ಗಿಲ್ಲಿ ಇಟ್ಟ ನಂಬಿಕೆಯನ್ನು ಸಲುಗೆ ಎಂದುಕೊಂಡ ಕಾವ್ಯ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ನಡುವೆ ಒಳ್ಳೆಯ ಗೆಳೆತನವಿದೆ. ಗಿಲ್ಲಿ, ಕಾವ್ಯಾ ಬಗ್ಗೆ ಆಗಾಗ್ಗೆ ಕಾಲೆಳೆಯುತ್ತಿರುತ್ತಾನೆ, ಫ್ಲರ್ಟ್ ಮಾಡುತ್ತಿರುತ್ತಾನೆ ಆದರೂ ಸಹ ಅದೆಲ್ಲ ತಮಾಷೆಗಷ್ಟೆ. ಇಬ್ಬರು ಒಳ್ಳೆಯ ಗೆಳೆಯರೆ. ಆದರೆ ಇದೀಗ ಗಿಲ್ಲಿ, ಕಾವ್ಯಾ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾವ್ಯಾ, ಸಲುಗೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡರೇ ಎಂಬ ಅನುಮಾನ ಮೂಡಿದೆ.

ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಅವರದ್ದು ಆತ್ಮೀಯ ಗೆಳೆತನ. ಗಿಲ್ಲಿ, ಕಾವ್ಯಾರನ್ನು ಆಗಾಗ್ಗೆ ಕಾಲೆಳೆಯುತ್ತಾನೆ, ಗೋಳು ಹೊಯ್ದುಕೊಳ್ಳುತ್ತಾನೆ ಹಾಗಿದ್ದರೂ ಸಹ ಇವರ ಆತ್ಮೀಯತೆ ಮಿತಿಯಲ್ಲೇ ಇದೆ. ಕಾವ್ಯಾ ಸಹ ಗಿಲ್ಲಿ ಹೇಳಿದ್ದಕ್ಕೆಲ್ಲ ಸೊಪ್ಪು ಹಾಕಲ್ಲ, ಗಿಲ್ಲಿಯನ್ನು ಬೈಯ್ಯುತ್ತಾ, ಅವಕಾಶ ಸಿಕ್ಕಾಗ ಗಿಲ್ಲಿಗೆ ಬುದ್ಧಿವಾದ ಹೇಳುತ್ತಾ ಒಟ್ಟಿನಲ್ಲಿ ಒಂದು ಒಳ್ಳೆಯ ಗೆಳೆತನವನ್ನು ಮೇಂಟೇನ್ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಗಿಲ್ಲಿ ಬಗ್ಗೆ ಕಾವ್ಯಾ ತಪ್ಪು ತಿಳಿದುಕೊಂಡಿದ್ದರೇ?
ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಪ್ರಶ್ನೋತ್ತರ ಆಟವನ್ನು ಆಡಿಸುತ್ತಾರೆ. ಸುದೀಪ್ ಕೇಳುವ ಪ್ರಶ್ನೆಗೆ ಸ್ಪರ್ಧಿಗಳು ಎಸ್ ಅಥವಾ ನೋ ಎಂದು ಬೋರ್ಡ್ ತೋರಿಸುವ ಮೂಲಕ ಉತ್ತರಿಸಬೇಕು, ಸುದೀಪ್ ವಿವರಣೆ ಕೇಳಿದಾಗ ಅದಕ್ಕೆ ವಿವರಣೆ ನೀಡಬೇಕು ಇದು ನಿಯಮ. ಅದರಂತೆ ಸುದೀಪ್ ಇಂದು ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸ್ಪರ್ಧಿಗಳು ಉತ್ತರ ಸಹ ನೀಡಿದರು.
ಅದರಂತೆ ಸುದೀಪ್ ಅವರು ‘ಗಿಲ್ಲಿ, ಕಾವ್ಯಾ ಅವರನ್ನು ಸಲುಗೆಯಾಗಿ ತೆಗೆದುಕೊಂಡಿದ್ದಾರೆ’ ಎಂಬ ಹೇಳಿಕೆ ನೀಡಿದರು. ಅದಕ್ಕೆ ಕಾವ್ಯಾ ಸೇರಿದಂತೆ ಹಲವರು ಹೌದು ಎಂಬ ಉತ್ತರ ನೀಡಿದರು. ಕಾವ್ಯಾ ಸಹ ಹೌದು ಎಂದರು. ಅದೇಕೆಂದು ಸುದೀಪ್ ಕೇಳಿದಾಗ, ಉತ್ತರಿಸಿದ ಕಾವ್ಯಾ, ‘ಹಲವು ಬಾರಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡಿದ್ದಾನೆ ಗಿಲ್ಲಿ. ಕಳೆದ ಟಾಸ್ಕ್ ಒಂದರಲ್ಲಿ ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ, ನಾನು ಹೋಗಿ ಯಾರ್ಯಾರು ಆಡುತ್ತಿದ್ದಾರೆ ಎಂದು ಕೇಳಿದೆ ಆಗ ಆತ ನನಗೆ ಸರಿಯಾಗಿ ಉತ್ತರಿಸಲಿಲ್ಲ, ನಾನು ಹಲವು ಬಾರಿ ಗಂಭೀರವಾಗಿ ಕೆಲವು ಬುದ್ಧಿವಾದ ಹೇಳುತ್ತೇನೆ ಆಗಲೂ ಸಹ ಅದರ ಬಗ್ಗೆ ಗಮನವಹಿಸಲ್ಲ’ ಎಂದಿದ್ದಾರೆ ಕಾವ್ಯಾ.
ಇದನ್ನೂ ಓದಿ:ಅಶ್ವಿನಿ ಬಗ್ಗೆ ಗಿಲ್ಲಿ ಆಡಿದ ಮಾತು ಕೇಳಿ ಕುಸಿದೇ ಬಿಟ್ಟ ಕಿಚ್ಚ ಸುದೀಪ್
ಆದರೆ ಕಾವ್ಯಾರಿಗೆ ಪ್ರತ್ಯುತ್ತರ ನೀಡಿದ ಗಿಲ್ಲಿ, ‘ನಾನು ಕಾವ್ಯಾ ಮೇಲೆ ನಂಬಿಕೆ ಇಟ್ಟಿದ್ದೇನೆ ಆದರೆ ಅದನ್ನು ಅವರು ಸಲುಗೆ ಎಂದುಕೊಂಡಿದ್ದಾರೆ. ಟಾಸ್ಕ್ನಲ್ಲಿ ಕಾವ್ಯಾ ಅವರನ್ನು ಆಡಿಸಬೇಕು ಎಂದು ನಾನು ಮೊದಲೇ ನಿಶ್ಚಯಿಸಿದ್ದೆ, ಕಾವ್ಯಾ ಬಂದು ಯಾರನ್ನು ಆಡಿಸುತ್ತೀಯ ಎಂದಾಗ ನನ್ನ ಜೊತೆಗೆ ಯಾರನ್ನು ಆಡಿಸುತ್ತಿದ್ದೀಯ ಎಂದು ಕಾವ್ಯಾ ಕೇಳುತ್ತಿದ್ದಾಳೆ ಎಂದು ನಾನು ಅಂದುಕೊಂಡೆ, ಆಗ ನಾನು ಯೋಚನೆ ಮಾಡುತ್ತಿದ್ದೆ ಅದಕ್ಕೆ ಪ್ರತಿಕ್ರಿಯೆ ಸರಿಯಾಗಿ ನೀಡಲಿಲ್ಲ. ಆದರೆ ಅದನ್ನು ಕಾವ್ಯಾ ತಪ್ಪಾಗಿ ಅರ್ಥ ಮಾಡಿಕೊಂಡಳು ಎಂದರು. ಮುಂದುವರೆದು, ‘ಕಾವ್ಯಾ ಬಹಳ ವಿಷಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ಬುದ್ಧಿವಾದ ಹೇಳುತ್ತಾರೆ, ಅದನ್ನು ನಾನು ಗಮನ ಇಟ್ಟು ಕೇಳಿಸಿಕೊಳ್ಳುತ್ತೇನೆ’ ಎಂದರು.
ಅಲ್ಲಿಗೆ, ಗಿಲ್ಲಿ, ಕಾವ್ಯಾ ಮೇಲೆ ನಂಬಿಕೆ ಇಟ್ಟಿದ್ದ, ಆದರೆ ಅದನ್ನು ಸಲುಗೆ ಎಂದು ಕಾವ್ಯಾ ತಪ್ಪು ತಿಳಿದುಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 pm, Sun, 23 November 25




