‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು

Kannada serial: ‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿಯ ಮಹಾಸಂಗಮ ನಡೆದಿದೆ. ಸೋಮವಾರದಿಂದ (ನವೆಂಬರ್ 17) ಒಂದು ವಾರಗಳ ಕಾಲ ಈ ಮಹಾ ಸಂಗಮ ನಡೆಯಲಿದೆ. ಈ ಮಹಾ ಸಂಗಮದಲ್ಲಿ ಮಹಾ ತಿರುವುಗಳನ್ನು ನೀವು ನಿರೀಕ್ಷಿಸಬಹುದು. ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿಯುವ ಸಮಯ. ಅದಕ್ಕೆ ಕಾರಣ ಆಗೋದು ವಾಚ್. ಅಷ್ಟಕ್ಕೂ ನಡೆದಿದ್ದು ಏನು? ಇಲ್ಲಿದೆ ವಿವರ.

‘ಅಣ್ಣಯ್ಯ’-‘ಕರ್ಣ’ ‘ಮಹಾಸಂಗಮ’ದಲ್ಲಿ ಮಹಾ ತಿರುವು; ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿದೋಯ್ತು
Zee Kannada (1)
Edited By:

Updated on: Nov 18, 2025 | 7:27 PM

‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿಯ ಮಹಾಸಂಗಮ ನಡೆದಿದೆ. ಸೋಮವಾರದಿಂದ (ನವೆಂಬರ್ 17) ಒಂದು ವಾರಗಳ ಕಾಲ ಈ ಮಹಾ ಸಂಗಮ ನಡೆಯಲಿದೆ. ಈ ಮಹಾ ಸಂಗಮದಲ್ಲಿ ಮಹಾ ತಿರುವುಗಳನ್ನು ನೀವು ನಿರೀಕ್ಷಿಸಬಹುದು. ನಿತ್ಯಾ ಪ್ರೆಗ್ನೆನ್ಸಿ ವಿಷಯ ಎಲ್ಲರಿಗೂ ತಿಳಿಯುವ ಸಮಯ. ಅದಕ್ಕೆ ಕಾರಣ ಆಗೋದು ವಾಚ್. ಅಷ್ಟಕ್ಕೂ ನಡೆದಿದ್ದು ಏನು? ಇಲ್ಲಿದೆ ವಿವರ.

‘ಅಣ್ಣಯ್ಯ’ ಹಾಗೂ ‘ಕರ್ಣ’ ಧಾರಾವಾಹಿ ಕಥೆ ಮಧ್ಯೆ ಲಿಂಕ್ ಬೆಸೆಯುವ ಪ್ರಯತ್ನ ನಡೆದಿದೆ. ಕರ್ಣನ ಹಿನ್ನೆಲೆ ಇರೋದು ‘ಅಣ್ಣಯ್ಯ’ ಧಾರಾವಾಹಿಯ ಶಿವುನ ಊರು ಮಾರಿಗುಡಿಯಲ್ಲಿ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಈ ಮೊದಲು ಕರ್ಣ ಹಾಗೂ ಕುಟುಂಬದವರು ಮಾರಿಗುಡಿಗೆ ಬಂದಿದ್ದರು. ಆದರೆ ಕರ್ಣ ಹಾಗೂ ನಿಧಿಗೆ ಪ್ರೀತಿ ಆಗಿದ್ದು ಬಿಟ್ಟರೆ ಅಂತಹ ಮಹತ್ವದ ಬದಲಾವಣೆ ಏನು ಆಗಿರಲಿಲ್ಲ. ಈಗ ಇವರು ಮತ್ತೆ ಮಾರಿಗುಡಿಗೆ ಬಂದಿದ್ದಾರೆ.

ಇದನ್ನೂ ಓದಿ:‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ

ಕರ್ಣ ಹಾಗೂ ನಿಧಿ ಮಾತನಾಡುತ್ತಾ ಇರುತ್ತಾರೆ. ನಿತ್ಯಾ ಜೊತೆ ನಡೆದ ಮದುವೆ ಸುಳ್ಳು ಎಂಬುದನ್ನು ಪರೋಕ್ಷವಾಗಿ ಹೇಳಲು ಆತ ಪ್ರಯತ್ನಿಸುತ್ತಾನೆ. ಆಗ ನಿತ್ಯಾಳ ಆಗಮನ ಆಗುತ್ತದೆ. ಈ ವೇಳೆ ಆಕೆ ತನ್ನ ಪ್ರೆಗ್ನೆನ್ಸಿ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಹೇಳುತ್ತಾಳೆ. ಇದಕ್ಕೆ ಕರ್ಣ ಕೂಡ ಒಪ್ಪಿಕೊಳ್ಳುತ್ತಾನೆ. ಅತ್ತ ‘ಅಣ್ಣಯ್ಯ’ ಧಾರಾವಾಹಿ ಪಾತ್ರಧಾರಿಯೊಬ್ಬ ನಿತ್ಯಾ ಕೈಗೆ ವಾಚ್ ಕಟ್ಟುತ್ತಾನೆ. ಅದು ಸ್ಮಾರ್ಟ್ ವಾಚ್. ಈ ವಾಚ್ ‘ಪ್ರೆಗ್ನೆಂಟ್’ ಎಂದು ಹೇಳುತ್ತದೆ. ಇದರಿಂದ ನಿತ್ಯಾ ಕಂಗಾಲಾಗುತ್ತಾಳೆ.

ಈ ಮೊದಲು ಕೂಡ ಪಾರುಗೆ ಇದೇ ವಾಚ್ ಕಟ್ಟಿದಾಗ ಆಕೆ ಪ್ರೆಗ್ನೆಂಟ್ ಎಂದೇ ಹೇಳಿತ್ತು. ವಾಚ್​​ನಲ್ಲಿರುವ ತಾಂತ್ರಿಕ ದೋಷ ಇದಕ್ಕೆ ಕಾರಣ ಆಗಿತ್ತು. ಈಗಲೂ ಹಾಗೆಯೇ ಆಗಿರಬಹುದು ಎಂದು ‘ಅಣ್ಣಯ್ಯ’ ಧಾರಾವಾಹಿ ತಂಡದವರು ಭಾವಿಸಿದ್ದಾರೆ. ಆದರೆ, ಪಾರು ಹೋಗಿ ನಿತ್ಯಾಳ ಕೈ ಹಿಡಿದಾಗ ಅಸಲಿ ವಿಷಯ ಗೊತ್ತಾಗಿದೆ. ಈಗ ಈ ವಿಚಾರವನ್ನು ಪಾರು ಬೇರೆ ಯಾರಿಗಾದರೂ ಹೇಳುತ್ತಾಳಾ? ಎಲ್ಲರಿಗೂ ಈ ವಿಷಯ ತಿಳಿದು ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಸಂಪೂರ್ಣ ಮಹಾ ಸಂಗಮ ಪೂರ್ಣಗೊಳ್ಳುವ ಮೊದಲು ಒಂದು ದೊಡ್ಡ ತಿರುವು ನಿರೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ