‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಆ್ಯಂಕರ್ ಜಾನ್ವಿ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆ್ಯಂಕರ್ ಜಾನ್ವಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ವಿಚ್ಛೇದನಕ್ಕೆ ಪತಿಯ ಬೇರೊಂದು ಮದುವೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಜಾನ್ವಿಯಿಂದಲೇ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆ ಇತ್ತು. ಈಗ ಬಿಗ್ ಬಾಸ್ ವೇದಿಕೆ ಮೇಲೆ ಅವರು ನೀಡಿರುವ ಸ್ಪಷ್ಟನೆಯಿಂದ ಸತ್ಯ ಹೊರಬಿದ್ದಿದೆ.

‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಆ್ಯಂಕರ್ ಜಾನ್ವಿ
ಜಾನ್ವಿ

Updated on: Oct 01, 2025 | 7:02 AM

ಆ್ಯಂಕರ್ ಜಾನ್ವಿ (Janvi) ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾರೆ. ಅವರು ಉತ್ತಮವಾಗಿ ಆಟ ಆಡುವ ಹುಮ್ಮಸ್ಸಿನಲ್ಲಿ ಇದ್ದಾರೆ. ಹೀಗಿರುವಾಗಲೇ ಜಾನ್ವಿ ವೈಯುಕ್ತಿಕ ಜೀವನ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯಾಗಿದೆ. ಈ ಮೊದಲು ಕೂಡ ಅವರ ವಿಚ್ಛೇದನ ಚರ್ಚೆ ಆಗಿತ್ತು. ಜಾನ್ವಿ ಅವರಿಂದಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತು ಎಂಬ ಮಾತುಗಳು ಕೇಳಿ ಬಂದವು. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ಜಾನ್ವಿ, ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ‘ನೀವು ಸ್ಫೂರ್ತಿದಾಯಕ’ ಎಂದು ಜಾನ್ವಿ ಅವರು ಮಲ್ಲಮ್ಮಗೆ ಹೇಳಿದರು. ‘ಅವರಿಗೋಸ್ಕರ ಅವರು ಬದುಕಲೇ ಇಲ್ಲ. ಅವರಿಗೆ 15ನೇ ವಯಸ್ಸಿಗೆ ಮದುವೆ ಆಯ್ತು. ಆ ಬಳಿಕ ಮಕ್ಕಳಾಯ್ತು. ಮಕ್ಕಳಿಗೋಸ್ಕರ ಬದುಕಿದರು’ ಎಂದು ಜಾನ್ವಿ ಹೇಳುವಾಗ ಮಲ್ಲಮ್ಮ ಅಳಲು ಆರಂಭಿಸಿದರು.

ಆ ಬಳಿಕ ಜಾನ್ವಿ ‘ಮದುವೆ ಆದಾಗ ನಾನು ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ’ ಎಂದು ತಮ್ಮ ಕಷ್ಟ ಹೇಳಿಕೊಳ್ಳಲು ಆರಂಭಿಸಿದರು. ಆಗ ಮಲ್ಲಮ್ಮ ಅವರು, ‘ಈಗ ನಿಮ್ಮ ಪತಿ ಏನು ಮಾಡುತ್ತಿದ್ದಾರೆ’ ಎಂದು ಕೇಳಿದರು. ಆಗ, ಜಾನ್ವಿ ‘ಡಿವೋರ್ಸ್ ಆಗಿದೆ’ ಎಂದರು. ‘ಮದುವೆ ಆದ್ಮೇಲೆ ಹಾಗೆಲ್ಲ ಬಿಡಬಾರದು’ ಎಂದು ಮಲ್ಲಮ್ಮ ಅವರು ಕಿವಿಮಾತು ಹೇಳಿದರು.

ಇದನ್ನೂ ಓದಿ
ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಅಳುವವರು ಈ ವಿಡಿಯೋ ನೋಡಿ
ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಲಿದ್ದಾರೆ ಮಲ್ಲಮ್ಮ?
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ನಾನು ಜೊತೆಯಲ್ಲಿ ಇರುವಾಗಲೇ ಅವರಿಗೆ ಬೇರೆ ಮದುವೆ ಆಗಿ ಮಗು ಆಗಿತ್ತು. ಅದಕ್ಕೆ ಬಿಟ್ಟಿದ್ದು. ಹೀಗೆಲ್ಲ ಆದಾಗ ಆ ಮದುವೆಗೆ ಅರ್ಥ ಇರುವುದಿಲ್ಲ’ ಎಂದು ಜಾನ್ವಿ ವಿವರಿಸಿದರು. ಆಗ ಮಲ್ಲಮ್ಮ ಕೂಡ ಜಾನ್ವಿ ಮಾತನ್ನು ಒಪ್ಪಿಕೊಂಡರು.

ಇದನ್ನೂ ಓದಿ: ‘ಡಿಗ್ರೀ ಓದುವಾಗಲೇ ಮದುವೆ ಆಯ್ತು’; ದೊಡ್ಮನೆಗೆ ಬಂದು ಕಷ್ಟ ಹೇಳಿಕೊಂಡ ಜಾನ್ವಿ

ಜಾನ್ವಿ ಅವರು ಆ್ಯಂಕರಿಂಗ್ ಮಾಡಿ ಫೇಮಸ್ ಆದವರು. ಆ ಬಳಿಕ ಅವರು ವಿಚ್ಛೇದನದ ಮೂಲಕ ಸುದ್ದಿ ಆದರು. ನಂತರ ಜಾನ್ವಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡರು. ಅವರಿಗೆ ಸಿನಿಮಾ ಆಫರ್ ಕೂಡ ಬಂತು. ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಈಗ ಬಿಗ್ ಬಾಸ್ ಆಫರ್ ಪಡೆದುಕೊಂಡಿದ್ದಾರೆ. ಇದರಲ್ಲಿ ಅವರು ಮಿಂಚಿದರೆ ಮತ್ತಷ್ಟು ಸಿನಿಮಾ ಆಫರ್​ಗಳು ಬರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.