ಆದಾಗ 400 ಕೊಡುತ್ತೀನಿ ಎನ್ನುತ್ತಿದ್ದರು. ಆಮೇಲೆ ಪೂರ್ತಿ ಹಣ ಕೊಡುತ್ತಿರಲಿಲ್ಲ. ಒಂದು ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಕ್ಕೆ 1000 ರೂಪಾಯಿ ಕೊಡ್ತೀನಿ ಎಂದರು. ಖುಷಿಯಿಂದ ಗಡ್ಡ ಹಾಗೂ ತಲೆ ಕೂದಲು ಟ್ರಿಮ್ ಮಾಡಿಸಿಕೊಂಡು ಹೋದೆ. ಅದಕ್ಕೆ 300-400 ಖರ್ಚಾಯಿತು. ಆ ಮೇಲೆ ಬರುವಾಗ 50 ರೂಪಾಯಿ ಕೊಟ್ಟರು. ಕಣ್ಣೀರು ಹಾಕುತ್ತಾ ಮನೆಗೆ ಬಂದಿದ್ದೆ’ ಎಂದಿದ್ದಾರೆ ರಾಣವ್.

View this post on Instagram

A post shared by BOSS TV (@bosstvkannada)

‘ಅವುಗಳನ್ನು ಈ ರೀತಿ ಮರೆತಿಲ್ಲ. ಎಲ್ಲಾ ರೀತಿಯನ್ನೂ ನೋಡಿದ್ದೇನೆ. ಜೀವನ ನಡೆಸುವಷ್ಟು ಬರ್ತಿದೆ. 6 ಡಿಜಿಟ್, 7 ಡಿಜಿಟ್ ಉಳಿಸುವಷ್ಟು ಹಣ ಬರುತ್ತಿಲ್ಲ’ ಎಂದಿದ್ದಾರೆ ರಾಣವ್. ಜೀ ಪವರ್ ಆಗಸ್ಟ್ 23ರಿಂದ ಆರಂಭ ಆಗುತ್ತಿದೆ. ಇಷ್ಟು ದಿನ ರಾಣವ್ ಅವರನ್ನು ವಿಲನ್ ಆಗಿ ಎಲ್ಲರೂ ನೋಡಿದ್ದಾರೆ. ಹೀರೋ ಆಗಿ ಅವರು ಹೇಗೆ ಕಾಣಿಸುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Sun, 24 August 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ