AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು?

ನಟ ದರ್ಶನ್ ಅವರ ಅಭಿಮಾನಿಗಳೆಲ್ಲರೂ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಎಂದು ಗುನುಗುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಹಾಡು ಟ್ರೆಂಡ್ ಆಗುತ್ತಿದೆ. ಒಂದೇ ದಿನದಲ್ಲಿ ಕೋಟ್ಯಂತರ ಬಾರಿ ವೀವ್ಸ್ ಆಗಿದೆ. ಈ ಗೀತೆಯ ಮೂಲಕ ‘ದಿ ಡೆವಿಲ್’ ಸಿನಿಮಾದ ಮೇಲಿನ ಹೈಪ್ ಹೆಚ್ಚುವಂತಾಗಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..

‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು?
Darshan Thoogudeepa
ಮದನ್​ ಕುಮಾರ್​
|

Updated on:Aug 25, 2025 | 10:08 AM

Share

ಭಾರಿ ನಿರೀಕ್ಷೆ ಮೂಡಿಸಿದ್ದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಆಗಸ್ಟ್ 24ರಂದು ಬಿಡುಗಡೆ ಆಯಿತು. ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ (The Devil Movie) ಸಿನಿಮಾದ ಈ ಹಾಡಿನ ಮೇಲೆ ತುಂಬಾ ಭರವಸೆ ಇಟ್ಟುಕೊಂಡಿದ್ದರು. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದರ್ಶನ್ (Darshan) ಫ್ಯಾನ್ಸ್ ಮತ್ತೆ ಮತ್ತೆ ಈ ಹಾಡನ್ನು ನೋಡುತ್ತಿದ್ದಾರೆ. ‘ಸರೆಗಮ ಕನ್ನಡ’ ಯೂಟ್​ಯೂಬ್ ಚಾನೆಲ್ ಮೂಲಕ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ (Idre Nemdiyaag Irbek) ಹಾಡು ಬಿಡುಗಡೆ ಆಗಿದೆ. 24 ಗಂಟೆ ಕಳೆಯುವುದರಲ್ಲಿ ಈ ಹಾಡು ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ಸಂಯೋಜನೆ ಆದ್ದರಿಂದ ಹಾಡುಗಳ ಮೇಲೆ ಜನರಿಗೆ ಇರುವ ನಿರೀಕ್ಷೆ ಅಪಾರ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಕೇಳಿ ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ವಿಶೇಷವಾಗಿ ಈ ಹಾಡಿನಲ್ಲಿ ದರ್ಶನ್ ಅವರ ಗೆಟಪ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಕೆಲವರಿಂದ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚೆನ್ನಾಗಿದೆ. ಆದರೆ ಸಾಹಿತ್ಯ ಕೊಂಚ ಡಲ್ ಆಯಿತು ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಿರುದ್ಧ ಶಾಸ್ತ್ರಿ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಪುಷ್ಪ’ ಸಿನಿಮಾ ಖ್ಯಾತಿಯ ಗಾಯಕ ದೀಪಕ್ ಬ್ಲೂ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ
Image
ಅಭಿಮಾನಿಗಳಿಗೆ ಜೈಲಿಂದಲೇ ಸಂದೇಶ ಕಳಿಸಿದ ನಟ ದರ್ಶನ್
Image
20 ಕೋಟಿ ರೂ. ಕೊಟ್ಟರು ಎಂಬುದೆಲ್ಲ ಸುಳ್ಳು: ರೇಣುಕಾಸ್ವಾಮಿ ತಂದೆ ಖಡಕ್ ಮಾತು
Image
ಯಾವ ಜೈಲಿಗೆ ಹೋಗಲಿದ್ದಾರೆ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸಿದ್ಧತೆ?
Image
ಸುಪ್ರೀಂ ಚುರುಕು; ಬೇಗ ಇತ್ಯರ್ಥವಾಗುತ್ತಾ ರೇಣುಕಾಸ್ವಾಮಿ ಪ್ರಕರಣ?

ಸೋಶಿಯಲ್ ಮೀಡಿಯಾದಲ್ಲಿ ಕೂಡ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಆ ಮೂಲಕ ಸಿನಿಮಾ ಮೇಲೆ ಇರುವ ಕ್ರೇಜ್ ಎಂಥದ್ದು ಎಂಬುದನ್ನು ಫ್ಯಾನ್ಸ್ ತೋರಿಸುತ್ತಿದ್ದಾರೆ. ಒಂದೇ ದಿನದಲ್ಲಿ 10 ಮಿಲಿಯನ್​​​ಗಿಂತ ಅಧಿಕ ವೀವ್ಸ್ ಆಗಿದ್ದಕ್ಕೆ ಅಭಿಮಾನಿಗಳಿಗೆ ಸಂತಸ ಆಗಿದೆ.

ಇದನ್ನೂ ಓದಿ: ‘ದಿ ಡೆವಿಲ್’ ಬಿಡುಗಡೆ ದಿನಾಂಕ: ಡಿಸೆಂಬರ್ 12ಕ್ಕೆ ದರ್ಶನ್ ಅಭಿಮಾನಿಗಳಿಗೆ ಹಬ್ಬ

ದರ್ಶನ್ ಅವರು ಸದ್ಯಕ್ಕೆ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಆರೋಪಿ. ಇತ್ತೀಚೆಗೆ ಜಾಮೀನು ರದ್ದಾದ ಕಾರಣ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಯಿತು. ದರ್ಶನ್ ಜೈಲಿನಲ್ಲಿ ಇದ್ದಾಗ ಈ ಹಾಡು ಬಿಡುಗಡೆ ಆಗಬೇಕಾದ ಪರಿಸ್ಥಿತಿ ಬಂತು ಎಂಬುದು ಅಭಿಮಾನಿಗಳ ಪಾಲಿನ ಬೇಸರದ ಸಂಗತಿ. ಈ ಸಿನಿಮಾಗೆ ಈಗಾಗಲೇ ಪ್ರಕಾರ ಕಾರ್ಯ ಆರಂಭಿಸಲಾಗಿದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:07 am, Mon, 25 August 25