ಬಿಗ್ ಬಾಸ್ ನಾಮಿನೇಷನ್: ಈ ವಾರ 7 ಜನರಿಗೆ ಶುರುವಾಗಿದೆ ಎಲಿಮಿನೇಷನ್ ಭಯ
ಈ ವಾರ ಒಟ್ಟು 7 ಸ್ಪರ್ಧಿಗಳನ್ನು ‘ಬಿಗ್ ಬಾಸ್ ಕನ್ನಡ 12’ ಆಟದಲ್ಲಿ ನಾಮಿನೇಟ್ ಮಾಡಲಾಗಿದೆ. ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾಹ್ನವಿ, ಕಾವ್ಯಾ, ಗಿಲ್ಲಿ ನಟ, ರಘು ನಾಮಿನೇಟ್ ಆಗಿದ್ದಾರೆ. ಇದರ ಜೊತೆಗೆ ಸೀಸನ್ 11ರ ಸ್ಪರ್ಧಿಗಳು ಕೂಡ ಈ ವಾರ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಕಳೆದ ವಾರ ರಿಷಾ ಅವರು ಎಲಿಮಿನೇಟ್ ಆದರು. ಈ ವಾರದ ನಾಮಿನೇಷನ್ (Nomination) ಪ್ರಕ್ರಿಯೆ ಮುಗಿದಿದೆ. ಧ್ರುವಂತ್, ಅಶ್ವಿನಿ ಗೌಡ, ಜಾಹ್ನವಿ, ಮಾಳು ನಿಪನಾಳ, ಕಾವ್ಯಾ, ಗಿಲ್ಲಿ ನಟ (Gilli Nata), ರಘು ಅವರು ನಾಮಿನೇಟ್ ಆಗಿದ್ದಾರೆ. ಹಲವು ಕಾರಣಗಳನ್ನು ನೀಡಿ ಈ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ. ಈ 7 ಜನರ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಜನರಿಂದ ಕಡಿಮೆ ವೋಟ್ ಪಡೆಯುವ ಸ್ಪರ್ಧಿಗೆ ಗೇಟ್ ಪಾಸ್ ನೀಡಲಾಗುತ್ತದೆ. ಬಿಗ್ ಬಾಸ್ ಆಟದಲ್ಲಿ 58 ದಿನಗಳು ಕಳೆದಿದ್ದು, ಆಟದಲ್ಲಿ ಪೈಪೋಟಿ ಜಾಸ್ತಿ ಆಗಿದೆ.
ಧ್ರುವಂತ್ ಅವರು ಬಿಗ್ ಬಾಸ್ ಮನೆಯಲ್ಲಿ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಆ ಕಾರಣದಿಂದ ಅವರು ನಾಮಿನೇಟ್ ಆಗಿದ್ದಾರೆ. ಕಳೆದ ವಾರವೆಲ್ಲ ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡರು. ಆದ್ದರಿಂದ ಹಲವು ಕಾರಣಗಳನ್ನು ನೀಡಿ ಅವರನ್ನು ಕೂಡ ನಾಮಿನೇಟ್ ಮಾಡಲಾಗಿದೆ. ಕ್ಯಾಪ್ಟನ್ ಅಭಿಷೇಕ್ ಅವರಿಂದ ರಘು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ ಆಟದಲ್ಲಿ ಸಿಕ್ಕಾಪಟ್ಟೆ ಆತ್ವವಿಶ್ವಾಸ ಇದೆ. ಕಾಮಿಡಿ ಮೂಲಕ ವೀಕ್ಷಕರ ಮನ ಗೆಲ್ಲುತ್ತಿರುವ ಅವರಿಗೆ ನಾಮಿನೇಷನ್ ಭಯ ಕಾಡುತ್ತಿಲ್ಲ. ಇತರೆ ಸ್ಪರ್ಧಿಗಳು ನಾಮಿನೇಟ್ ಆದಾಗ ಬೇಸರ ವ್ಯಕ್ತಪಡಿಸಿದರು. ಆದರೆ ಗಿಲ್ಲಿ ನಟ ಅವರು ನಗುನಗುತ್ತಲೇ ಈ ಸವಾಲನ್ನು ಸ್ವೀಕರಿಸಿದರು. ಅವರ ಜೊತೆ ಕಾವ್ಯ ಕೂಡ ನಾಮಿನೇಟ್ ಆಗಿದ್ದಾರೆ.
ಮಾಳು ನಿಪನಾಳ ಅವರು ಕ್ಯಾಪ್ಟನ್ ಆಗಿದ್ದಾಗ ಮಾತ್ರ ಆ್ಯಕ್ಟೀವ್ ಆಗಿದ್ದರು. ಇನ್ನುಳಿದ ಸಮಯದಲ್ಲಿ ಅವರು ಎಂದಿನಂತೆ ಸೈಲೆಂಟ್ ಆಗಿದ್ದಾರೆ. ಹಾಗಾಗಿ ಅವರನ್ನು ಕೂಡ ನಾಮಿನೇಟ್ ಮಾಡಲಾಗಿದೆ. ಇಷ್ಟು ಜನರ ಪೈಕಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಅಶ್ವಿನಿ ಗೌಡ ಅವರು ಆಟದ ಶೈಲಿ ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಏಕವಚನದಲ್ಲೇ ಮಾತನಾಡಿ ಅಶ್ವಿನಿ ಗೌಡಗೆ ಪಾಠ ಕಲಿಸಿದ ಗಿಲ್ಲಿ ನಟ
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ಪೆಷಲ್ ಟಾಸ್ಕ್ ನೀಡಲಾಗಿದೆ. ಬಿಬಿ ಪ್ಯಾಲೇಸ್ ಹೋಟೆಲ್ ರೀತಿ ಬಿಗ್ ಬಾಸ್ ಮನೆ ಬದಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳಾದ ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಉಗ್ರಂ ಮಂಜು, ರಜತ್ ಅವರು ಅತಿಥಿಗಳಾಗಿ ಬಂದಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು 12ನೇ ಸೀಸನ್ ಸ್ಪರ್ಧಿಗಳ ಟಾಸ್ಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




