
ಬಿಗ್ ಬಾಸ್ ಮನೆಯಲ್ಲಿರೋ ಅಶ್ವಿನಿ ಗೌಡ ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇದೆ. ಅವರ ಸೋಶಿಯ್ ಮೀಡಿಯಾ ಖಾತೆಯಲ್ಲಿರೋ ಪೋಸ್ಟ್ಗೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ಅಶ್ವಿನಿ ಗೌಡ ಅವರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅವರಿಗೆ ವಿಲನ್ ಆಗಬೇಕು ಎಂಬ ಯಾವುದೇ ಉದ್ದೇಶ ಇಲ್ಲ. ಆದರೆ, ಹೊರಗೆ ನಡೆಯುತ್ತಿರುವುದು ಇದೇ. ಈ ವಿಷಯವನ್ನು ಅವರು ಜಾನ್ವಿ ಜೊತೆ ಚರ್ಚೆ ಮಾಡಿದ್ದಾರೆ.
ಪ್ರತಿ ವಾರವೂ ಅಶ್ವಿನಿ ಗೌಡ ಅವರಿಗೆ ಸುದೀಪ್ ಅವರಿಂದ ಕ್ಲಾಸ್ ಇದ್ದೇ ಇರುತ್ತದೆ. ಆರಂಭದಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಕೆಣಕಿ ಕ್ಲಾಸ್ ತೆಗೆದುಕೊಂಡರು. ನಂತರ ಈ ರೀತಿಯದ್ದು ನಡೆದೇ ಇತ್ತು. ಕಳೆದ ವಾರ ಅಶ್ವಿನಿಗೆ ಸುದೀಪ್ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಷಯದ ಬಗ್ಗೆ ಅಶ್ವಿನಿ ಅವರು ಜಾನ್ವಿ ಜೊತೆ ಚರ್ಚೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಬ್ಬರು ನೆಗೆಟಿವ್ ಆಗಿ ಕಂಡಾಗ ಸಹಜವಾಗಿಯೇ ಮತ್ತೊಬ್ಬರು ಹೀರೋ ಆಗಿ ಕಾಣಿಸುತ್ತಾರೆ. ಈಗ ಅಶ್ವಿನಿ ಗೌಡ ಅವರ ಆಟದಲ್ಲಿ ಆಗಿದ್ದು ಇದೇ. ಅಶ್ವಿನಿ ಅವರ ನೆಗೆಟಿವಿಟಿಯಿಂದ ರಕ್ಷಿತಾ ಹಾಗೂ ಗಿಲ್ಲಿ ಆಟಕ್ಕೆ ಸಾಕಷ್ಟು ಮೈಲೇಜ್ ಸಿಕ್ಕಿದೆ. ಆದರೆ, ಅಶ್ವಿನಿ ಅವರು ಇಷ್ಟೆಲ್ಲ ಮಾಡಿದರೂ ತಮ್ಮನ್ನು ತಾವು ತಿದ್ದಿಕೊಳ್ಳುತ್ತಿಲ್ಲ. ಯಾರಾದರೂ ಕೆಣಕಿದರೆ ಉರಿದುರಿದು ಬೀಳುತ್ತಾರೆ. ಇದರಿಂದ ಆಟ ಮತ್ತಷ್ಟು ಹಾಳಾಗುತ್ತಿದೆ.
ಅಶ್ವಿನಿ ಗೌಡ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜಾನ್ವಿ ಜೊತೆ ಕುಳಿತು ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಪ್ರತಿ ವಾರವೂ ನಮಗೆ ಕ್ಲಾಸ್ ಇದೆ ಎಂದಾಗ ಏಕೋ ನಾನು ಹೊರಗೆ ಸಾಕಷ್ಟು ನೆಗೆಟಿವ್ ಆಗಿ ಕಾಣಿಸುತ್ತಿದ್ದೇನೆ ಅನಿಸುತ್ತಿದೆ. ನಾನು ಇಲ್ಲಿ ಯಾರನ್ನೂ ಹೀರೋ ಮಾಡೋಕೆ ಬಂದಿಲ್ಲ. ಅವರು ಯಾರಾದರೂ ಹೀರೋ ಆಗಲಿ, ನನಗೆ ಮಾತ್ರ ವಿಲನ್ ಆಗೋಕೆ ಇಷ್ಟ ಇಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.
ಇದನ್ನೂ ಓದಿ: ‘ಈ ಆಟ ನನಗೆ ಅಲ್ಲ ಅನಿಸುತ್ತೆ’; ಕಣ್ಣೀರು ಹಾಕುತ್ತಲೇ ಹೇಳಿದ ಅಶ್ವಿನಿ
ಅಶ್ವಿನಿ ಗೌಡ ಏನು ನಡೆಯಬಾರದು ಎಂದುಕೊಂಡಿದ್ದರೋ ಅದೇ ನಡೆದು ಹೋಗಿದೆ. ಅವರು ಹೊರಗೆ ವಿಲನ್ ಆಗಿಯೇ ಕಾಣಿಸುತ್ತಿದ್ದಾರೆ. ಈ ವಿಷಯ ಹೊರಗೆ ಎಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಎಂಬ ಸಣ್ಣ ಐಡಿಯಾ ಕೂಡ ಅವರಿಗೆ ಇಲ್ಲ. ಹೊರಗೆ ಬಂದ ಬಳಿಕ ಈ ಬಗ್ಗೆ ಅವರಿಗೆ ಈ ಬಗ್ಗೆ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.