
‘ಅಮೃತಧಾರೆ’ ಧಾರಾವಾಹಿಯಲ್ಲಿ (Serial) ಗೌತಮ್ ಹಾಗೂ ಭೂಮಿಕಾ ಬೇರೆ ಆಗಿ ಸಾಕಷ್ಟು ಸಮಯ ಕಳೆದಿದೆ. ಇವರು ಮತ್ತೆ ಒಂದಾಗುವ ದಿನ ಹತ್ತಿರ ಬಂದಿದೆ. ಆದರೂ ನಿರ್ದೇಶಕರು ಇದಕ್ಕೆ ಏಕೋ ಅವಕಾಶ ಮಾಡಿಕೊಡುತ್ತಿಲ್ಲ. ಕುಶಾಲನಗರದಲ್ಲಿ ಗೌತಮ್ ಹಾಗೂ ಭೂಮಿಕಾ ಎದುರು-ಬದುರು ಸಿಕ್ಕಿದ್ದರು. ಗೌತಮ್ ಮಾತನಾಡಿಸುವ ಪ್ರಯತ್ನ ಮಾಡಿದರೂ ಇದಕ್ಕೆ ಭೂಮಿಕಾ ಸೊಪ್ಪು ಹಾಕಿಲ್ಲ. ಅವಳು ಆ ಊರನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದಾಳೆ. ಈ ವೇಳೆ ಗೌತಮ್ ಇರುವ ವಠಾರಕ್ಕೆ ಭೂಮಿಕಾ ಬಂದಿದ್ದಾಳೆ.
ಗೌತಮ್ ತಮ್ಮ ಆಸ್ತಿಯನ್ನು ಮಲತಾಯಿ ಹಾಗೂ ಮಲ ಸಹೋದರನಿಗೆ ನೀಡಿ ಬಂದಿದ್ದಾನೆ. ನಂತರ ವಠಾರಕ್ಕೆ ಬಂದು ಸಿಂಪಲ್ ಜೀವನ ನಡೆಸುತ್ತಿದ್ದಾನೆ. ಆತ ಈಗ ಕ್ಯಾಬ್ ಡ್ರೈವರ್. ಆತ ತನ್ನನ್ನೇ ಫಾಲೋ ಮಾಡುತ್ತಿದ್ದಾನೆ ಎಂದು ಭೂಮಿಕಾಗೆ ಹಲವು ಬಾರಿ ಅನಿಸಿದೆ. ಆದರೆ, ಗೌತಮ್ ಇದಕ್ಕೆ ಬೆರೆಯದೇ ತಂತ್ರ ಉಪಯೋಗಿಸಿದ್ದಾನೆ.
ಭೂಮಿಕೆ ಹಿಂದೆ ಹಿಂದೆ ಹೋದರೆ ಆಕೆ ತನ್ನನ್ನು ದೂರ ತಳ್ಳುತ್ತಾಳೆ ಎಂಬುದು ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಆತ ಭೂಮಿಕಾಳಿಂದ ದೂರವೇ ಇರಲು ಯೋಚಿಸಿದ್ದಾನೆ. ಇದು ಭೂಮಿಕಾಗೆ ಶಾಕ್ ಎನಿಸಿದೆ. ‘ನೀವು ನನ್ನನ್ನು ಫಾಲೋ ಮಾಡ್ತಾ ಇದೀರಾ ಎಂಬುದು ನನಗೆ ತಿಳಿದಿದೆ’ ಎಂದು ಭೂಮಿಕಾ ಹೇಳಿದ್ದಾಳೆ. ಇದಕ್ಕೆ ಗೌತಮ್ ನೇರ ಮಾತುಗಳಲ್ಲಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಹಿಂದಿಯ ಅತ್ತೆ-ಸೊಸೆ ಧಾರಾವಾಹಿಯಲ್ಲಿ ನಟಿಸಲಿರುವ ಬಿಲ್ ಗೇಟ್ಸ್
‘ನನಗೂ ನಿಮಗೂ ಯಾವುದೇ ಸಂಬಂಧ ಇಲ್ಲ. ನೀವು ಯಾರು ಎಂಬುದೇ ನನಗೆ ಗೊತ್ತಿಲ್ಲ. ನಿಮ್ಮಿಂದ ನಾನು ಅಂತರವನ್ನೇ ಕಾಯ್ದುಕೊಳ್ಳುತ್ತೇನೆ. ನನ್ನ ಸುದ್ದಿಗೆ ನೀವು ಬರಬೇಡಿ, ನಿಮ್ಮ ಸುದ್ದಿಗೆ ನಾನು ಬರೋದಿಲ್ಲ’ ಎಂದು ಗೌತಮ್ ಹೇಳಿರುವುದು ಆಕೆಗೆ ಚಿಂತೆಯನ್ನು ತಂದಿದೆ.
ಇನ್ನು, ಗೌತಮ್ ದೀವಾನ್ ಅವರು ಒಂದು ಮಗುವನ್ನು ದತ್ತು ಪಡೆದಿದ್ದಾರೆ. ಈ ವಿಚಾರ ಕೂಡ ಭೂಮಿಕಾಗೆ ಚಿಂತೆ ತಂದಿದೆ. ಆಕೆ ಯಾರ ಮಗಳು? ಗೌತಮ್ನ ಯಾಕೆ ತಂದೆ ಎಂದು ಕರೆಯುತ್ತಿದ್ದಾಳೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 pm, Thu, 23 October 25