ಬಿಗ್ಬಾಸ್ ಮನೆಯಿಂದ ನಿರೀಕ್ಷಿತ ಎಲಿಮಿನೇಷನ್: ಹೊರ ಹೋಗಿದ್ದು ಯಾರು?
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12ರ ಮನೆ ವಾರದಿಂದ ವಾರಕ್ಕೆ ಕಿರಿದಾಗುತ್ತಾ ಸಾಗುತ್ತಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಮತ್ತೊಬ್ಬರು ಎವಿಕ್ಟ್ ಆಗಿದ್ದಾರೆ. ಈ ವಾರ ಮಾಳು, ರಿಶಾ, ಧ್ರುವಂತ್ ಮತ್ತು ಜಾನ್ವಿ ಇಷ್ಟರಲ್ಲಿ ಯಾರಾದರೂ ಒಬ್ಬರು ಎವಿಕ್ಟ್ ಆಗಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿತ್ತು, ಕೊನೆಗೆ ಎವಿಕ್ಟ್ ಆಗಿದ್ದು ಯಾರು?

ವಾರದಿಂದ ವಾರಕ್ಕೆ ಬಿಗ್ಬಾಸ್ (Bigg Boss) ಮನೆ ಕಿರಿದಾಗುತ್ತಾ ಬರುತ್ತಿದೆ. ಈ ಭಾನುವಾರವೂ ಬಿಗ್ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರು ಎವಿಕ್ಟ್ ಆಗಿದ್ದಾರೆ. ಆದರೆ ಈ ಬಾರಿ ತುಸು ನಿರೀಕ್ಷಿತ ಎಲಿಮಿನೇಷನ್ ಆಗಿದೆ ಎನ್ನಬಹುದು. ಈ ವಾರ ನಾಲ್ವರ ಮೇಲೆ ಎವಿಕ್ಷನ್ ಕತ್ತಿ ತೂಗುತ್ತಿತ್ತು. ಧ್ರುವಂತ್, ಮಾಳು, ಜಾನ್ವಿ ಮತ್ತು ರಿಶಾ. ಅದರಂತೆ ಅಂತಿಮವಾಗಿ ಧ್ರುವಂತ್ ಮತ್ತು ರಿಶಾ ಉಳಿದುಕೊಂಡರು. ಪ್ರೇಕ್ಷಕರು ಈ ವಾರ ಧ್ರುವಂತ್ ಅವರನ್ನು ಉಳಿಸಿದರು, ರಿಶಾ ಅವರನ್ನು ಹೊರಗೆ ಕಳಿಸಿದರು.
ರಿಶಾ ಅವರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರು. ಸೂರಜ್, ರಘು ಮತ್ತು ರಿಶಾ ಒಟ್ಟಿಗೆ ಮನೆಗೆ ಬಂದರು. ಇದ್ದ ಕೆಲ ವಾರಗಳಲ್ಲಿ ಸಾಕಷ್ಟು ಪ್ರಭಾವವನ್ನು ಅವರು ಪ್ರೇಕ್ಷಕರ ಮೇಲೆ ಬೀರಿದ್ದರು. ಚಂದ್ರಪ್ರಭಾ, ಗಿಲ್ಲಿ ಜೊತೆಗೆ ತಮಾಷೆಯಾಗಿ ಫ್ಲರ್ಟ್ ಮಾಡುತ್ತಾ ತಮಾಷೆ ಮಾಡಿದರು. ಬಳಿಕ ಟಾಸ್ಕ್ ವೇಳೆ ಬಹಳ ರಫ್ ಆಂಡ್ ಟಫ್ ಆಗಿ ಆಟ ಆಡಿ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಆದರೆ ಗಿಲ್ಲಿ ಮೇಲೆ ಕೈ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೂ ಗುರಿ ಆಗಿದ್ದರು. ಇದೀಗ ಮನೆಯಿಂದ ಹೊರಗೆ ಹೋಗಿದ್ದಾರೆ.
ರಿಶಾ, ಬಿಗ್ಬಾಸ್ ಮನೆಯಲ್ಲಿದ್ದಾಗ ಹಲವು ಎಮೋಷನ್ಗಳನ್ನು ಹೊರಹಾಕುತ್ತಿದ್ದರು. ನಗು, ಅಳು, ಕೋಪ, ಬೈಗುಳ, ಸಿಟ್ಟು, ದ್ವೇಷ ಎಲ್ಲವನ್ನೂ ತೋರಿಸಿದ್ದರು. ಆದರೆ ಮನೆಯಿಂದ ಹೊರಗೆ ಹೋಗಬೇಕಾದರೆ ನಗು-ನಗುತ್ತಲೇ ಆರಾಮವಾಗಿಯೇ ಮನೆಯಿಂದ ಹೊರಗೆ ಬಂದರು. ಅದರಲ್ಲೂ ರಾಶಿಕಾ ಕುರಿತಾಗಿ, ‘ನೀನು ಚೆನ್ನಾಗಿ ಆಡಬೇಕು, ನೀನು ಫಿನಾಲೆ ವರೆಗೂ ಹೋಗಬೇಕು. ಯಾರನ್ನೂ ನಂಬಬೇಡ, ಚೆನ್ನಾಗಿ ಆಟ ಆಡು’ ಎಂದೆಲ್ಲ ಬುದ್ಧಿವಾದವನ್ನೂ ಸಹ ಹೇಳಿದರು.
ಇದನ್ನೂ ಓದಿ:ಅಶ್ವಿನಿ ಬಗ್ಗೆ ಗಿಲ್ಲಿ ಆಡಿದ ಮಾತು ಕೇಳಿ ಕುಸಿದೇ ಬಿಟ್ಟ ಕಿಚ್ಚ ಸುದೀಪ್
ಎವಿಕ್ಷನ್ ಬಳಿಕ ಸುದೀಪ್ ಅವರೊಟ್ಟಿಗೆ ವೇದಿಕೆಯಲ್ಲಿ ನಿಂತು ಮಾತನಾಡುತ್ತಾ, ‘ಈ ಮನೆಯಿಂದ ಸಾಕಷ್ಟು ವಿಷಯ ಕಲಿತಿದ್ದೇನೆ. ವಿಶೇಷವಾಗಿ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದನ್ನು ಕಲಿತಿದ್ದೇನೆ. ನಾನು ಬಹಳ ಖುಷಿಯಿಂದಲೇ ಬಿಗ್ಬಾಸ್ ಮನೆಯ ಒಳಗೆ ಹೋಗಿದ್ದೆ. ಗೆದ್ದು, ಅದೇ ಖುಷಿಯಲ್ಲಿ ಹೊರಗೆ ಬರಬೇಕು ಎಂದುಕೊಂಡೆ. ಆದರೆ ಸೋಲನ್ನೂ ಖುಷಿಯಿಂದಲೇ ಸ್ವೀಕರಿಸಬೇಕು ಎಂಬುದನ್ನು ಈ ಮನೆ ಕಲಿಸಿಕೊಟ್ಟಿದೆ. ಈಗಲೂ ನಾನು ಖುಷಿಯಿಂದಲೇ ಹೊರಗೆ ಬಂದಿದ್ದೇನೆ’ ಎಂದರು ರಿಶಾ. ‘ತಾವು ತಮ್ಮ ಬಿಗ್ಬಾಸ್ ಗೆಳೆಯರನ್ನು, ಸಹ ಸ್ಪರ್ಧಿಗಳ ಜೊತೆಗೆ ಮಾಡುತ್ತಿದ್ದ ಜಗಳವನ್ನು ಮಿಸ್ ಮಾಡಿಕೊಳ್ಳುವುದಾಗಿ’ ರಿಶಾ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




