ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Aug 04, 2021 | 3:53 PM

ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ನಾನು ಮತ್ತು ವರಲಕ್ಷ್ಮೀ' ಸಿನಿಮಾಗೆ ಯುವ ಪ್ರತಿಭೆ ಪೃಥ್ವಿ ಹೀರೋ ಆಗಿದ್ದರು. ಬೈಕ್ ರೇಸ್ ಕಥೆಯನ್ನು ಸಿನಿಮಾ ಹೇಳಿದೆ.

ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?
ಅರವಿಂದ್​
Follow us on

ಅರವಿಂದ್ ಕೆ.ಪಿ. ಬಿಗ್​ ಬಾಸ್​ಗೆ ಬಂದ ನಂತರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಸೀಸನ್​ 8ರ ಫಿನಾಲೆಯಲ್ಲಿ ಅವರು ಕೂಡ ಇರೋದು ಬಹುತೇಕ ಖಚಿತವಾಗಿದೆ. ಅಚ್ಚರಿ ಎಂದರೆ, ಅರವಿಂದ್​​ಗೂ ಚಿತ್ರರಂಗಕ್ಕೂ ಒಂದು ಕನೆಕ್ಷನ್​ ಇದೆ. ಈ ವಿಚಾರವನ್ನು ಅರವಿಂದ್ ಅವರೇ ಹೇಳಿಕೊಂಡಿದ್ದಾರೆ.

ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ನಾನು ಮತ್ತು ವರಲಕ್ಷ್ಮೀ’ ಸಿನಿಮಾಗೆ ಯುವ ಪ್ರತಿಭೆ ಪೃಥ್ವಿ ಹೀರೋ ಆಗಿದ್ದರು. ಬೈಕ್ ರೇಸ್ ಕಥೆಯನ್ನು ಸಿನಿಮಾ ಹೇಳಿದೆ. ಬಿಗ್​ ಬಾಸ್​ ಮನೆಯಲ್ಲಿ ಆಗಸ್ಟ್​ 3ರ ಎಪಿಸೋಡ್​ನಲ್ಲಿ ವೇಕ್​ಅಪ್​ ಹಾಡಿಗೆ ಈ ಚಿತ್ರದ ‘ನಾನ್ ಚೆನ್ನಾಗಿದ್ದೆ ಯೆಸ್‌ ಬ್ರೋ..’ ಸಾಂಗ್​ ಪ್ಲೇ ಮಾಡಲಾಯಿತು. ಅರವಿಂದ್​ ಇದು ನಾನು ನಟಿಸಿದ ಸಿನಿಮಾದ ಹಾಡು ಎಂದು ಸಂತಸ ಹೊರ ಹಾಕಿದರು. ಈ ವಿಚಾರ ಮನೆ ಮಂದಿಗೆ ಅಚ್ಚರಿ ಮೂಡಿಸಿತ್ತು. ಅರವಿಂದ್​ ರೇಸಿಂಗ್​ ಹಿನ್ನೆಲೆಯಿಂದ ಬಂದವರು ಎಂಬುದಷ್ಟೇ ಮನೆ ಮಂದಿಗೆ ಗೊತ್ತಿತ್ತು. ಅವರಿಗೂ ಚಿತ್ರರಂಗಕ್ಕೂ ಲಿಂಕ್​ ಇದೆ ಎನ್ನುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿದ್ದವರಿಗೂ ಹಾಗೂ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

‘ನಾನು ಮತ್ತು ವರಲಕ್ಷ್ಮೀ’ ಸಿನಿಮಾ ಸಂಪೂರ್ಣವಾಗಿ ಬೈಕ್​ ರೇಸಿಂಗ್​ ಬಗ್ಗೆ ಇದೆ. ಈ ಸಿನಿಮಾದಲ್ಲಿ ಅರವಿಂದ್ ಬೈಕ್​ ಓಡಿಸಿದ್ದಾರೆ. ಅಷ್ಟೇ ಅಲ್ಲ, ಹೀರೋ ರೇಸ್​ನಲ್ಲಿ ಗೆದ್ದಾಗ ಬೈಕರ್​ ಅರವಿಂದ್​ ಕೆಪಿ ಆಗಿಯೇ ಪ್ರಶಸ್ತಿ ನೀಡುತ್ತಾರೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ಪ್ರಕಾಶ್ ರಾಜ್, ಅಚ್ಯುತ್‌ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮೊದಲಾದವರು ನಟಿಸಿದ್ದರು. ಇನ್ನು, ಮಲಯಾಳಂನ ‘ಬೆಂಗಳೂರು ಡೇಸ್’ ಸಿನಿಮಾದಲ್ಲೂ ಅರವಿಂದ್ ನಟಿಸಿದ್ದಾರೆ.

ಅರವಿಂದ್ ಕೆ.ಪಿ. ಬಿಗ್​ ಬಾಸ್​ಗೆ ಬಂದಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಬೇರೆ ಕ್ಷೇತ್ರದಿಂದ ಬಂದರೂ ದೊಡ್ಡ ಮಟ್ಟದಲ್ಲಿ ಅವರು ಖ್ಯಾತಿ ಪಡೆದುಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಸಾಕಷ್ಟು ವಿಸ್ತರಣೆ ಆಗಿದೆ. ಅರವಿಂದ್ ಗೆಲ್ಲಬೇಕು ಎಂದು ಸಾಕಷ್ಟು ಜನರು ಆಶಿಸುತ್ತಿದ್ದಾರೆ. ಆಗಸ್ಟ್​ 8ರಂದು ಬಿಗ್​ ಬಾಸ್​ ಫಿನಾಲೆ ನಡೆಯುತ್ತಿದೆ. ಯಾರು ಸೀಸನ್​ 8 ಗೆಲ್ಲಲಿದ್ದಾರೆ ಎನ್ನುವುದು ಎಲ್ಲರ ಕುತೂಹಲ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್