
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಅಶ್ವಿನಿ ಗೌಡ ಅವರು ಸುದ್ದಿಯಲ್ಲಿದ್ದಾರೆ. ಗಿಲ್ಲಿ ಹಾಗೂ ಅವರ ಮಧ್ಯೆ ಫೈಟ್ಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈಗ ಅಶ್ವಿನಿ ಗೌಡ ಅವರನ್ನು ಗಿಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅವರ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ. ಆ ಬಳಿಕ ಅಶ್ವಿನಿ ಗೌಡ ಅವರು ಸರಿಯಾಗಿ ಉತ್ತರ ಕೊಡಲು ಸಾಧ್ಯವಾಗದೇ ಸುಮ್ಮನಾಗಿದ್ದಾರೆ. ಈ ವಿಷಯ ವೀಕೆಂಡ್ನಲ್ಲಿ ಚರ್ಚೆಗೆ ಬರಬೇಕಿದೆ.
ಅಶ್ವಿನಿ ಗೌಡ ಅವರು ಯಾವಾಗಲೂ ತಮಗೆ ಗೌರವ ನೀಡಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಆದರೆ, ಅವರು ಮಾತ್ರ ಎಲ್ಲರಿಗೂ ಏಕವಚನದಲ್ಲಿ ಮಾತನಾಡುತ್ತಾರೆ. ಹೀಗಾಗಿ, ಜಗಳ ನಡೆಯುವಾಗ ಎದುರಿಗಿದ್ದವರೂ ಏಕವಚನ ಬಳಕೆ ಮಾಡುತ್ತಾರೆ. ಆಗ ಅಶ್ವಿನಿ, ‘ನನಗೆ ಗೌರವ ಸಿಗುತ್ತಿಲ್ಲ’ ಎಂಬ ಕಾರ್ಡ್ ಪ್ಲೇ ಮಾಡುತ್ತಾರೆ. ಇದು ಮೊದಲಿನಿಂದಲೂ ನಡೆದು ಬಂದಿದೆ. ಇಷ್ಟು ದಿನ ಈ ವಿಷಯ ಗೊತ್ತಿದ್ದೂ ಯಾರೂ ಹೇಳುತ್ತಿರಲಿಲ್ಲ. ಆದರೆ, ಗಿಲ್ಲಿ ಈಗ ರೆಡ್ ಹ್ಯಾಂಡ್ ಆಗಿ ಹಿಡಿದು ಅಶ್ವಿನಿಗೆ ಈ ವಿಚಾರವನ್ನು ಹೇಳಿದ್ದಾರೆ.
‘ಹೋಗಲೋ’ ಎಂದು ಅಶ್ವಿನಿ ಗೌಡ ಗಿಲ್ಲಿಗೆ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್ಲಿ, ‘ನಮ್ಮ ಬಾಯಲ್ಲೂ ಆವಾಗ ಆವಾಗ ಬರೋದು ಇದಕ್ಕೆ’ ಎಂದು ಉತ್ತರಿಸಿದರು. ಆ ಬಳಿಕ ತಿರುಗಿ ಉತ್ತರ ಕೊಡಲಾಗದೆ, ‘ನಿನಗೆ ಇಷ್ಟು ಗೌರವ ಕೊಟ್ಟಿರೋದೆ ಹೆಚ್ಚು’ ಎಂದಿದ್ದಾರೆ ಅಶ್ವಿನಿ. ವೀಕೆಂಡ್ನಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಮಸಲತ್ತು ಶುರು ಮಾಡಿದ ಸ್ಪಂದನಾ; ಏರಿದ ಏಣಿಯನ್ನೇ ಒದ್ದರಾ?
ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಗೌರವ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದು ಮೊಸಳೆ ಕಣ್ಣೀರು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸಿಂಪತಿ ಕಾರ್ಡ್ ಇದು ಎಂದು ಹೇಳಿದ್ದಾರೆ. ಸದ್ಯ ಅವರು ಊಟ ಬಿಟ್ಟು ಪ್ರತಿಭಟನೆ ಕೂಡ ಆರಂಭಿಸಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.