ಅಶ್ವಿನಿ ಬಗ್ಗೆ ಗಿಲ್ಲಿ ಆಡಿದ ಮಾತು ಕೇಳಿ ಕುಸಿದೇ ಬಿಟ್ಟ ಕಿಚ್ಚ ಸುದೀಪ್
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆದಾಗಿನಿಂದಲೂ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಕಿತ್ತಾಡುತ್ತಲೇ ಇದ್ದಾರೆ. ಪರಸ್ಪರರನ್ನು ಉರಿಸುವುದು, ಕಾಲೆಳೆಯುವುದು, ನಿಂದಿಸುವುದು, ಜಗಳ ಮಾಡುವುದು ಇದೇ ಆಗಿದೆ. ಆದರೆ ಶನಿವಾರದ ಎಪಿಸೋಡ್ನಲ್ಲಿ ಗಿಲ್ಲಿ, ಅಶ್ವಿನಿ ಬಗ್ಗೆ ಆಡಿದ ಮಾತು ಕೇಳಿ ಸ್ವತಃ ಸುದೀಪ್ಗೆ ಶಾಕ್ ಆಗಿದೆ. ಅಷ್ಟಕ್ಕೂ ಗಿಲ್ಲಿ ಹೇಳಿದ್ದೇನು?

ಬಿಗ್ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ಮೊದಲ ದಿನದಿಂದಲೂ ಹಾವು ಮುಂಗುಸಿಯಂತೆ ಆಡುತ್ತಿದ್ದಾರೆ. ಮೊದಲ ದಿನದಿಂದಲೂ ಈ ಇಬ್ಬರಲ್ಲಿ ಹೊಂದಾಣಿಕೆಯೇ ಇಲ್ಲ. ಅಶ್ವಿನಿ ಕಂಡರೆ ಗಿಲ್ಲಿಗೆ ಆಗದು, ಗಿಲ್ಲಿಯ ಕಂಡರೆ ಅಶ್ವಿನಿಗೆ ಆಗದು. ಈ ಇಬ್ಬರು ದಿನಕ್ಕೆ ಒಮ್ಮೆಯಾದರೂ ಜಗಳ, ಪರಸ್ಪರ ಕಾಲೆಳೆದುಕೊಳ್ಳುವುದು ಮಾಡುತ್ತಲೇ ಇರುತ್ತಾರೆ. ನಾಮಿನೇಷನ್ ಪ್ರಕ್ರಿಯೆ ಬಂದಾಗಲೂ ಸಹ ಪರಸ್ಪರರನ್ನು ನಾಮಿನೇಟ್ ಮಾಡುವುದು ಬಹುತೇಕ ಖಾತ್ರಿ. ಆದರೆ ನಿನ್ನೆ ಅಂದರೆ ಶನಿವಾರದ ಎಪಿಸೋಡ್ನಲ್ಲಿ ಗಿಲ್ಲಿ, ಅಶ್ವಿನಿ ಬಗ್ಗೆ ಆಡಿದ ಮಾತು ಕೇಳಿ ನಿರೂಪಕ ಸುದೀಪ್ ಶಾಕ್ ಆದರು. ಶಾಕ್ನಿಂದ ಒಮ್ಮೆಲೆ ಕುಸಿದು ಕೂತರು. ಅಷ್ಟಕ್ಕೂ ಗಿಲ್ಲಿ ಹೇಳಿದ ಮಾತೇನು?
ಸುದೀಪ್ ಅವರು ಶನಿವಾರದ ಎಪಿಸೋಡ್ನಲ್ಲಿ ಪ್ರತಿಬಾರಿಯಂತೆ ವಾರದಲ್ಲಿ ನಡೆದ ಘಟನೆಗಳನ್ನು ಪರಾಮರ್ಶೆ ಮಾಡಿದರು. ಈ ಬಾರಿಯೂ ಸಹ ಅಶ್ವಿನಿ ಅವರು ಸಾಕಷ್ಟು ತಪ್ಪು ಮಾಡಿದ್ದರು ಹಾಗಾಗಿ ಸಹಜವಾಗಿಯೇ ಅವರ ಬಗ್ಗೆಯೇ ಹೆಚ್ಚಿನ ಚರ್ಚೆ ಇತ್ತು. ಶನಿವಾರದ ಎಪಿಸೋಡ್ನ ಕೊನೆಯಲ್ಲಿ ಪ್ರತಿ ಬಾರಿಯಂತೆ ನಾಮಿನೇಷನ್ ಆದವರಲ್ಲಿ ಕೆಲವರನ್ನು ಉಳಿಸುವ ಪ್ರಕ್ರಿಯೆ ನಡೆಯಿತು.
ಈ ಪ್ರಕ್ರಿಯೆಯಲ್ಲಿ ರಕ್ಷಿತಾ, ಸ್ಪಂದನಾ, ಪ್ರಸ್ತುತ ಕ್ಯಾಪ್ಟನ್ ಅಭಿ ಅವರುಗಳು ಎಲಿಮಿನೇಷನ್ನಿಂದ ಮೊದಲಿಗೆ ಪಾರಾದರು. ಆ ಬಳಿಕ ಈ ಬಾರಿ ಯಾರು ಉಳಿದುಕೊಳ್ಳಬೇಕು ಎಂದು ಸುದೀಪ್ ಅವರು ಗಿಲ್ಲಿಯನ್ನು ಕೇಳಿದರು. ಅದಕ್ಕೆ ಗಿಲ್ಲಿ, ‘ಅಶ್ವಿನಿ ಅವರು ಉಳಿದುಕೊಳ್ಳಬೇಕು’ ಎಂದರು. ಗಿಲ್ಲಿಯ ಮಾತು ಕೇಳಿ ಸ್ವತಃ ಸುದೀಪ್ಗೆ ಶಾಕ್ ಆಯ್ತು. ಅದ್ಯಾಕೆ ಎಂದು ಕೇಳಿದಾಗ, ‘ನನಗೆ ಅಶ್ವಿನಿ ಅವರೆಂದರೆ ಬಹಳ ಇಷ್ಟ, ಬಹಳ ಪ್ರೀತಿ ಅದಕ್ಕೆ ಅವರು ಉಳಿದುಕೊಳ್ಳಬೇಕು’ ಎಂದರು ಗಿಲ್ಲಿ. ಗಿಲ್ಲಿ ನಟನ ಮಾತು ಕೇಳಿ ನಿಂತಿದ್ದ ಸುದೀಪ್ ಹಠಾತ್ತನೆ ಕೂತುಬಿಟ್ಟರು, ಅವರಿಗೆ ನಗು ತಡೆಯಲಾಗಲಿಲ್ಲ.
ಇದನ್ನೂ ಓದಿ:ಸುದೀಪ್ ಇಲ್ಲದಿದ್ದಾಗ ಬಣ್ಣ ಬದಲಿಸುವ ಅಶ್ವಿನಿ ಗೌಡ: ಮುಖವಾಡ ಕಳಚಿದ ಗಿಲ್ಲಿ ನಟ
ಒಬ್ಬ ಪ್ರಬಲ ಪ್ರತಿಸ್ಪರ್ಧಿ ಬೇಕು ಎಂಬ ಕಾರಣಕ್ಕಾ ನೀನು ಅಶ್ವಿನಿ ಅವರು ಉಳಿದುಕೊಳ್ಳಬೇಕು ಎನ್ನುತ್ತಿರುವುದು ಎಂದು ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ ಗಿಲ್ಲಿ, ಹಾಗೇನು ಇಲ್ಲ ಅಣ್ಣ, ನನಗೆ ಅಶ್ವಿನಿ ಅವರೆಂದರೆ ಇಷ್ಟ ಎಂದು ಮತ್ತೆ ಹೇಳಿದರು. ಗಿಲ್ಲಿಯ ಮಾತಿಗೆ ಇಡೀ ಮನೆಯೇ ನಕ್ಕಿತು, ಸ್ವತಃ ಅಶ್ವಿನಿ ಅವರಿಗೂ ಸಹ ನಗು ತಡೆದುಕೊಳ್ಳಲು ಆಗಲಿಲ್ಲ. ನಿನ್ನೆಯ ಎಪಿಸೋಡ್ನಲ್ಲೇ, ಗಿಲ್ಲಿಯನ್ನು ಈ ಮನೆಯಲ್ಲಿ ಯಾರು ಲೀಡರ್ ಯಾರು ಫಾಲೋವರ್ ಎಂದು ಕೇಳಿದಾಗಲೂ ಸಹ ಗಿಲ್ಲಿ, ಅಶ್ವಿನಿ ಅವರಲ್ಲಿ ಲೀಡರ್ ಗುಣಗಳು ಇವೆ ಎಂದಿದ್ದರು. ಜಾನ್ವಿಯನ್ನು ಫಾಲೋವರ್ ಎಂದಿದ್ದರು.
ಅಶ್ವಿನಿ ಅವರಿಗೆ ಈ ವಾರ ಗಿಲ್ಲಿ ಬಹಳ ಕಾಟ ಕೊಟ್ಟಿದ್ದಾನೆ. ಇಬ್ಬರೂ ಸಹ ಉಸ್ತುವಾರಿಗಳಾಗಿದ್ದಾಗ ಬಹಳ ಕಿತ್ತಾಡಿದ್ದಾರೆ. ಪರಸ್ಪರ ನಿಂದಿಸಿಕೊಂಡಿದ್ದಾರೆ. ಆದರೆ ವಾರಾಂತ್ಯದಲ್ಲಿ ಗಿಲ್ಲಿ, ಅಶ್ವಿನಿ ಅವರೆಡೆಗೆ ಸ್ನೇಹದ ಹಸ್ತ ಚಾಚಿದಂತಿದೆ. ವಾರದ ಮಧ್ಯ ಭಾಗದಲ್ಲಿ ಒಮ್ಮೆ ಗಿಲ್ಲಿ, ಅಶ್ವಿನಿ ಬಳಿ ಕ್ಷಮೆ ಕೇಳಿದ ಘಟನೆಯೂ ಸಹ ನಡೆಯಿತು. ಇನ್ನು ಮುಂದಾದರೂ ಈ ಇಬ್ಬರ ನಡುವಿನ ದ್ವೇಷ ಕಡಿಮೆ ಆಗುತ್ತದೆಯಾ ಕಾದು ನೋಡಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




