‘ಈ ಸ್ಥಿತಿ ಯಾವ ಶತ್ರುವಿಗೂ ಬೇಡ’; ಪತಿಯ ಸೋಲಿನ ಬಗ್ಗೆ ‘ಅಮೃತವರ್ಷಿಣಿ’ ರಜಿನಿ ಮಾತು
ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ ಪತಿ ಅರುಣ್ ಅಥ್ಲಿಟ್ ಹಾಗೂ ಬಾಡಿಬಿಲ್ಡರ್. ಇತ್ತೀಚೆಗೆ ಸ್ಪರ್ಧೆಯಲ್ಲಿ ಗೆಲ್ಲದಿದ್ದರೂ, ಅವರ ಶ್ರಮ ಮತ್ತು ಬದ್ಧತೆ ಮೆಚ್ಚುವಂಥದ್ದು. ರಜಿನಿ ಅವರು ಪತಿಗೆ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಲು ಪ್ರೇರೇಪಿಸಿದ್ದು, ಅವರ ಪ್ರೀತಿಯ ಸಂಬಂಧವನ್ನು ಎತ್ತಿಹಿಡಿದರು. ಪ್ರಯತ್ನ ಮುಂದುವರಿಸುವಂತೆ ಸಲಹೆ ನೀಡಿದ್ದು, ಅರುಣ್ ಅವರ ಬದ್ಧತೆಯನ್ನು ಶ್ಲಾಘಿಸಿದರು.

‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ (Rajini) ಅವರ ಪತಿ ಅರುಣ್ ಅಥ್ಲಿಟ್. ಅವರು ಬಾಡಿ ಬಿಲ್ಡರ್ ಹಾಗೂ ಜಿಮ್ ಕೋಚ್ ಕೂಡ ಹೌದು. ಇತ್ತೀಚೆಗೆ ಅವರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು. ಆದರೆ, ಇದರಲ್ಲಿ ಗೆಲುವು ಸಾಧಿಸೋಕೆ ಅವರಿಗೆ ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಅವರು ಪತಿಗೆ ಮೋಟಿವೇಟ್ ಮಾಡಿದ್ದಾರೆ. ಸೋಲು ಹಾಗೂ ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಪತಿ ಪಟ್ಟ ಕಷ್ಟ ಏನು ಎಂಬುದನ್ನು ಹೇಳಿದ್ದಾರೆ.
ರಜಿನಿ ಅವರು ಇತ್ತೀಚೆಗಷ್ಟೇ ವಿವಾಹ ಆದರು. ಅರುಣ್ ಜೊತೆ ಹಲವು ವರ್ಷಗಳಿಂದ ಅವರು ಡೇಟಿಂಗ್ ಮಾಡುತ್ತಿದ್ದರು. ಅವರು ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ರಜಿನಿ ಹಾಗೂ ಅರುಣ್ ಜೋಡಿಯನ್ನು ಫ್ಯಾನ್ಸ್ ಸಾಕಷ್ಟು ಇಷ್ಟಪಟ್ಟಿದ್ದಾರೆ. ಇವರು ವಿವಾಹ ಆದರೂ ಪರಸ್ಪರ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ರಜನಿ ಅವರ ಧಾರಾವಾಹಿ ಕೆಲಸಗಳು ಹಾಗೂ ಅರುಣ್ ಅವರ ಬಾಡಿ ಬಿಲ್ಡಿಂಗ್ ಟ್ರೇನಿಂಗ್.
ಅರುಣ್ ಇತ್ತೀಚೆಗೆ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ನಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಅವರು ಸಖತ್ ಬಾಡಿ ಟ್ರೇನ್ ಮಾಡಿದ್ದರು. ಅವರ ಕೋಚ್ ಕೂಡ ಬಾಡಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದರಂತೆ. ಆದರೆ, ಸ್ಪರ್ಧೆಯಲ್ಲಿ ಅರುಣ್ ಅವರಿಗೆ ಗೆಲುವು ಸಿಕ್ಕಿಲ್ಲ. ಈ ಬಗ್ಗೆ ರಜಿನಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
View this post on Instagram
‘ಸೋಲು ಗೆಲುವಿನ ನಡುವೆ ನಮ್ಮ ಪ್ರಯತ್ನ ನಿರಂತರ. ಅರುಣ್ಗೆ ವಿಶ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್. ಅವರಿಗೆ ಮೆಡಲ್ ಸಿಗದೆ ಇರಬಹುದು. ನಿಮ್ಮ ವಿಶ್ ಮೆಡಲ್ಗಿಂತ ಜಾಸ್ತಿ. ಉಪ್ಪು ಖಾರ ಇಲ್ಲದೆ, ಊಟ ಮಾಡಿ, ಒಂದು ವರ್ಷ ಶ್ರಮ ಹಾಕಿ ಕೊನೆಗೆ ಬರಿಗೈಯಲ್ಲಿ ನಿಲ್ಲೋದು ಯಾವ ಶತ್ರುವಿಗೂ ಬೇಡ’ ಎಂದು ರಜಿನಿ ಹೇಳಿದ್ದಾರೆ. ಸೋತರು ಪ್ರಯತ್ನ ಬಿಡಬಾರದು ಎಂದು ರಜಿನಿ ಅವರು ಒತ್ತಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯತ್ನವನ್ನು ಮುಂದುವರಿಸೋದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಮದುವೆ ಆದರೂ ಪತಿ ಅರುಣ್ನ ಭೇಟಿ ಮಾಡೋಕೆ ಆಗ್ತಿಲ್ಲ’; ‘ಅಮೃತವರ್ಷಿಣಿ’ ರಜಿನಿ
ರಜಿನಿ ಅವರು ಹಂಚಿಕೊಂಡ ವಿಡಿಯೋಗೆ ಅನೇಕರು ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಅರುಣ್ ಅವರ ಬದ್ಧತೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Wed, 26 November 25




