ಸೃಜನ್ ಲೋಕೇಶ್ ಮಾತಿನ ಮಲ್ಲ. ಅವರನ್ನು ಮಾತಿನಲ್ಲಿ ಸೋಲಿಸೋದು ಅಷ್ಟು ಸುಲಭವಲ್ಲ. ‘ಮಜಾ ಟಾಕೀಸ್’ ವೇದಿಕೆ ಮೇಲೆ ಅವರು ಹೊಡೆಯುತ್ತಿದ್ದ ಒಂದೊಂದು ಡೈಲಾಗ್ ಅನೇಕರ ಬಾಯಿ ಮುಚ್ಚಿಸುತ್ತಿತ್ತು. ಇನ್ನು, ವೇದಿಕೆ ಏರಿದರೆ ಸಾಕು ಮಾತು ಪಟಪಟನೆ ಉದುರತ್ತವೆ. ಆದರೆ, ಹೆಂಡತಿ ಎದುರು ಸೃಜನ್ ಮಾತನಾಡುವುದಿಲ್ಲ. ಇದಕ್ಕೆ ಭಯ ಕಾರಣ ಎಂದು ಅನುಪಮಾ ಗೌಡ ಹೇಳಿದ್ದಾರೆ!
ಕಲರ್ಸ್ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್ ಲೋಕೇಶ್ ಮತ್ತು ಹಿರಿಯ ನಟಿ ತಾರಾ ಜಡ್ಜ್ ಆಗಿದ್ದಾರೆ. ಇನ್ನು, ಕಲರ್ಸ್ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಹೆಸರೇ ಸೂಚಿಸುವಂತೆ ಈ ಶೋಗೆ ಒಬ್ಬರೇ ಬರುವಂತಿಲ್ಲ. ಜೋಡಿ ಸಮೇತವೇ ಬರಬೇಕು. ವೇದಿಕೆ ಮೇಲೆ ಸ್ಟಾರ್ ದಂಪತಿಗಳ ಸಾಕಷ್ಟು ಗುಟ್ಟು ಬಯಲಾಗಿದೆ. ಹೆಂಡತಿ ಎದುರು ಸೃಜನ್ ಹೆಚ್ಚು ಮಾತನಾಡುವುದಿಲ್ಲ ಎನ್ನುವ ವಿಚಾರ ಕೂಡ ಹೊರ ಬಿದ್ದಿದೆ.
ಇದೇ ವಿಚಾರ ಇಟ್ಟುಕೊಂಡು ತಾರಾ ಹಾಗೂ ಅನುಪಮಾ ಮಾತನಾಡಿದ್ದಾರೆ. ‘ಸೃಜನ್ ಲೋಕೇಶ್ ‘ರಾಜಾ ರಾಣಿ’ ಶೋನ ಜಡ್ಜ್. ಅವರು ಹೆಂಡತಿ ಎದುರು ಏನೂ ಮಾತನಾಡುವುದಿಲ್ಲ’ ಎಂದರು ಅನುಪಮಾ. ಈ ಮಾತಿನ ಬಗ್ಗೆ ತಾರಾ ಅಚ್ಚರಿ ಹಾಗೂ ಅನುಮಾನ ಎರಡನ್ನೂ ಹೊರ ಹಾಕಿದರು. ‘ವೇದಿಕೆ ಏರಿದ್ರೆ ಸೃಜನ್ ಆ ರೀತಿ ಮಾತನಾಡುತ್ತಾನೆ. ಆದರೆ, ನನ್ನ ಗಂಡ ಮನೆಯಲ್ಲಿ ಮಾತೇ ಆಡಲ್ಲ ಎಂದು ಅವನ ಹೆಂಡತಿ ಹೇಳ್ತಾಳೆ. ಸೃಜನ್ ಮನೆಯಲ್ಲಿ ಮಾತನ್ನೇ ಆಡಲ್ಲ ಎಂಬ ನನಗೆ ಏಕೋ ಅನುಮಾನ’ ಎಂದರು. ಇದಕ್ಕೆ ಅನುಪಮಾ ಧ್ವನಿಗೂಡಿಸಿದರು. ‘ನನಗೂ ಅದೇ ಅನುಮಾನ. ಬಹುಶಃ ಹೆಂಡತಿ ಕಂಡರೆ ಭಯ ಇರಬೇಕು ಅದಕ್ಕೆ ಮಾತನಾಡುವುದಿಲ್ಲ’ ಎಂದು ಅನುಪಮಾ ಹೇಳಿದರು.
ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್ ನಕ್ಕಿದ್ದಾರೆ. ಅಂದಹಾಗೆ, ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ‘ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್ಗಾಗಿ 14 ವರ್ಷ ಸೈಕಲ್ ಹೊಡೆದಿದ್ದೇನೆ’; ವೇದಿಕೆ ಮೇಲೆ ಅತ್ತ ಸೃಜನ್
VijayaLakshmi: ಸೃಜನ್ ಲೋಕೇಶ್ಗೆ ಒಳ್ಳೇದು ಬಯಸಿದ್ದೇ ಅದೇ ತಪ್ಪಾ: ವಿಜಯಲಕ್ಷ್ಮಿ
Published On - 8:43 pm, Mon, 13 September 21