AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Telugu: ಬಿಗ್​ ಬಾಸ್​ಗೆ ಬರಲ್ಲ ಎಂದ ರಾಬರ್ಟ್​ ಗಾಯಕಿ ಮಂಗ್ಲಿ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಆರಂಭಗೊಳ್ಳಬೇಕಿತ್ತು. ಆದರೆ,  ಕೊವಿಡ್​ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ. ಹೀಗಾಗಿ ಸೆಪ್ಟೆಂಬರ್​ ವೇಳೆಗೆ ಹೊಸ ಶೋ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Bigg Boss Telugu: ಬಿಗ್​ ಬಾಸ್​ಗೆ ಬರಲ್ಲ ಎಂದ ರಾಬರ್ಟ್​ ಗಾಯಕಿ ಮಂಗ್ಲಿ
ಬಿಗ್​ ಬಾಸ್​ಗೆ ಬರಲ್ಲ ಎಂದ ರಾಬರ್ಟ್​ ಗಾಯಕಿ ಮಂಗ್ಲಿ
TV9 Web
| Edited By: |

Updated on: Aug 04, 2021 | 6:25 PM

Share

Bigg Boss Telugu: ತೆಲುಗು ಬಿಗ್​ ಬಾಸ್​ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ​ಈಗ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ.  ಸೆಪ್ಟೆಂಬರ್​ನಿಂದ ಹೊಸ ಸೀಸನ್​ ಆರಂಭಗೊಳ್ಳುತ್ತಿದೆ ಎನ್ನಲಾಗಿದೆ. ಈ ಶೋನ ಸಂಭಾವ್ಯ ಪಟ್ಟಿ ಹರಿದಾಡಿತ್ತು. ಇದರಲ್ಲಿ ರಾಬರ್ಟ್​ ಗಾಯಕಿ ಮಂಗ್ಲಿ ಹೆಸರು ಕೂಡ ಹರಿದಾಡಿತ್ತು. ಆದರೆ, ಈಗ ಅವರು ಶೋನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. 

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಆರಂಭಗೊಳ್ಳಬೇಕಿತ್ತು. ಆದರೆ,  ಕೊವಿಡ್​ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ. ಹೀಗಾಗಿ ಸೆಪ್ಟೆಂಬರ್​ ವೇಳೆಗೆ ಹೊಸ ಶೋ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ, ರಿಲೀಸ್​ ಆದ ಪ್ರೋಮೋದಲ್ಲಿ ‘ನಾವು ಅತಿ ಶೀಘ್ರದಲ್ಲಿ ಬರುತ್ತೇವೆ’ ಎಂದು ಮಾತ್ರ ಇದೆ. ಸ್ಟಾರ್​ ಮಾ ವಾಹಿನಿಯಲ್ಲಿ ತೆಲುಗು ಬಿಗ್​ ಬಾಸ್​ ಪ್ರಸಾರವಾಗಲಿದೆ.

ಬಿಗ್​ ಬಾಸ್ ಆರಂಭಕ್ಕೂ ಮುನ್ನ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗೋದು ಸಾಮಾನ್ಯ. ಈ ಬಾರಿಯೂ ಅದೇ ರೀತಿ ಆಗಿದೆ. ತೆಲುಗಿನಲ್ಲಿ ‘ರಾಬರ್ಟ್’​ ಸಿನಿಮಾದ ಹಾಡನ್ನು ಹಾಡಿದ ಗಾಯಕಿ ಮಂಗ್ಲಿ, ಆ್ಯಂಕರ್​ ರವಿ, ಶರಣ್​ ನಟನೆಯ ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್​ ಸೇರಿ ಅನೇಕರು ಬಿಗ್​ ಬಾಸ್​ ಮನೆ ಸೇರುತ್ತಿದ್ದಾರೆ ಎನ್ನಲಾಗುತ್ತಿತ್ತು.

ಈಗಾಗಲೇ ಆ್ಯಂಕರ್​ ರವಿ ಅವರು ತಾವು ಬಿಗ್​ ಬಾಸ್​ ಸೇರುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗ ಮಂಗ್ಲಿ ಕೂಡ ಶೋ ಸೇರೋದು ಅನುಮಾನ ಎನ್ನಲಾಗುತ್ತಿದೆ. ಮಂಗ್ಲಿ ಅವರು ಇತ್ತೀಚೆಗೆ ‘ಬೋನಾಲು..’ ಸಾಂಗ್​ ರಿಲೀಸ್​ ಮಾಡಿದ್ದರು. ಆದರೆ, ಈ ಹಾಡು ಕಾಳಿ ದೇವಿಗೆ ಅವಮಾನ ಮಾಡುವಂತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಬೆಜೆಪಿ ಶಾಸಕರು ಮಂಗ್ಲಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಈ ಕಾರಣಕ್ಕೆ ಮಂಗ್ಲಿ ಬಿಗ್​ ಬಾಸ್​ ಶೋನಲ್ಲಿ ಪಾಳ್ಗೊಳ್ಳುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ‘ಕಣ್ಣೇ ಅದಿರಿಂದಿ’ ಗಾಯಕಿ ಮಂಗ್ಲಿ? ಹೆಚ್ಚಿತು ವೀಕ್ಷಕರ ನಿರೀಕ್ಷೆ

ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ