AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರಿಗಮಪ 2025’ ಫಿನಾಲೆಯಲ್ಲಿ ಕನ್ನಡದ ಶಿವಾನಿಗೆ ಸಿಗಲಿಲ್ಲ ಗೆಲುವು

ಸರಿಗಮಪ ತಮಿಳು 2025 ಗ್ರ್ಯಾಂಡ್ ಫಿನಾಲೆಯಲ್ಲಿ ಕನ್ನಡದ ಸ್ಪರ್ಧಿ ಶಿವಾನಿ ಗೆಲುವು ಸಾಧಿಸಲಿಲ್ಲ. ನವೆಂಬರ್ 23ರಂದು ನಡೆದ ಫಿನಾಲೆಯಲ್ಲಿ ಸುಶಾಂತಿಕಾ ವಿನ್ನರ್ ಆಗಿ ಹೊರಹೊಮ್ಮಿದರು. ಶಿವಾನಿ ಅದ್ಭುತ ಪ್ರದರ್ಶನ ನೀಡಿದರೂ ಪ್ರಶಸ್ತಿ ಕೈ ತಪ್ಪಿತು. ಸುಶಾಂತಿಕಾ ಟ್ರೋಫಿ ಹಾಗೂ 15 ಲಕ್ಷ ನಗದು ಪಡೆದರು.

‘ಸರಿಗಮಪ 2025’ ಫಿನಾಲೆಯಲ್ಲಿ ಕನ್ನಡದ ಶಿವಾನಿಗೆ ಸಿಗಲಿಲ್ಲ ಗೆಲುವು
ಶಿವಾನಿ
ರಾಜೇಶ್ ದುಗ್ಗುಮನೆ
|

Updated on:Nov 25, 2025 | 1:03 PM

Share

ತಮಿಳಿನ ‘ಸರಿಗಮಪ 2025’ ಗ್ರ್ಯಾಂಡ್ ಫಿನಾಲೆ ನವೆಂಬರ್ 23ರಂದು ನಡೆದಿದೆ. ಜೀ ತಮಿಳಿನಲ್ಲಿ ಇದು ಪ್ರಸಾರ ಕಂಡಿದೆ. ಆರು ಜನರು ಫಿನಾಲೆಯಲ್ಲಿ ಇದ್ದರು. ಇದರಲ್ಲಿ ಕನ್ನಡದ ಶಿವಾನಿ ಕೂಡ ಇದ್ದರು. ಅವರ ಅದ್ಭುತ ಕಂಠಕ್ಕೆ ಜಡ್ಜ್​ಗಳು ಹಾಗೂ ವೀಕ್ಷಕರು ತಲೆಬಾಗಿದ್ದರು. ಕರ್ನಾಟಕದವರಾದ ಶಿವಾನಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಸುಶಾಂತಿಕಾ ಅವರು ಈ ಅವಾರ್ಡ್ ಗೆದ್ದಿದ್ದಾರೆ. ಆಕರ್ಷಕ ಟ್ರೋಫಿ ಜೊತೆ ವಿನ್ನಿಂಗ್ ಅಮೌಂಟ್ ಪಡೆದುಕೊಂಡಿದ್ದಾರೆ.

ಸುಶಾಂತಿಕಾ ಅವರು ವಿನ್ನರ್ ಎಂದು ಜಡ್ಜ್​ಗಳು ಘೋಷಣೆ ಮಾಡಿದರು. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಶಿವಾನಿ ಅವರು ಒಳ್ಳೆಯ ರೀತಿಯಲ್ಲಿ ಸ್ಪರ್ಧೆ ನೀಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಶ್ರೀಹರಿ ರವೀಂದ್ರನ್, ಸುಶಾಂತಿಕಾ, ಚಿನ್ನು ಸೇದಮಿಲನ್, ಸಪೇಸನ್, ಪವಿತ್ರಾ ಹಾಗೂ ಶಿವಾನಿ ಫಿನಾಲೆಯಲ್ಲಿ ಇದ್ದರು. ಸಪೇಸನ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಚಿನ್ನು ಎರಡನೇ ರನ್ನರ್​ ಅಪ್​ ಆದರು.

ವಿನ್ನರ್ ಸುಶಾಂತಿಕಾ ಅವರಿಗೆ 15 ಲಕ್ಷ ರೂಪಾಯಿ ವಿನ್ನಿಂಗ್ ಅಮೌಂಟ್ ಸಿಕ್ಕಿದೆ. ಎಂಪಿ ಡೆವಲಪರ್ಸ್ ಅವರು ಮನೆಯನ್ನು ನೀಡಿದ್ದಾರೆ. ಇನ್ನು, ಈ ಗೆಲುವಿನಿಂದ ವಿನ್ನರ್​ಗೆ ಸಾಕಷ್ಟು ಆಲ್ಬಂ ಡೀಲ್, ಸಿಂಗಿಂಗ್ ಆಫರ್​ಗಳು ಬರಲಿವೆ. ಈ ವರ್ಷ ಮೇ 24ರಂದು ಶೋ ಆರಂಭ ಆಯಿತು. ಹಲವು ತಿಂಗಳ ಕಾಲ ಶೋ  ಪ್ರಸಾರ ಕಂಡಿದೆ. ಶಿವಾನಿ ಅವರು ಅದ್ಭುತವಾಗಿ ಸ್ಪರ್ಧೆ ನೀಡಿದ್ದಾರೆ.

ಇದನ್ನೂ ಓದಿ: ತಮಿಳು ಸರಿಗಮಪದಲ್ಲಿ ರಜನಿ ಫೇವರಿಟ್ ಹಾಡು ಹಾಡಿದ ಕನ್ನಡದ ಶಿವಾನಿ; ಜಡ್ಜ್​ಗಳು ಶಾಕ್

ಸರಿಗಮಪದಲ್ಲಿ ಈ ಬಾರಿ ಕನ್ನಡದ ವಿಜಯ್ ಪ್ರಕಾಶ್ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದರು. ಇನ್ನು, ಶ್ವೇತಾ ಮೋಹನ್, ಎಸ್​ಪಿ ಚರಣ್, ಶ್ರೀನಿವಾಸ್, ಕಾರ್ತಿಕ್ ಮೊದಲಾದವರು ಜಡ್ಜ್ ಆಗಿದ್ದರು.

ಶಿವಾನಿ ಅವರು ಈ ಮೊದಲು ಕನ್ನಡದಲ್ಲಿ ಸ್ಪರ್ಧೆ ಮಾಡಿದ್ದರು. ಆಗಲೂ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಆದರೆ, ಈಗ ಅವರು ಪರಭಾಷೆಗೆ ತೆರಳಿ ತಮ್ಮ ತನವನ್ನು ಸಾಬೀತು ಮಾಡಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:17 am, Mon, 24 November 25