AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆದರೂ ನಿಂತಿಲ್ಲ ಸಿನಿಮಾ ಕಲೆಕ್ಷನ್

"ಸು ಫ್ರಮ್ ಸೋ ಚಿತ್ರವು ತನ್ನ 32ನೇ ದಿನದಂದು ಸಹ ಅದ್ಭುತ ಗಳಿಕೆಯನ್ನು ಮಾಡಿದೆ. ಒಟ್ಟು 115.26 ಕೋಟಿ ರೂಪಾಯಿಗಳ ಗಳಿಕೆಯೊಂದಿಗೆ, ಈ ಚಿತ್ರವು ಹಲವಾರು ದಾಖಲೆಗಳನ್ನು ಮುರಿದಿದೆ. ಭಾರತದಲ್ಲಿ 86 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮತ್ತು ವಿದೇಶದಲ್ಲಿ 14 ಕೋಟಿ ರೂಪಾಯಿ ಗಳಿಕೆಯಾಗಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕವೂ ರಿವೀಲ್ ಆದರೂ ಚಿತ್ರಮಂದಿರದ ಗಳಿಕೆ ಕಡಿಮೆಯಾಗಿಲ್ಲ.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆದರೂ ನಿಂತಿಲ್ಲ ಸಿನಿಮಾ ಕಲೆಕ್ಷನ್
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Aug 26, 2025 | 7:01 AM

Share

‘ಸು ಫ್ರಮ್ ಸೋ’ (Su From So) ರಿಲೀಸ್ ಆಗಿ 32 ದಿನಗಳು ಕಳೆದಿವೆ. ಆದಾಗ್ಯೂ ಸಿನಿಮಾದ ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಚಿತ್ರ ಹಲವು ದಾಖಲೆಗಳನ್ನು ಬರೆದು ಮುಂದಕ್ಕೆ ಸಾಗುತ್ತಿದೆ. ಈಗ ಸಿನಿಮಾದ ಒಟಿಟಿ ದಿನಾಂಕ ರಿವೀಲ್ ಆಗಿದೆ. ಆದಾಗ್ಯೂ ಜನರು ಚಿತ್ರಮಂದಿರಕ್ಕೆ ಬರೋದನ್ನು ನಿಲ್ಲಿಸುತ್ತಿಲ್ಲ. ಇದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾ ಒಟಿಟಿಗೆ ಬಂದ ಬಳಿಕವೂ ಇದನ್ನು ಕೆಲವರು ಥಿಯೇಟರ್​​ನಲ್ಲಿ ನೋಡುವುದನ್ನು ಮುಂದುವರಿಸಬಹುದು ಎಂದು ಊಹಿಸಲಾಗಿದೆ. ಹಾಗಾದರೆ ಸಿನಿಮಾ 32ನೇ ದಿನ ಮಾಡಿದ ಗಳಿಕೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

ಕನ್ನಡ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ಬಹಳ ಸಮಯ ಕಳೆದು ಹೋಗಿದೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಕೊನೆಯದಾಗಿ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತು. ಈಗ ‘ಸು ಫ್ರಮ್ ಸೋ’ ಸಿನಿಮಾ ಆ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 115.26 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಭಾರತದ ನೆಟ್ ಕಲೆಕ್ಷನ್ 86 ಕೋಟಿ ರೂಪಾಯಿ ಇದೆ. ಭಾರತದ ಗ್ರಾಸ್ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ. ವಿದೇಶದಿಂದ ಸಿನಿಮಾಗೆ 14 ಕೋಟಿ ರೂಪಾಯಿ ಹರಿದು ಬಂದಿದೆ.

‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 25ರಂದು ಬರೋಬ್ಬರಿ 38 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಒಂದು ತಿಂಗಳದ ಬಳಿಕವೂ ಸಿನಿಮಾ ವಾರದ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಈ ಚಿತ್ರ 30 (ಆಗಸ್ಟ್ 23) ಹಾಗೂ 31ನೇ (ಆಗಸ್ಟ್ 24) ದಿನ ಅನುಕ್ರಮವಾಗಿ 1.49 ಕೋಟಿ ರೂಪಾಯಿ ಹಾಗೂ 1.86 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಅನ್ನೋದು ವಿಶೇಷ. ಈ ಚಿತ್ರ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಕಾಣಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರ ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
VIDEO: ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
Image
ಹಿರಿಯ ನಟ ದಿನೇಶ್​ಗೆ ಇದ್ದ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ
Image
‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’; ದರ್ಶನ್ ಧರಿಸಿದ್ದ ಜಾಕೆಟ್ ಬೆಲೆ ಎಷ್ಟು?
Image
ದಿನೇಶ್​ಗಾಗಿ ಮಂಗಳೂರು ಮೀನಿನ ಅಡುಗೆ ಮಾಡಿಸಿದ್ದ ಅಣ್ಣಾವ್ರು

ಇದನ್ನೂ ಓದಿ: 31ನೇ ದಿನ ಕೂಡ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’

‘ಸು ಫ್ರಮ್ ಸೋ’ ಚಿತ್ರವನ್ನು ಜೆಪಿ ತುಮಿನಾಡ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ತಮ್ಮ ‘ಲೈಟರ್ ಬುದ್ಧ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜೆಪಿ ತುಮಿನಾಡ್, ರಾಜ್ ಬಿ ಶೆಟ್ಟಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಪುಷ್ಪರಾಜ್ ಬೋಳಾರ್, ಸಂಧ್ಯ ಅರಕೆರೆ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.