ಕಿಚ್ಚನ ಎದುರು ಕಣ್ಣೀರು ಹಾಕಿದ ಅರುಣ್ ಸಾಗರ್​; ಇದಕ್ಕೆ ಕಾರಣ ರೂಪೇಶ್ ಶೆಟ್ಟಿ ತಂದೆ

ವೀಕೆಂಡ್ ಬಂದಿದೆ. ಸುದೀಪ್ ಅವರು ವಾರಾಂತ್ಯದ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅವರು ಒಂದು ಪ್ರಶ್ನೆ ಕೇಳಿದ್ದಾರೆ. ‘ಸ್ಪರ್ಧಿಗಳ ಕುಟುಂಬದವರು ಬಂದು ಹೋದರು. ಈ ಪೈಕಿ ಯಾರು ಆ ಕ್ಷಣವನ್ನು ಬಾಳಿ ಬದುಕಿದರು’ ಎಂದು ಕೇಳಿದ್ದಾರೆ ಸುದೀಪ್.

ಕಿಚ್ಚನ ಎದುರು ಕಣ್ಣೀರು ಹಾಕಿದ ಅರುಣ್ ಸಾಗರ್​; ಇದಕ್ಕೆ ಕಾರಣ ರೂಪೇಶ್ ಶೆಟ್ಟಿ ತಂದೆ
ಅರುಣ್ ಸಾಗರ್-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 03, 2022 | 6:09 PM

ಅರುಣ್ ಸಾಗರ್ (Arun Sagar) ಅವರು ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಮನರಂಜನೆಯಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲ, ತಪ್ಪಾದಾಗ ಖಂಡಿಸಿ ಅದನ್ನು ಎಲ್ಲರ ಎದುರು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಈ ಕಾರಣಕ್ಕೆ ಅನೇಕರಿಗೆ ಅವರು ಇಷ್ಟವಾಗುತ್ತಾರೆ. ಅರುಣ್ ಸಾಗರ್​ ಅವರು ಈಗ ಕಿಚ್ಚ ಸುದೀಪ್ (Kichcha Sudeep) ಎದುರು ಕಣ್ಣಿರು ಹಾಕಿದ್ದಾರೆ. ಇದಕ್ಕೆ ಕಾರಣ ರೂಪೇಶ್ ಶೆಟ್ಟಿ. ಅಷ್ಟಕ್ಕೂ ಆಗಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಾರ ಬಿಗ್ ಬಾಸ್ ಮಂದಿಗೆ ವಿಶೇಷ ಆಗಿತ್ತು. ಇದಕ್ಕೆ ಕಾರಣ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬಂದಿದ್ದರು. ಕುಟುಂಬದವರು ಒಂದಷ್ಟು ಸಮಯ ಬಿಗ್ ಬಾಸ್ ಮನೆಯಲ್ಲಿ ಕಳೆದು ಹೋಗಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಪ್ರತಿ ಸ್ಪರ್ಧಿಯ ಕುಟುಂಬದವರು ಬಂದಾಗಲೂ ಇತರ ಸ್ಪರ್ಧಿಗಳೂ ಖುಷಿ ಪಟ್ಟಿದ್ದಾರೆ. ಇತರ ಸ್ಪರ್ಧಿಗಳ ಕುಟುಂಬ ಸದಸ್ಯರಲ್ಲಿ ತಮ್ಮ ಕುಟುಂಬದವರನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ರೂಪೇಶ್ ಶೆಟ್ಟಿ ಅವರ ತಂದೆ ಬಂದಿದ್ದರು. ಅರುಣ್ ಸಾಗರ್ ಅವರು ರೂಪೇಶ್ ತಂದೆಯಲ್ಲಿ ತಮ್ಮ ತಂದೆಯನ್ನು ಕಂಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ವೀಕೆಂಡ್ ಬಂದಿದೆ. ಸುದೀಪ್ ಅವರು ವಾರಾಂತ್ಯದ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಅವರು ಒಂದು ಪ್ರಶ್ನೆ ಕೇಳಿದ್ದಾರೆ. ‘ಸ್ಪರ್ಧಿಗಳ ಕುಟುಂಬದವರು ಬಂದು ಹೋದರು. ಈ ಪೈಕಿ ಯಾರು ಆ ಕ್ಷಣವನ್ನು ಬಾಳಿ ಬದುಕಿದರು’ ಎಂದು ಕೇಳಿದ್ದಾರೆ ಸುದೀಪ್. ಇದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ ಅವರು, ‘ಅರುಣ್ ಸಾಗರ್ ಅವರ ಪತ್ನಿ ಶೇ.95 ಸಮಯ ಅವರ ಹೆಗಲಮೇಲೆ ಕಳೆದಿದ್ದಾರೆ’ ಎಂದರು.

ಇದನ್ನೂ ಓದಿ: ‘ನೀವು ಮೊದ್ಲು ಕಳ್ಳತನ ಮಾಡ್ತಿದ್ರಾ?’; ಕಾವ್ಯಶ್ರೀ ಗೌಡ ಕೈಚಳಕ ನೋಡಿ ಅಚ್ಚರಿಗೊಂಡ ಅರುಣ್ ಸಾಗರ್  

ಅರುಣ್ ಸಾಗರ್ ಅವರು ತಮ್ಮ ಅನುಭವ ಹೇಳುವಾಗ ಭಾವುಕರಾದರು. ‘ನಾನು ನನ್ನ ತಂದೆಯನ್ನು ಐದೂವರೆ ವರ್ಷದವನಿದ್ದಾಗ ಕಳೆದುಕೊಂಡಿದ್ದೆ. ರೂಪೇಶ್ ತಂದೆ ಬಂದಾಗ ನನ್ನ ತಂದೆ ತುಂಬಾನೇ ನೆನಪಾಯ್ತು. ತಂದೆ ಪ್ರೀತಿ ಅನ್ನೋದು ತುಂಬಾನೇ ಮುಖ್ಯ. ನಾನು ರೂಪೇಶ್ ರಾಜಣ್ಣ ಅವರ ತಂದೆಯಲ್ಲಿ ನನ್ನ ತಂದೆಯನ್ನು ಕಂಡೆ’ ಎಂದಿದ್ದಾರೆ ಅರುಣ್ ಸಾಗರ್. ಇದನ್ನು ಹೇಳುವಾಗ ಅವರು ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:06 pm, Sat, 3 December 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ