‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನಲ್ಲಿ ದರ್ಶನ್ ಧರಿಸಿದ್ದ ಜಾಕೆಟ್ ಬೆಲೆಯಲ್ಲಿ ಒಂದು ಬೈಕ್ ಬರುತ್ತೆ
Darshan‘s Jacket Price: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಅವರ ‘ಡೆವಿಲ್’ ಸಿನಿಮಾದ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ದರ್ಶನ್ ಧರಿಸಿರುವ ದುಬಾರಿ ಡಿಸೆಲ್ ಜಾಕೆಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚಿತ್ರದ ರಿಲೀಸ್‌ಗೆ ಅಭಿಮಾನಿಗಳು ಕಾತುರರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾದ (Devil Movie) ರಿಲೀಸ್‌ಗೆ ಸಿದ್ಧತೆ ನಡೆದಿದೆ. ಈ ಚಿತ್ರದ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಆಗಸ್ಟ್ 24ರಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ದರ್ಶನ್ ಅವರು ಹಾಕಿದ್ದ ಜಾಕೆಟ್ ಗಮನ ಸೆಳೆದಿದೆ. ಈ ಜಾಕೆಟ್ನ ಬೆಲೆಯನ್ನು ಕೆಲ ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ. ಈ ಬೆಲೆಯಲ್ಲಿ ಒಂದು ಬೈಕ್ನೇ ಖರೀದಿಸಬಹುದಾಗಿದೆ.
‘ಡೆವಿಲ್’ ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಒಳ್ಳೆಯ ಶೇಡ್ನ ಪಾತ್ರವಾದರೆ, ಮತ್ತೊಂದು ನೆಗೆಟಿವ್ ಶೇಡ್ನ ಪಾತ್ರ. ಈ ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಚಿತ್ರದ ಬಗ್ಗೆ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ ಕಂಡಿದೆ. ಈ ಹಾಡನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಹಾಡಿನಲ್ಲಿ ದರ್ಶನ್ ಡಿಸೆಲ್ ಕಂಪನಿಯ ಕೆಂಪು ಬಣ್ಣದ ಜಾಕೆಟ್ ಒಂದನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಈ ಜಾಕೆಟ್ ಎಲ್ಲರ ಗಮನ ಸೆಳೆದಿತ್ತು. ಕೆಲವರು ಇದನ್ನು ಖರೀದಿಸಲು ಹುಡುಕಾಟ ಕೂಡ ನಡೆಸಿದ್ದರು. ಆದರೆ, ಇದರ ಬೆಲೆ ಬರೋಬ್ಬರಿ 99 ಸಾವಿರ ರೂಪಾಯಿ. ಇದಕ್ಕೆ ಸಂಸ್ಥೆ ಸದ್ಯ ಶೆ.20 ಆಫರ್ ನೀಡಿದ್ದು, 79,200 ರೂಪಾಯಿಗೆ ಮಾರಾಟ ಆಗುತ್ತಿದೆ. ಮೂಲ ಬೆಲೆಯಲ್ಲಿ ಒಂದು ಸಾಧಾರಣ ಬೈಕ್ ಬರುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
View this post on Instagram
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದರು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದರು. ಕರ್ನಾಟಕ ಹೈಕೋರ್ಟ್ ದರ್ಶನ್ಗೆ ಜಾಮೀನು ಕೊಟ್ಟಿತ್ತು. ಆದರೆ, ಸುಪ್ರೀಂ ಜಾಮೀನು ರದ್ದು ಮಾಡಿದ್ದರಿಂದ ಈಗ ಅವರು ಮತ್ತೆ ಜೈಲು ಸೇರಿದ್ದಾರೆ. ಅವರು ಹೊರಗೆ ಇದ್ದಷ್ಟು ದಿನ ಸಿನಿಮಾದ ಶೂಟ್ನ ಪೂರ್ಣಗೊಳಿಸಿಕೊಟ್ಟಿದ್ದಾರೆ. ಡಬ್ಬಿಂಗ್ ಕೂಡ ಪೂರ್ಣಗೊಂಡಿದೆ.
ಇದನ್ನೂ ಓದಿ: ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು?
ದರ್ಶನ್ ಇಲ್ಲದೆ, ‘ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಸಿನಿಮಾ ಹಿಟ್ ಆದರೆ ಫ್ಯಾನ್ಸ್ ಕೂಡ ಖುಷಿ ಪಡಲಿದ್ದಾರೆ. ಈ ಸಿನಿಮಾಗೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








