AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಆಟ ನನಗೆ ಅಲ್ಲ ಅನಿಸುತ್ತೆ’; ಕಣ್ಣೀರು ಹಾಕುತ್ತಲೇ ಹೇಳಿದ ಅಶ್ವಿನಿ

ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ "ಈ ಆಟ ನನಗೆ ಅಲ್ಲ" ಎಂದು ಕಣ್ಣೀರಿಟ್ಟಿದ್ದಾರೆ. ಸುದೀಪ್ ಅವರಿಂದ ನಿರಂತರವಾಗಿ ಕ್ಲಾಸ್ ಹೇಳಿಸಿಕೊಳ್ಳುತ್ತಿರುವುದು ಹಾಗೂ ಹೊರಗೆ ನಕಾರಾತ್ಮಕವಾಗಿ ಕಾಣಿಸುತ್ತಿರುವುದು ಅವರಿಗೆ ನೋವು ತಂದಿದೆ. ತಮ್ಮ ಮಾತುಗಳು ಮತ್ತು ವರ್ತನೆಯ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.

‘ಈ ಆಟ ನನಗೆ ಅಲ್ಲ ಅನಿಸುತ್ತೆ’; ಕಣ್ಣೀರು ಹಾಕುತ್ತಲೇ ಹೇಳಿದ ಅಶ್ವಿನಿ
ಅಶ್ವಿನಿ-ಜಾನ್ವಿ
ರಾಜೇಶ್ ದುಗ್ಗುಮನೆ
|

Updated on: Nov 24, 2025 | 7:11 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಅವರು ಪ್ರತಿ ವೀಕೆಂಡ್​ನಲ್ಲೂ ಸುದೀಪ್ ಅವರಿಂದ ಕ್ಲಾಸ್ ಹೇಳಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ಸುದೀಪ್ ಅವರು ಅಶ್ವಿನಿ ಗೌಡಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಅಶ್ವಿನಿ ಗೌಡ ಅವರು ಚಿಂತೆಗೆ ಒಳಗಾಗಿದ್ದಾರೆ. ಏನು ಮಾಡಿದರೂ ಕ್ಲಾಸ್ ಮಾತ್ರ ತಪ್ಪುತ್ತಿಲ್ಲ ಎಂಬ ಭಯ ಶುರುವಾಗಿದೆ. ಇಷ್ಟೇ ಅಲ್ಲ, ಅವರದ್ದೇ ಬಾಯಲ್ಲಿ ಬಂದ ಕೆಟ್ಟ ಪದಗಳನ್ನು ಕೇಳಿಸಿದಾಗ ಅವರಿಗೆ ಅಚ್ಚರಿ ಎನಿಸಿದೆ. ಈ ಬಗ್ಗೆ ಅಶ್ವಿನಿ ಗೌಡ ಅವರು ಜಾನ್ವಿ ಜೊತೆ ಮಾತುಕತೆ ನಡೆಸಿದ್ದಾರೆ.

ಭಾನುವಾರದ ಎಪಿಸೋಡ್​ನಲ್ಲಿ ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾತನಾಡುತ್ತಿದ್ದರು. ‘ಬಿಗ್ ಬಾಸ್ ಆಟ ನನಗೆ ಗೊತ್ತಿಲ್ಲ. ನಾವು ಏನು ಮಾಡ್ತೀವಿ ಅನ್ನೋದೇ ಗೊತ್ತಾಗ್ತಿಲ್ಲ. ಊಟ ಬಿಟ್ಟಿದ್ದು ಎಮೋಷನ್ ಬ್ಲ್ಯಾಕ್​ಮೇಲ್ ರೀತಿ ಅನಿಸಿದೆ. ಆ ಕ್ಷಣಕ್ಕೆ ಗೊತ್ತಾಗಿಲ್ಲ. ಗೊತ್ತಿಲ್ಲದೆ ಎಷ್ಟೆಲ್ಲ ಮಾತುಗಳನ್ನು ಆಡಿದ್ದೇವೆ. ಉದ್ದೇಶ ಪೂರ್ವಕವಾಗಿ ಹೇಳಿಲ್ಲ’ ಎಂದರು ಅಶ್ವಿನಿ ಗೌಡ.

‘ಹಿಂಸೆ ಆಗ್ತಾ ಇದೆ. ಈ ಆಟವನ್ನು ಪೂರ್ಣಗೊಳಿಸಲು ಆಗುತ್ತಾ? ಗೊತ್ತಿಲ್ಲ. ಪ್ರತಿ ವಾರ ನಮಗೆ ಕ್ಲಾಸ್ ಇದೆ. ಹೊರಗೆ ನೆಗೆಟಿವ್ ಆಗಿ ಕಾಣಿಸುತ್ತಿದ್ದೇನೆ ಅನಿಸುತ್ತಿದೆ. ಈ ಆಟ ನನಗೆ ಅಲ್ಲ ಅನಿಸುತ್ತದೆ. ತುಂಬಾ ನೋವಾಗ್ತಿದೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ‘ತೀರಾ ಎಮೋಷನಲ್ ಆಗಿ ಆಡಬಾರದು. ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಬೇಕು’ ಎಂದು ಜಾನ್ವಿ ಅವರು ಅಶ್ವಿನಿಗೆ ಧೈರ್ಯ ತುಂಬಿದರು.

‘ಭಾವನೆ ಕಂಟ್ರೋಲ್ ಆಗ್ತಿಲ್ಲ. ನೆಗೆಟಿವ್ ಆಗಿ ಕಾಣಿಸುತ್ತಿದ್ದೇನೆ ಅನಿಸುತ್ತಿದೆ. ಆಟ ಆಡುವ ಭರದಲ್ಲಿ, ಗೆಲ್ಲುವ ಭರದಲ್ಲಿ ತಪ್ಪಾಗಿದೆ ಅನಿಸುತ್ತದೆ. ನಮ್ಮ ನಡುವಳಿಕೆ ಈ ರೀತಿ ಪ್ರೊಜೆಕ್ಟ್ ಆಗ್ತಿದೆ. ನಾನು ವಿಲನ್ ಆಗೋಕೆ ಬಂದಿಲ್ಲ’ ಎಂದಿದ್ದಾರೆ ಅಶ್ವಿನಿ ಗೌಡ.

ಇದನ್ನೂ ಓದಿ: ಅಶ್ವಿನಿ ಗೌಡ ಎದುರಲ್ಲೇ ಕಿಚ್ಚನ ಚಪ್ಪಾಳೆ ಪಡೆದ ರಕ್ಷಿತಾ ಶೆಟ್ಟಿ: ಸುದೀಪ್ ಮೆಚ್ಚಿದ್ದು ಏನು?

ಅಶ್ವಿನಿ ಗೌಡ ಅವರು ಹೊರಗೆ ಸಾಕಷ್ಟು ನೆಗೆಟಿವ್ ಆಗಿ ಕಾಣಿಸುತ್ತಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಖಾತೆಗೆ ಹೇಟ್ ಕಮೆಂಟ್​ಗಳು ಬರುತ್ತಿವೆ. ಹೊರ ಬಂದ ಬಳಿಕ ಇದನ್ನು ಅವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.