80 ಸಾವಿರ ರೂಪಾಯಿ ಎಂದು ಹೇಳಿಕೊಳ್ಳೋ ಸತೀಶ್ ಶರ್ಟ್ನ ನಿಜವಾದ ಬೆಲೆ ಇಷ್ಟೇನಾ?
ಸತೀಶ್ ಅವರು ಡಾಗ್ ಬ್ರೀಡರ್. ಅವರಿಗೆ ಡಾಗ್ ಸತೀಶ್ ಎಂದರೆ ಕೋಪ ಬರುತ್ತದೆ. ಡಾಗ್ ಬ್ರೀಡರ್ ಸತೀಶ್ ಎಂಬುದು ಸೂಕ್ತ ಪದ ಎಂಬುದು ಅವರ ಅಭಿಪ್ರಾಯ. ಅವರು ಸಂದರ್ಶನ ಕೊಡದೆ ಇರುವ ಮಾಧ್ಯಮಗಳಿಲ್ಲ. ಅವರು ಟ್ರೋಲ್ ಆಗುತ್ತೇನೆ ಎಂಬ ವಿಷಯ ಗೊತ್ತಿದ್ದೂ ಸಂದರ್ಶನ ನೀಡುತ್ತಾರೆ. ಅವರು ತಮ್ಮ ಶರ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.

ಸತೀಶ್ ಅವರು ಬಿಗ್ ಬಾಸ್ (Bigg Boss) ಮನೆಗೆ ತೆರಳಿ ಜನಪ್ರಿಯತೆ ಪಡೆಯಲು ನೋಡಿದರು. ಆದರೆ, ಅವರು ಹೆಚ್ಚು ದಿನ ಇರೋಕೆ ಆಗಿಲ್ಲ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ಅವರು ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ತಮ್ಮ ಶರ್ಟ್ನ ಬೆಲೆ ಬಗ್ಗೆ, ಐಷಾರಾಮಿ ಜೀವನದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಅವರು ಸಂದರ್ಶನ ಒಂದರಲ್ಲಿ ಇದು 80 ಸಾವಿರ ರೂಪಾಯಿ ಶರ್ಟ್ ಎಂದು ಹೇಳಿಕೊಂಡಿದ್ದರು. ಇದರ ಅಸಲಿ ಬೆಲೆಯನ್ನು ನೆಟ್ಟಿಗರು ಹುಡುಕಿ ತೆಗೆದಿದ್ದಾರೆ.
ಸತೀಶ್ ಅವರು ಡಾಗ್ ಬ್ರೀಡರ್. ಅವರಿಗೆ ಡಾಗ್ ಸತೀಶ್ ಎಂದರೆ ಕೋಪ ಬರುತ್ತದೆ. ಡಾಗ್ ಬ್ರೀಡರ್ ಸತೀಶ್ ಎಂಬುದು ಸೂಕ್ತ ಪದ ಎಂಬುದು ಅವರ ಅಭಿಪ್ರಾಯ. ಅವರು ಸಂದರ್ಶನ ಕೊಡದೆ ಇರುವ ಮಾಧ್ಯಮಗಳಿಲ್ಲ. ಅವರು ಟ್ರೋಲ್ ಆಗುತ್ತೇನೆ ಎಂಬ ವಿಷಯ ಗೊತ್ತಿದ್ದೂ ಸಂದರ್ಶನ ನೀಡುತ್ತಾರೆ. ಅವರು ತಮ್ಮ ಶರ್ಟ್ ಬಗ್ಗೆ ಹೇಳಿಕೊಂಡಿದ್ದರು. ಇದರ ಅಸಲಿ ಬೆಲೆ ಈಗ ಗೊತ್ತಾಗಿದೆ.
View this post on Instagram
‘ಇದು 80 ಸಾವಿರ ರೂಪಾಯಿ ಶರ್ಟ್’ ಎಂದು ಹೇಳಿಕೊಂಡಿದ್ದರು ಸತೀಶ್. ಅಲ್ಲದೆ, ಇದು ನನ್ನ ದುಬಾರಿ ಶರ್ಟ್ ಎಂಬುದನ್ನು ಅವರು ಒತ್ತಿ ಹೇಳಿದ್ದರು. ಆದರೆ, ಇದರ ಅಸಲಿ ಬೆಲೆ 3,400 ರೂಪಾಯಿ ಮಾತ್ರ. ನೆಟ್ಟಿಗರು ಇದನ್ನು ಎತ್ತಿ ತೋರಿಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಕಾರಣ ಆಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಡ್ರಾಮಾಗಳನ್ನು ಬಿಚ್ಚಿಟ್ಟ ಸತೀಶ್
ಸತೀಶ್ ಅವರು ಶ್ವಾನಗಳನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡೋದಾಗಿ ಹೇಳಿಕೊಳ್ಳುತ್ತಾರೆ. ಅವರಿಗೆ ಬೇರೆ ರಾಜ್ಯಗಳಲ್ಲಿ ಸಾಕಷ್ಟು ಬೇಡಿಕೆ ಇದೆಯಂತೆ. ಇದೆಲ್ಲವೂ ಬಡಾಯಿ ಕೊಚ್ಚಿಕೊಳ್ಳೋ ಪರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದನ್ನು ಅವರು ಒಪ್ಪುವವರಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




