
ರಿಯಾಲಿಟಿ ಶೋಗಳಲ್ಲಿ ಸಿಂಪತಿಗೋಸ್ಕರ ಕೆಲವು ಬಡವರ ಮನೆ ಮಕ್ಕಳನ್ನು ಸ್ಪರ್ಧಿಗಳಾಗಿ ಕರೆದು ತರಲಾಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಅದರಲ್ಲೂ ಡ್ಯಾನ್ಸ್ ಹಾಗೂ ಡ್ರಾಮಾ ರಿಯಾಲಿಟಿ ಶೋಗಳಲ್ಲಿ ಈ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂಬ ಆರೋಪ ಇದೆ. ಈ ವಿಷಯವಾಗಿ ಆ್ಯಂಕರ್ ಅನುಶ್ರೀ (Anushree) ಅವರು ಮಾತನಾಡಿದ್ದಾರೆ. ಅವರು ಈ ರೀತಿಯ ಆರೋಪಕ್ಕೆ ಮುಖಕ್ಕೆ ಹೊಡೆದಂತೆ ಉತ್ತರ ನೀಡಿದ್ದಾರೆ. ಅವರ ವಿಡಿಯೋ ವೈರಲ್ ಆಗುತ್ತಿದೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಾ ಇದೆ. ಈ ಶೋ ಮೂಲಕ ಹಲವರ ಪ್ರತಿಭೆಗೆ ವೇದಿಕೆ ಸಿಕ್ಕಂತೆ ಆಗಿದೆ. ಪ್ರತಿಭೆಗೆ ಬಡತನ ಅಡ್ಡಬಂದು ಒದ್ದಾಡುತ್ತಿರುವವರ ಬದುಕು ಬದಲಾಗಿದೆ. ಆದರೆ, ಇದನ್ನು ಕೆಲವರು ಟ್ರೋಲ್ ಮಾಡಿದ್ದು ಇದೆ. ‘ರಿಯಾಲಿಟಿ ಶೋಗಳಲ್ಲಿ ಬಡವರ ಮಕ್ಕಳನ್ನು ಟಿಆರ್ಪಿಗೋಸ್ಕರ ಬಳಕೆ ಮಾಡಿಕೊಳ್ಳುತ್ತಾರೆ’ ಎಂದು ಕೆಲವರು ಟೀಕಿಸಿದ್ದರು. ಈ ಆರೋಪವನ್ನು ಅನುಶ್ರೀ ಗಂಭೀರವಾಗಿ ಸ್ವೀಕರಿಸಿ ತಿರುಗೇಟು ನೀಡಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆರಂಭ ಆದಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ನೋಡಿದೆ. ಡಿಕೆಡಿ ವೇದಿಕೆ ಹತ್ತಬೇಕು ಎಂದರೆ ಬಡತನದ ಕಥೆ ಇರಬೇಕು ಎಂದು ಹೇಳುತ್ತಿದ್ದರು’ ಎಂದು ಅನುಶ್ರೀ ಮಾತನಾಡಿದ್ದಾರೆ. ಅನುಶ್ರೀ ಅತ್ಯಂತ ಪ್ರೀತಿಸುವ ಶೋಗಳಲ್ಲಿ ಇದು ಕೂಡ ಒಂದು. ಈ ಶೋ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಅವವರಿಗೆ ಬೇಸರ ಆಗಿದೆ. ಕಣ್ಣೀರು ಹಾಕುತ್ತಲೇ ಅವರು ಉತ್ತರಿಸಿದ್ದಾರೆ.
‘ಡಿಕೆಡಿಗೆ ಬರಬೇಕು ಎಂದರೆ ಬಡತನ ಇದ್ದರೆ ಮಾತ್ರ ಸಾಕಾಗೋದಿಲ್ಲ. ಪ್ರತಿಭೆಯ ಶ್ರೀಮಂತಿಕೆ ಕೂಡ ಇರಬೇಕು. ಆ ಪ್ರತಿಭೆಯ ಶ್ರೀಮಂತಿಕೆಯಿಂದಲೇ ಈ ಹುಡಗಿ (ಸ್ಪರ್ಧಿ) ಇಲ್ಲಿರೋದು. ಕಷ್ಟ ಅನ್ನೋದು ಎಲ್ಲರಿಗೂ ಇರುತ್ತದೆ. ಒಂದು ಕಾರ್ಯಕ್ರಮ ಎಂಬುದು ಬಂದಾಗ ಎಲ್ಲರೂ ನಮ್ಮ ಕುಟುಂಬದವರಾಗುತ್ತಾರೆ’ ಎಂಬುದು ಅನುಶ್ರೀ ಉತ್ತರ.
ಇದನ್ನೂ ಓದಿ: ‘ಅರ್ಜುನ್ ಜನ್ಯ ಗತಿ ಏನು’; ಅಭಿಮಾನಿಯ ನೇರ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ
‘ನಮ್ಮ ಕುಟುಂಬದ ಜೊತೆ ನಾವು ಕಷ್ಟ ಸುಖ ಹಂಚಿಕೊಳ್ಳುತ್ತೇವೆ. ಅದೇ ರೀತಿ ಆ ಸ್ಪರ್ಧಿಗಳು ತಮ್ಮ ಕುಟುಂಬ ಎಂದು ಅವರ ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಅವರ ತಂದೆ ಕಲ್ಲು ಒಡೆಯುವವರು. ಹುಡುಗಿ ತಂದೆ ಅಲ್ಲೆಲ್ಲೋ ಕಲ್ಲು ಒಡೆಯುತ್ತಿದ್ದರೆ, ಶಿಲೆ ಇಲ್ಲಿ ತಯಾರಾಗುತ್ತಿದೆ’ ಎಂದು ಸ್ಪರ್ಧಿಯನ್ನು ಅನುಶ್ರೀ ಹೊಗಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.