ದರ್ಶನ್ ಜೊತೆ ನಟಿಸಿದ್ದ ಕರಿ ಬಸಪ್ಪ; ಅಪರೂಪದ ವಿಡಿಯೋ ವೈರಲ್
ಕರಿ ಬಸಪ್ಪ, 'ಬಿಗ್ ಬಾಸ್ ಕನ್ನಡ 12'ರ ಸ್ಪರ್ಧಿ, ದರ್ಶನ್ ಜೊತೆ ನಟಿಸಿದ್ದ ಅಪರೂಪದ ವಿಡಿಯೋ ವೈರಲ್ ಆಗಿದೆ. ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ ಆಗಿರುವ ಕರಿ ಬಸಪ್ಪ, ಈ ಹಿಂದಿನ ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಸಾಧನೆ ಕುರಿತು ಚರ್ಚೆಗಳ ನಡುವೆ ಈ ವಿಡಿಯೋ ಸದ್ದು ಮಾಡುತ್ತಿದೆ.

ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ ಕರಿ ಬಸಪ್ಪ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸ್ಪರ್ಧಿ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕೇವಲ ಬಾಡಿ ಬಿಲ್ಡರ್ ಮಾತ್ರ ಅಲ್ಲ, ಕಲಾವಿದ ಕೂಡ ಹೌದು. ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕರಿ ಬಸಪ್ಪ ಕಾಣಿಸಿಕೊಂಡಿದ್ದರು. ಈ ರೀತಿಯ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ದರ್ಶನ್ (Darshan) ಜೊತೆ ತೊಡೆ ತಟ್ಟುತ್ತಾರೆ.
‘ಬಿಗ್ ಬಾಸ್’ ಓಪನಿಂಗ್ ದಿನ ಕರಿ ಬಸಪ್ಪ ಅವರು ವೇದಿಕೆ ಏರುತ್ತಿದ್ದಂತೆ ಇತರ ಸ್ಪರ್ಧಿಗಳಿಗೆ ‘ನನ್ ಸಾಧನೆ ಏನು ಅಂತ ಗೊತ್ತಾ’ ಎಂದು ದೊಡ್ಡ ಧ್ವನಿಯಲ್ಲಿ ಕೇಳಿದ್ದರು. ಅವರು ಕೇಳಿದ್ದು ಅವಾಜ್ ಹಾಕುವ ರೀತಿಯಲ್ಲಿ ಇತ್ತು. ಆಗ ಸುದೀಪ್ ಕೂಡ ಈ ರೀತಿ ಅವಾಜ್ ಹಾಕಬಾರದು ಎಂದಿದ್ದರು. ಈಗ ಕರಿ ಬಸಪ್ಪ ಅವರು ದೊಡ್ಮನೆಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಅತ್ಯಾಚಾರಿಗಿಂತಲೂ ಕಡೆಯಾ ದರ್ಶನ್? ನ್ಯಾಯಾಲಯದಲ್ಲಿ ವಕೀಲರ ವಾದ
ದರ್ಶನ್ ನಟನೆಯ ಸಿನಿಮಾ ಒಂದರಲ್ಲಿ ಕರಿ ಬಸಪ್ಪ ನಟಿಸಿದ್ದರು. ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದರು. ದರ್ಶನ್ ಎದುರು ತಮ್ಮ ತೋಳ್ಬಲ ತೋರಿಸುತ್ತಾ ಬರುತ್ತಾರೆ. ಆಗ ದರ್ಶನ್ ಅವರು ಅವಾಜ್ ಹಾಕುತ್ತಿದ್ದಂತೆ ಮರಳಿ ಹೋಗುತ್ತಾರೆ. ಈ ರೀತಿಯಲ್ಲಿ ವಿಡಿಯೋ ಇದೆ.
View this post on Instagram
ಕರಿ ಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಜಂಟಿ ಆಗಿದ್ದಾರೆ. ಆರ್ಜೆ ಅಮಿತ್ ಜೊತೆ ಅವರು ಜೋಡಿ ಆಗಿದ್ದಾರೆ. ಕರಿ ಬಸಪ್ಪ ಹೆಚ್ಚು ಹೈಲೈಟ್ ಆಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಗೋ ಕೆಲಸ ಆಗಿದೆ. ಅಮಿರ್ ಅವರು ಇದೇ ರೀತಿ ಪರ್ಫಾರ್ಮೆನ್ಸ್ ಕೊಟ್ಟರೆ ಅವರು ಹೊರಕ್ಕೆ ಹೋದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Wed, 1 October 25








