AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿಯಿಂದ ಇರಿಟೇಷನ್​ಗೆ ಒಳಗಾದ ಮಂಜು, ರಜತ್; ಕಿವಿಮಾತು ಹೇಳಿದ ಉಗ್ರಂ

ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದ ಉಗ್ರಂ ಮಂಜು, ರಜತ್ ಸೇರಿ ಹಲವರಿಗೆ ಗಿಲ್ಲಿ ತಮ್ಮ ವರ್ತನೆಯಿಂದ ಕಿರಿಕಿರಿ ಉಂಟುಮಾಡಿದ್ದಾರೆ. ಮಂಜು ಮದುವೆ ಹಾಗೂ ರಜತ್ ಊಟದ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಅತಿಥಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಮಂಜು ಮತ್ತು ರಜತ್ ಗಿಲ್ಲಿಗೆ ಬುದ್ಧಿವಾದ ಹೇಳಿದ್ದಾರೆ.

ಗಿಲ್ಲಿಯಿಂದ ಇರಿಟೇಷನ್​ಗೆ ಒಳಗಾದ ಮಂಜು, ರಜತ್; ಕಿವಿಮಾತು ಹೇಳಿದ ಉಗ್ರಂ
ಮಂಜು
ರಾಜೇಶ್ ದುಗ್ಗುಮನೆ
|

Updated on:Nov 26, 2025 | 7:50 AM

Share

ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳಾಗಿ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತ್ರಿವಿಕ್ರಂ ಬಂದಿದ್ದಾರೆ. ಇವರೆಲ್ಲರಿಗೂ ಮನೆಯವರಿಂದ ಒಳ್ಳೆಯ ಸ್ವಾಗತ ಸಿಕ್ಕಿದೆ. ಆದರೆ, ಗಿಲ್ಲಿ (Gilli) ಮಾತ್ರ ಇವರಿಗೆ ಕ್ಯಾರೇ ಎನ್ನುತ್ತಿಲ್ಲ. ಇದು ಬಿಗ್ ಬಾಸ್ ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ಮಂಜು, ರಜತ್ ಮೊದಲಾದವರು ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಗಿಲ್ಲಿ ಅವರು ಬದಲಾಗುವುದು ಅನುಮಾನ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಗಿಲ್ಲಿ ಅವರು ಯಾರೇ ಬಂದರು ಕೇರ್ ಮಾಡೋದಿಲ್ಲ. ಅವರು ತಮ್ಮ ಆಟವನ್ನು ತಾವು ಮುಂದುವರಿಸುತ್ತಾರೆ. ಕೆಲವೊಮ್ಮೆ ಅವರ ಮಾತು ಅತಿ ಎನಿಸಿದ್ದೂ ಇದೆ. ಈಗ ನವೆಂಬರ್ 25ರ ಎಪಿಸೋಡ್​ನಲ್ಲಿ ಹಾಗೆಯೇ ಆಗಿದೆ. ಗಿಲ್ಲಿ ಅವರು ಬಂದ ಅತಿಥಿಗಳಿಗೆ ಕಿರಿಕಿರಿ ಮಾಡಿದ್ದಾರೆ. ಖುಷಿಯಿಂದ ಸಮಯ ಕಳೆಯಲು ಬಂದ ಅತಿಥಿಗಳು ಅಸಮಧಾನಗೊಂಡಿದ್ದಾರೆ. ರಜತ್ ಹಾಗೂ ಮಂಜು ಪಿತ್ತ ನೆತ್ತಿಗೇರಿದೆ.

ಮಂಜು ಅವರ ಮದುವೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇದಕ್ಕೆ ಗಿಲ್ಲಿ, ‘ಎರಡನೆಯದೋ ಅಥವಾ ಮೂರನೆಯದೋ’ ಎಂದು ಪ್ರಶ್ನೆ ಮಾಡಿದರು. ರಜತ್ ಬಳಿ, ‘ನೀವು ಬಿಟ್ಟಿ ಊಟ ಮಾಡೋಕೆ ಬಂದಿದೀರಾ’ ಎಂದರು. ಈ ಎಲ್ಲಾ ವಿಚಾರಗಳು ಅತಿಥಿಗಳ ಪಿತ್ತ ನೆತ್ತಿಗೇರಿಸಿದೆ. ರಜತ್ ಹಾಗೂ ಮಂಜು ಕರೆದು ಕಿವಿಮಾತು ಹೇಳಿದ್ದಾರೆ.

‘ಬಿಟ್ಟಿ ಊಟ ಮಾಡೋಕೆ ಬಂದೆ ಅಂತೆಲ್ಲ ಹೇಳಬೇಡ. ನನಗೆ ಸಿಟ್ಟು ಬರುತ್ತದೆ. ಊಟದ ವಿಚಾರದಲ್ಲಿ ಯಾರೂ ಮಾತನಾಡಬಾರದು. ಮಂಜುಗೆ ಎಷ್ಟನೇ ಮದುವೆ ಎಂದೆಲ್ಲ ಕೇಳ್ತಾ ಇದೀಯಾ. ಇದು ಸರಿ ಅಲ್ಲ’ ಎಂದು ರಜತ್ ಅವರು ಗಿಲ್ಲಿಗೆ ಕಿವಿಮಾತು ಹೇಳಿದರು. ಆ ಬಳಿಕ ಮಂಜು ಅವರು ಕರೆದು, ಗಿಲ್ಲಿಗೆ ಬುದ್ಧಿವಾದ ಹೇಳಿದರು.

ಇದನ್ನೂ ಓದಿ: ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ; ನೇರವಾಗಿ ಹೇಳಿದ ಬಿಗ್ ಬಾಸ್ ಅತಿಥಿಗಳು

‘ಎಲ್ಲರ ಪೇಮೆಂಟ್ ನೀನೆ ತೆಗೆದುಕೊಳ್ತಾ ಇದೀಯಾ? ಇಲ್ಲ ತಾನೇ? ಚೆನ್ನಾಗಿ ಆಡ್ತಾ ಇದೀಯಾ. ಆದರೆ, ಅವರವರ ಸ್ಪೇಸ್​ನ ಅವರವರಿಗೆ ನೀಡಬೇಕು’ ಎಂದು ಗಿಲ್ಲಿಗೆ ಬುದ್ಧಿವಾದ ಹೇಳಿದರು. ಗಿಲ್ಲಿಯ ಆಟ ಕೆಲವರಿಗೆ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಗಿಲ್ಲಿ ಮಿತಿ ಮೀರಿ ನಡೆದುಕೊಳ್ಳುತ್ತಿದ್ದಾನೆ ಎಂದು ಅನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Wed, 26 November 25

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ