AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರಿಗಿಂತಲೂ ಕಡೆಯಾ ದರ್ಶನ್? ನ್ಯಾಯಾಲಯದಲ್ಲಿ ವಕೀಲರ ವಾದ

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್​​ಶೀಟ್ ಕೊಡುವ ವಿಚಾರಕ್ಕೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದು, ನ್ಯಾಯಾಲಯದಲ್ಲಿ ನಡೆದ ವಾದದ ಮಾಹಿತಿ ಇಲ್ಲಿದೆ...

ಅತ್ಯಾಚಾರಿಗಿಂತಲೂ ಕಡೆಯಾ ದರ್ಶನ್? ನ್ಯಾಯಾಲಯದಲ್ಲಿ ವಕೀಲರ ವಾದ
Darshan Thoogudeepa
ಮಂಜುನಾಥ ಸಿ.
|

Updated on: Sep 30, 2025 | 3:59 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಅವರಿಗೆ ಕೆಲ ಸೌಲಭ್ಯಗಳನ್ನು ಕೊಡಿಸಲು ವಕೀಲರು ಸತತ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ನಟ ದರ್ಶನ್​​ಗೆ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ ಶೀಟ್​​ ಕೊಡಿಸಲು ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿವೆ. ದರ್ಶನ್​​ಗೆ ಜೈಲಿನಲ್ಲಿ ಕೆಲವು ಸಾಮಾನ್ಯ ಸೌಲಭ್ಯಗಳನ್ನು ಕೊಡಿಸುವ ವಿಚಾರದಲ್ಲಿ ಜೈಲು ಅಧೀಕ್ಷಕರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ವರದಿ ಸಲ್ಲಿಕೆ ಮಾಡಿದರು.

ದರ್ಶನ್ ಪರ ವಾದ ಮಂಡಿಸಿದ ವಕೀಲ ಸುನಿಲ್, ‘ಇಡೀ ದೇಶದ ಯಾವ ಜೈಲಿನಲ್ಲಿಯೂ ಇಲ್ಲದ ನಿಯಮಗಳನ್ನು ದರ್ಶನ್ ಮೇಲೆ ಹೇರಲಾಗಿದೆ. ಅದೇ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ಕೊಟ್ಟಿದ್ದಾರೆ, ಆದರೆ ದರ್ಶನ್​​ಗೆ ಅಗತ್ಯ ಸೌಲಭ್ಯಗಳನ್ನು ಸಹ ಕೊಡುತ್ತಿಲ್ಲ. ಬೇಕಾದರೆ ಆ ಬಗ್ಗೆ ಸಾಕ್ಷ್ಯ ನೀಡಲು ತಯಾರಿದ್ದೇವೆ’ ಎಂದು ಏರಿದ ದನಿಯಲ್ಲಿ ವಾದಿಸಿದರು.

ಜೈಲು ಅಧೀಕ್ಷಕರ ಪರವಾಗಿ ವಾದಿಸಿದ ಎಸ್​​ಪಿಪಿ ಪ್ರಸನ್ನ ಅವರು, ‘ನಿಯಮಗಳ ಅನುಸಾರವಾಗಿ ದರ್ಶನ್​​ಗೆ ಏನು ಕೊಡಬೇಕೊ ಅದನ್ನು ನೀಡಲಾಗಿದೆ. ಬೆಳಿಗ್ಗೆ, ಸಂಜೆ ವಾಕಿಂಗ್​​ಗೆ ಅವಕಾಶ ನೀಡಲಾಗಿದೆ. ಬಿಸಿಲು ಬರುವಲ್ಲಿ ಬ್ಯಾರಕ್ ಬೇಕು, ಮಲಗಲು ಪಲ್ಲಂಗ ಬೇಕು ಎಂದರೆ ಕೊಡಲಾಗುವುದಿಲ್ಲ. ನಿಯಮ ಇದೆ ಎಂದ ಮಾತ್ರಕ್ಕೆ ಇಲ್ಲದ್ದನ್ನೆಲ್ಲ ಕೇಳಲು ಆಗುವುದಿಲ್ಲ’ ಎಂದು ಖಾರವಾಗಿಯೇ ವಾದ ಮಂಡಿಸಿದರು.

ಇದನ್ನೂ ಓದಿ:ದರ್ಶನ್ ಕೇಸ್: ಆರೋಪಿಗಳ ನಡುವೆ ವೈಮನಸ್ಸು; ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ

ದರ್ಶನ್ ಪರ ವಕೀಲರ ಸುನಿಲ್ ವಾದಿಸಿ, ‘ಇತರೆ ಖೈದಿಗಳನ್ನು ಕೇವಲ 14 ದಿನಕ್ಕೆ ಕ್ವಾರಂಟೈನ್ ಬ್ಯಾರಕ್​​ನಿಂದ ಬೇರೆ ಬ್ಯಾರಕ್​​ಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ದರ್ಶನ್ ಅನ್ನು ಮಾತ್ರ ಇನ್ನೂ ಕ್ವಾರಂಟೈನ್ ಬ್ಯಾರಕ್​​ನಲ್ಲಿಯೇ ಇರಿಸಲಾಗಿದೆ’ ಎಂದರು. ಎಸ್​​ಪಿಪಿ ಪ್ರತಿವಾದಿಸಿ, ‘ಕ್ಯಾರಂಟೈನ್ ಸೆಲ್ ಸಹ ಜೈಲಿನ ಭಾಗ. ಅಲ್ಲದೆ ಖೈದಿಗಳನ್ನು ಯಾರನ್ನು ಎಲ್ಲಿ ಇಡಬೇಕು ಎಂಬುದು ಜೈಲು ಅಧೀಕ್ಷಕರ ವಿವೇಚನೆಗೆ ಬಿಟ್ಟ ವಿಚಾರ. ಖೈದಿಗಳ ಭದ್ರತೆ ದೃಷ್ಟಿಯಿಂದ ಅವರನ್ನು ನಿಗದಿತ ಸೆಲ್​​ಗಳಲ್ಲಿ ಇಡಲಾಗುತ್ತದೆ’ ಎಂದಿದ್ದಾರೆ.

ಸುನಿಲ್ ವಾದ ಮಂಡಿಸಿ, ‘ದರ್ಶನ್ ಅನ್ನು ಬೇರೆ ಬ್ಯಾರಕ್​​ಗೆ ಬಿಡಲು ಜೈಲಧಿಕಾರಿಗಳು ಹೆದರುತ್ತಿದ್ದಾರೆ. ಈ ಹಿಂದೆ ಅವರ ಲೋಪದಿಂದ ದರ್ಶನ್ ಫೋಟೊ ವೈರಲ್ ಆಗಿ ಅವರ ವಿರುದ್ಧವೇ ಎಫ್​​ಐಆರ್ ದಾಖಲಾಗಿತ್ತು. ಈ ಬೇರೆ ಬ್ಯಾರಕ್​​ಗೆ ವರ್ಗ ಮಾಡಿದರೆ, ಮತ್ತೆ ಅದೇ ಪುನರಾವರ್ತನೆ ಆಗುವ ಭಯ ಅವರಲ್ಲಿ ಕಾಡುತ್ತಿದೆ’ ಎಂದಿದ್ದಾರೆ ಸುನಿಲ್. ಇಂದು ನ್ಯಾಯಾಲಯದಲ್ಲಿ ಇಬ್ಬರು ವಕೀಲರ ನಡುವೆ ಏರಿದ ದನಿಯ ವಾದ-ಪ್ರತಿವಾದ ನಡೆಯಿತು. ಎಲ್ಲವನ್ನೂ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 09ಕ್ಕೆ ಕಾಯ್ದಿರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್