ಒಂದು ವಾರ ಬಿಗ್ ಬಾಸ್ ಮನೆಗೆ ಬರ್ತಾರಾ ಉಗ್ರಂ ಮಂಜು? ಒಂದು ವಾರ ಅತಿಥಿ
ಉಗ್ರಂ ಮಂಜು ಅವರು ಬಿಗ್ ಬಾಸ್ ಕನ್ನಡ 12 ಮನೆಗೆ ಅತಿಥಿಯಾಗಿ ಪ್ರವೇಶಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಅವರ ಭಾವಿ ಪತ್ನಿ ಸಂಧ್ಯಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದಕ್ಕೆ ಕಾರಣ. ಆದರೆ, ಕೆಲವರು ಮಂಜು ಬ್ಯಾಚುಲರ್ ಪಾರ್ಟಿಗಾಗಿ ವಿದೇಶಕ್ಕೆ ಹೋಗಿದ್ದಾರೆ ಎಂದು ಊಹಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಯಾರೂ ನಿರೀಕ್ಷಿಸದ ಅನೇಕ ಘಟನೆಗಳು ನಡೆಯುತ್ತಿವೆ. ‘ಎಕ್ಸ್ಪೆಕ್ಟ್ ದಿ ಅನ್ ಎಕ್ಸ್ಪೆಕ್ಟೆಡ್’ ಅನ್ನೋ ಥೀಮ್ನಲ್ಲೇ ಈ ಬಾರಿಯ ಬಿಗ್ ಬಾಸ್ ಬಂದಿದೆ. ಈಗ ದೊಡ್ಡ ಟ್ವಿಸ್ಟ್ ಒಂದನ್ನು ನೀಡಲು ಬಿಗ್ ಬಾಸ್ ರೆಡಿ ಆದರೇ ಎನ್ನುವ ಪ್ರಶ್ನೆ ಮೂಡಿದೆ. ಕಳೆದ ಸೀಸನ್ನಲ್ಲಿ ಸಖತ್ ಸದ್ದು ಮಾಡಿದ್ದ ಉಗ್ರಂ ಮಂಜು ಅವರು ಒಂದು ವಾರ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ತೆರಳಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಅವರ ಭಾವಿ ಪತ್ನಿ ಹಾಕಿರೋ ಇನ್‌ಸ್ಟಾಗ್ರಾಮ್ ಸ್ಟೇಟಸ್ ಇದಕ್ಕೆ ಕಾರಣ.
ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಅತಿಥಿಯಾಗಿ ತೆರಳಿದ ಉದಾಹರಣೆ ಸಾಕಷ್ಟಿದೆ. ಈಗ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ಸ್ಪರ್ಧೆ ಹೆಚ್ಚಿಸೋ ಉದ್ದೇಶದಿಂದ ಮಂಜು ಅವರನ್ನು ಕಳುಹಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಅವರು ತೆರಳಿದರೆ ಆಟದ ಮಜ ಮತ್ತಷ್ಟು ಹೆಚ್ಚಲಿದೆ.
View this post on Instagram
ಉಗ್ರಂ ಮಂಜು ಅವರ ಪತ್ನಿ ಸಂಧ್ಯಾ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಅವರು ‘ಒಂದು ವಾರ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಚೆನ್ನಾಗಿ ಆಟ ಆಡಿ’ ಎಂದು ಬರೆದುಕೊಂಡಿದ್ದರು. ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.. ಈ ಪೋಸ್ಟ್ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನು ಮಂಜು ಅವರು ಪೋಸ್ಟ್ ಒಂದನ್ನು ಹಾಕಿದ್ದು, ‘ಬ್ಯಾಚುಲರ್ ಪಾರ್ಟಿಯಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಧಾರಾವಾಹಿ ಆಫರ್ ಪಡೆದ ನಟಿ ಮಂಜು ಭಾಷಿಣಿ
ಉಗ್ರಂ ಮಂಜು ಅವರು ಈ ತಿಂಗಳ ಆರಂಭದಲ್ಲಿ ಸಂಧ್ಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಟ್ರಾನ್ಸ್ಪ್ಲ್ಯಾಂಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಉಗ್ರಂ ಮಂಜು ಅವರು ಬಿಗ್ ಬಾಸ್ಗೆ ಬಂದಿದ್ದರು. ಈ ವೇಳೆ ವಿವಾಹ ಆಗಿಲ್ಲ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಅವರ ತಂದೆಗೂ ಮಂಜು ಮದುವೆ ಆಗಬೇಕು ಎಂಬ ಆಸೆ ಇತ್ತು. ಕೊನೆಗೂ ಆ ಘಳಿಗೆ ಕೂಡಿ ಬಂದಿದೆ. ಮುಂದಿನ ವರ್ಷ ಇವರ ವಿವಾಹ ನೆರವೇರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Tue, 25 November 25




